ಕರ್ನಾಟಕ: ಕಳೆದ 15 ವರ್ಷಗಳಲ್ಲಿ 13 ವರ್ಷಗಳು ಬರಗಾಲ; ಶೇಕಡಾ 80ರಷ್ಟು ಭೂಮಿ ಬರಡು

ಕಳೆದ 15 ವರ್ಷಗಳಲ್ಲಿ 13 ವರ್ಷಗಳು ಕರ್ನಾಟಕದ ಪಾಲಿಗೆ ಬರಗಾಲದ ವರ್ಷಗಳು. ಕರ್ನಾಟಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಕಳೆದ 15 ವರ್ಷಗಳಲ್ಲಿ 13 ವರ್ಷಗಳು ಕರ್ನಾಟಕದ ಪಾಲಿಗೆ ಬರಗಾಲದ ವರ್ಷಗಳು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ(ಕೆಎಸ್ಎನ್ ಡಿಎಂಸಿ) ಪ್ರಕಾರ ಈ ವರ್ಷ ಕೂಡ ಪರಿಸ್ಥಿತಿ ಉತ್ತಮವಾಗೇನು ಇಲ್ಲ. ಜನರು ಆತಂಕಪಡುವುದು ದೂರವಾಗಿಲ್ಲ. ರಾಜಸ್ತಾನದ ನಂತರ ಬರಗಾಲಕ್ಕೆ ತುತ್ತಾದ ಅಧಿಕ ಪ್ರಮಾಣದ ಭೂಮಿಯನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಇಲ್ಲಿ ಶೇಕಡಾ 80ರಷ್ಟು ಭೂಮಿ ಬರಗಾಲಕ್ಕೆ ತುತ್ತಾಗಿದೆ ಎಂದು ಕೇಂದ್ರ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಸಾಮಾನ್ಯ ಮಳೆ ಈ ವರ್ಷ ತಡವಾಗಿ ಬೀಳಲಿದೆ. ಕಳೆದ ವರ್ಷ ಕೂಡ ದೇಶದಲ್ಲಿ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚು ಶೇಕಡಾ 108ರಷ್ಟು ಮಳೆ ಬೀಳಲಿದೆ. ಕಳೆದ ವರ್ಷ ಉತ್ತರ ಭಾಗದಲ್ಲಿ ಉತ್ತಮ ಮಳೆಯಾಗಿದ್ದರೆ ದಕ್ಷಿಣ ಭಾರತದಲ್ಲಿ ಬರಗಾಲ ಬಂದಿತ್ತು. ಕರ್ನಾಟಕದ 176 ತಾಲ್ಲೂಕುಗಳ ಪೈಕಿ 160 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಈ ವರ್ಷ ಹವಾಮಾನ ಇಲಾಖೆ ಶೇಕಡಾ 95ರಷ್ಟು ಮಳೆ ಬೀಳಬಹುದು ಎಂದು ಅಂದಾಜಿಸಿದ್ದು ಅದು ಸರಾಸರಿಗಿಂತ ಶೇಕಡಾ 5ರಷ್ಟು ಕಡಿಮೆಯಾಗಿದೆ.
ಕಳೆದ ವರ್ಷ ಹೆಚ್ಚು ಮಳೆಯಾಗಬಹುದೆಂದು ಅಂದಾಜಿಸಲಾಗಿತ್ತಾದರೂ ಕಡಿಮೆ ಮಳೆ ಸುರಿದಿತ್ತು. ಈ ವರ್ಷ ಎಷ್ಟು ಮಳೆ ಬೀಳಬಹುದು ಎಂದು ಹೇಳುವುದು ಕಷ್ಟ ಎನ್ನುತ್ತಾರೆ ಕೆಎಸ್ಎನ್ ಡಿಎಂ ನಿರ್ದೇಶಕ ಶ್ರೀನಿವಾಸ್ ರೆಡ್ಡಿ. ಇದಕ್ಕೆ ಮುಂಜಾಗ್ರತೆಯಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕಾರ್ಯ ನಡೆಸಲು ಯೋಜನೆ ರೂಪಿಸುತ್ತಿದೆ. ಕಳೆದ ವರ್ಷ ಕರ್ನಾಟಕ ರಾಜ್ಯದಲ್ಲಿ ಶೇಕಡಾ 26ರಷ್ಟು ಮಳೆ ಕೊರತೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com