ಕಲಬುರಗಿಯಲ್ಲಿ ಏರಿದ ಬಿಸಿಲಿನ ತಾಪಮಾನಕ್ಕೆ ಯುವತಿ ಬಲಿ

ಬಿಸಿಲಿನ ತಾಪಮಾನಕ್ಕೆ 19 ವರ್ಷದ ಯುವತಿ ಬಲಿಯಾಗಿರುವ ಘಟನೆ ಕಲಬುರಗಿಯ ಚಿತ್ತಾಪುರ ತಾಲೂಕು ಚಿಕ್ಕುಂಡಿಯಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಲಬುರಗಿ: ಬಿಸಿಲಿನ ತಾಪಮಾನಕ್ಕೆ 19 ವರ್ಷದ ಯುವತಿ ಬಲಿಯಾಗಿರುವ ಘಟನೆ ಕಲಬುರಗಿಯ ಚಿತ್ತಾಪುರ ತಾಲೂಕು ಚಿಕ್ಕುಂಡಿಯಲ್ಲಿ ನಡೆದಿದೆ.
ಐದು ದಿನಗಳ ಹಿಂದ ಕೊಪ್ಪಳದಲ್ಲಿ ಬಿಸಿಲಿನ ತಾಪಕ್ಕೆ 13 ವರ್ಷದ ಬಾಲಕ ಸಾವನ್ನಪ್ಪಿದ್ದನು. ಕಲಬುರಗಿಯಲ್ಲಿ ಬುಧವಾರ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಸಿಲಿನ ತಾಪಕ್ಕೆ ಯುವತಿ ಸಾವನ್ನಪ್ಪಿದ್ದಾಳೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವರಾಜ್ ಸಜ್ಜನಶೆಟ್ಟಿ ಹೇಳಿದ್ದಾರೆ.
ನೀಲಾಬಾಯಿ ಜಾಧವ್ ಎಂಬಾಕೆ ಒಲೆಗಾಗಿ ಸೌದೆ ತರಲು ತೆರಳಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಳು, ಕೂಡಲೇ ಆಕೆಯನ್ನು ಕಲಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಪರೀಕ್ಷಿಸಿದ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದರು,
ಯುವತಿಯ ಸಾವಿಗೆ ಬಿಸಿಲಿನ ತಾಪವೇ ಕಾರಣ ಎಂದು ವೈದ್ಯರ ತಂಡ ತಿಳಿಸಿದೆ, ನೀಲಾಬಾಯಿ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡದ ಸಂಬಂಧಿಕರು ಅಂತ್ಯ ಸಂಸ್ಕಾರ ನಡೆಸಿದರು.
ಸೋಮವಾರ ಕಲಬುರಗಿ ಜಿಲ್ಲೆಯಲ್ಲಿ 45.1 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ತಾಪಮಾನ ದಾಖಲಾಗಿತ್ತು. ಕಳೆದ ಐದು ವರ್ಷಗಳಲ್ಲೇ ಈ ಬಾರಿ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com