ನಿರ್ಮಾಣ ಆಗಿರೋದು 87, ಆದರೆ 101 ಇಂದಿರಾ ಕ್ಯಾಂಟಿನ್‌ಗೆ ಆ.16ರಂದು ಚಾಲನೆ!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಇಂದಿರಾ ಕ್ಯಾಂಟಿನ್ ಯೋಜನೆಗೆ ಆಗಸ್ಟ್ 16ರಂದು ಚಾಲನೆ ನೀಡಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು ಈ ಮಧ್ಯೆ ಬಿಬಿಎಂಪಿ...
ಇಂದಿರಾ ಕ್ಯಾಂಟಿನ್
ಇಂದಿರಾ ಕ್ಯಾಂಟಿನ್
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಇಂದಿರಾ ಕ್ಯಾಂಟಿನ್ ಯೋಜನೆಗೆ ಆಗಸ್ಟ್ 16ರಂದು ಚಾಲನೆ ನೀಡಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು ಈ ಮಧ್ಯೆ ಬಿಬಿಎಂಪಿ 101 ಕ್ಯಾಂಟಿನ್ ಗಳ ಉದ್ಘಾಟನೆ ಮಾಡುವುದಾಗಿ ಹೇಳುತ್ತಿದೆ. 
ಅಗ್ಗದ ದರದಲ್ಲಿ ರಾಜ್ಯದ ಜನತೆಗೆ ಉಪಾಹಾರ, ಊಟ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಳೆದ ಬಜೆಟ್ ನಲ್ಲಿ ಕ್ಯಾಂಟಿನ್ ಯೋಜನೆಯನ್ನು ಘೋಷಿಸಿದ್ದರು. ಅಂತೆ ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟಿನ್ ಗಳನ್ನು ನಿರ್ಮಿಸಲು ನಿರ್ಧರಿಸಿದ್ದು ಸದ್ಯ 87 ಕ್ಯಾಂಟಿನ್ ಗಳ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಬಿಬಿಎಂಪಿ ಮಾತ್ರ 101 ಕ್ಯಾಂಟಿನ್ ಗಳ ಲೋಕಾರ್ಪಣೆ ಮಾಡುವುದಾಗಿ ಹೇಳುತ್ತಿದೆ. 
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಜಿ ಪದ್ಮಾವತಿ ಅವರು ಆಗಸ್ಟ್ 16ರಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದಿರಾ ಕ್ಯಾಂಟಿನ್ ಗೆ ಚಾಲನೆ ನೀಡಲಿದ್ದಾರೆ. ಪ್ರಸ್ತುತ 87 ಕ್ಯಾಂಟಿನ್ ಗಳು ರೆಡಿಯಾಗಿದ್ದು ಉಳಿದ ಕ್ಯಾಂಟಿನ್ ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ ಎಂದರು. 
ಇನ್ನು ಉಳಿದ ಕ್ಯಾಂಟಿನ್ ಗಳನ್ನು ಅಕ್ಟೋಬರ್ 2ರ ಗಾಂಧಿ ಜಯಂತಿಯ ದಿನ ಲೋಕಾರ್ಪಣೆ ಮಾಡಲಾವುದು. ಕೆಲ ಜಾಗದಲ್ಲಿ ಕ್ಯಾಂಟಿನ್ ನಿರ್ಮಾಣಕ್ಕೆ ಸ್ಥಳೀಯರು ಅಡ್ಡಿ ಪಡಿಸಿದ್ದರಿಂದ ಕ್ಯಾಂಟಿನ್ ಗಳ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದರು. 
ಇಂದಿರಾ ಕ್ಯಾಂಟಿನ್ ಬೆಳಗ್ಗೆ 7.30ರಿಂದ 10.30ರವರೆಗೆ ಉಪಾಹಾರ, ಮಧ್ಯಾಹ್ನ 12.30ರಿಂದ 2.30ರವರೆಗೆ ಊಟ ಮತ್ತು ರಾತ್ರಿ 7.30ರಿಂದ 8.30ರವರೆಗೆ ರಾತ್ರಿ ಊಟ ಲಭ್ಯವಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com