ನದಿಗೆ ಹಾರಿದ ಕಂಡ್ಟರ್: ನಾನು ನಿರ್ವಾಹಕನಿಗೆ ಗೆ 500 ರು ನೀಡಿದ್ದು ನಿಜ, ಪ್ರಯಾಣಿಕ ಮಹಿಳೆ

ಮಹಿಳೆಯೊಂದಿಗೆ ಚಿಲ್ಲರೆಗಾಗಿ ಜಗಳ ಮಾಡಿಕೊಂಡು ನಂತರ ಕುಮಾರಧಾರ ನದಿಗೆ ಹಾರಿ ಕೊಚ್ಚಿ ಹೋದ ಸಾರಿಗೆ ಬಸ್ ನಿರ್ವಾಹಕ ದೇವದಾಸ್...
ಕುಮಾರಧಾರ ನದಿ
ಕುಮಾರಧಾರ ನದಿ

ಮಂಗಳೂರು: ಮಹಿಳೆಯೊಂದಿಗೆ ಚಿಲ್ಲರೆಗಾಗಿ ಜಗಳ ಮಾಡಿಕೊಂಡು ನಂತರ ಕುಮಾರಧಾರ ನದಿಗೆ ಹಾರಿ ಕೊಚ್ಚಿ ಹೋದ ಸಾರಿಗೆ ಬಸ್ ನಿರ್ವಾಹಕ ದೇವದಾಸ್(48) ಶವಕ್ಕಾಗಿ ಮಂಗಳವಾರ ಕೂಡ ತೀವ್ರ ಶೋಧ ಕಾರ್ಯಾಚರಣೆ ನಡೆದಿದ್ದು ಶವ ಇನ್ನೂ ಪತ್ತೆಯಾಗಿಲ್ಲ.

ಪುತ್ತೂರಿನ ಅಗ್ನಿಶಾಮಕ ದಳ, ಗುಂಡ್ಯ10 ಮಂದಿ ಈಜುಗಾರರು ಮತ್ತು ಪಾಣೆ ಮಂಗಳೂರಿನ 5 ಮಂದಿ ನುರಿತ ಈಜುಗಾರರನ್ನು ಒಳಗೊಂಡ  ತಂಡ ಕುಮಾರಧಾರ ನದಿಯಲ್ಲಿ ಮಂಗಳವಾರ ಶೋಧ ಕಾರ್ಯ ನಡೆಸಿತು. ಅಲ್ಲದೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬೋಟಿನಲ್ಲಿ ನಿರಂತರ ಕಾರ್ಯಾಚರಣೆ ಸಂಜೆ ತನಕ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಇನ್ನೂ ಪ್ರಕರಣದ ಬಗ್ಗೆ ವಿವರಣೆ ನೀಡಿರುವ ವೃತ್ತಿಯಲ್ಲಿ ವೈದ್ಯೆಯಾಗಿರುವ ಮಹಿಳಾ ಪ್ರಯಾಣಿಕರಾದ ಸೌಮ್ಯ, ನಾನು ಮಂಗಳೂರಿನ ಅಂಬೇಡ್ಕರ್ ಸರ್ಕಲ್ ನಿಂದ ಅಲಂಗರ್ ವರೆಗೆ ಟಿಕೆಟ್ ತೆಗೆದುಕೊಂಡೆ. ಇದಕ್ಕಾಗಿ ನಾನು 500 ರು ನೀಡಿದೆ. ಅಂಬೇಡ್ಕರ್ ಸರ್ಕಲ್ ನಿಂದ ಅಲಂಗರ್ ವರೆಗೆ ಪ್ರಯಾಣಿಸಲು 42 ರು. ಟಿಕೆಟ್ ಪಡೆದುಕೊಳ್ಳಬೇಕು. ಹೀಗಾಗಿ ಕಂಡಕ್ಟರ್ ನನ್ನ ಬಳಿ ಮತ್ತೆ 2 ರು ಹಣ ತೆಗೆದುಕೊಂಡು 60 ರು. ವಾಪಸ್ ನೀಡಿದರು. ಉಳಿದ 400 ರು. ಅನ್ನು ನಂತರ ನೀಡಬಹುದು ಎಂದು ನಾನು ಸುಮ್ಮನಾದೆ. ನಾನು ಇಳಿಯುವ ನಿಲ್ದಾಣ ಬಂದಾಗ ನಾನು ಉಳಿದ 400 ರು ಹಣವನ್ನು ನೀಡುವಂತೆ ಕೇಳಿದೆ. ನೀವು ನೀಡಿದ್ದು ಕೇವಲ ನೂರು ರೂ ಮಾತ್ರ ಎಂದು ಕಂಡಕ್ಟರ್ ದಬಾಯಿಸಿದರು. ನಂತರ ಉಳಿದ 400 ರು ಪಡೆಯಲು ಪೊಲೀಸ್ ಠಾಣೆಗೆ ಬರುವಂತೆ ಹೇಳಿದರು.

ನಂತರ ನಾವಿಬ್ಬರು ಪೊಲೀಸ್ ಠಾಣೆಗೆ ತೆರಳಿದೆವು, ಬಸ್ ನಲ್ಲಿ ಟಿಕೆಟ್ ನಿಂದ ಸಂಗ್ರಹವಾದ ಹಣ ಬಿಟ್ಟರೆ ನನ್ನ ಬಳಿ ಬೇರೆ ಯಾವುದೇ ದುಡ್ಡಿಲ್ಲ ಎಂದು ಕಂಡಕ್ಟರ್ ಹೇಳಿದ್ದರು. ಆದರೆ ಅವರನ್ನು ಪರೀಕ್ಷಿಸಿದಾಗ ಅವರ ಜೇಬಿನಲ್ಲಿ 500 ರು ನೋಟು ಇರುವುದು ಕಂಡು ಬಂದಿತು. ಹೀಗಾಗಿ ನನಗೆ 400 ರು ನೀಡುವಂತೆ ಪೊಲೀಸರು ತಿಳಿಸಿ, ನನ್ನ ಹಣ ನನಗೆ ವಾಪಸ್ ಕೊಡಿಸಿದರು.ನಾನು ಬಸ್ ನಿಂದ ಇಳಿದು ಹೋದ ನಂತರ ಅವರು ನದಿಗೆ ಹಾರಿದ ವಿಷಯ ಕೇಳಿ ಆಘಾತವಾಯಿತು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com