ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಣವಿಲ್ಲದೇ ಇನ್ನೂ ಖಾಲಿ ಹೊಡೆಯುತ್ತಿವೆ ಹಲವು ಎಟಿಎಂಗಳು

500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿ 5 ತಿಂಗಳು ಕಳೆದರೂ ನಗರದ ಹಲವು ಎಟಿಎಂಗಳಲ್ಲಿ ಇನ್ನೂ ಹಣ ..
ಬೆಂಗಳೂರು: 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿ 5 ತಿಂಗಳು ಕಳೆದರೂ ನಗರದ ಹಲವು ಎಟಿಎಂಗಳಲ್ಲಿ ಇನ್ನೂ ಹಣ ಸಿಗುತ್ತಿಲ್ಲ. 
ರಾಮಮೂರ್ತಿನಗರ, ಸಂಜಯನಗರ, ಯಲಹಂಕ, ಚಂದ್ರ ಲೇಔಟ್ ಸೇರಿದಂತೆ ದಕ್ಷಿಣ ಬೆಂಗಳೂರಿನ ಹಲವು ಎಟಿಎಂಗಳ ಹಣವಿಲ್ಲದೇ ಖಾಲಿ ಹೊಡೆಯುತ್ತಿವೆ, ಈ ತಿಂಗಳ ಅಂತ್ಯದ ವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹಿರಿಯ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಮೂಲಗಳ ಪ್ರಕಾರ ಇನ್ನೂ ಹಣದ ಕಳ್ಳ ವ್ಯವಹಾರದ ಶಂಕೆ ವ್ಯಕ್ತ ಪಡಿಸಿದ್ದಾರೆ. ಖಾತೆಯಿಂದ ದೊಡ್ಡ ಪ್ರಮಾಣದಲ್ಲಿ ಬೇರೆ ಅಕೌಂಟ್ ಗಳಿಗೆ ಏಜೆಂಟ್ ಗಳಿಂದ ವರ್ಗಾವಣೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೆಲ ಖಾತೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಡ್ರಾ ಮಾಡುತ್ತಿರುವುದರಿಂದ ಎಟಿಎಂ ಗಳಲ್ಲಿ ಹಣ ಖಾಲಿಯಾಗುತ್ತಿದೆ, ಇನ್ನು ಕೆಲವೆಡೆ ಎಟಿಎಂಗಳಿಗೆ ತುಂಬುವ ಹಣದ ಪ್ರಮಾಣ ಕೂಡ ಕಡಿಮೆಯಿರುತ್ತದೆ.
ಪ್ರಮುಖ ಬ್ಯಾಂಕ್ ಗಳು ಪ್ರತಿದಿನ 50 ರಿಂದ 70 ಕೋಟಿ ಹಣ ಪಡೆಯುತ್ತಿವೆ , ಅಂದರೆ ಬ್ಯಾಂಕ್ ಗಳು ನಗರದಲ್ಲಿ ಎಷ್ಟು ಸಂಖ್ಯೆಯ ಶಾಖೆಗಳನ್ನು ಹೊಂದಿರುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಜನರು ಡಿಜಿಟಲ್ ವ್ಯವಹಾರ ಮಾಡಲಿ ಎಂಬ ಉದ್ದೇಶದಿಂದ ಹಣದ ಹರಿವನ್ನು  ನಿಯಂತ್ರಿಸಲಾಗುತ್ತಿದೆ ಎಂದು ಸಹ ಹೇಳಲಾಗುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com