ಬೆಂಗಳೂರು ಮಳೆ ಅವಾಂತರ: 7 ಗಂಟೆಗಳ ಕಾಲ ಟ್ರಾಕ್ಟರ್ ನಲ್ಲಿ ಆಶ್ರಯ ಪಡೆದಿದ್ದ ಮಹಿಳೆ!

ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಇಡೀ ಬೆಂಗಳೂರು ಜನತೆ ಹೈರಾಣಾಗಿದ್ದು, ಕೋರಮಂಗದ ಮಹಿಳೆಯೊಬ್ಬರು ರಾಚ್ರಿ ಇಡೀ ಟ್ರಾಕ್ಯಟರ್ ನಲ್ಲಿ ಶೆಲ್ಟರ್ ಪಡೆದಿದ್ದ ವಿಚಾರ ಬಹಿರಂಗ ಪಡಿಸಿದ್ದಾರೆ.
ಟ್ರಾಕ್ಟರ್ ನಲ್ಲೇ ಆಶ್ರಯ ಪಡೆದಿರುವ ನಿವಾಸಿಗಳು
ಟ್ರಾಕ್ಟರ್ ನಲ್ಲೇ ಆಶ್ರಯ ಪಡೆದಿರುವ ನಿವಾಸಿಗಳು

ಬೆಂಗಳೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಇಡೀ ಬೆಂಗಳೂರು ಜನತೆ ಹೈರಾಣಾಗಿದ್ದು, ಕೋರಮಂಗದ ಮಹಿಳೆಯೊಬ್ಬರು ರಾಚ್ರಿ ಇಡೀ ಟ್ರಾಕ್ಯಟರ್ ನಲ್ಲಿ ಶೆಲ್ಟರ್ ಪಡೆದಿದ್ದ ವಿಚಾರ ಬಹಿರಂಗ ಪಡಿಸಿದ್ದಾರೆ.

ಕೋರಮಂಗಲದ ಎಸ್ ಟಿ ಬೆಡ್ ಲೇಔಟ್ ನಿವಾಸಿ 42 ವರ್ಷದ ಚಿತ್ರಾ ಎಂಬುವವರ ಮನೆಗೆ ಸೋಮವಾರ ರಾತ್ರಿ ನೀರು ನುಗ್ಗಿದೆ. ಆದರೆ ಬೆಳಕ್ಕೆ ಸುಮಾರು 4.30ಕ ವೇಳೆಯಲ್ಲಿ ಮನೆಯವರಿಗೆ ಎಚ್ಚರವಾಗಿದ್ದು, ಅಷ್ಟು  ಹೊತ್ತಿಗಾಗಲೇ ಮನೆಯೊಳಗೆ ನೀರು ನುಗ್ಗಿತ್ತು. ಬೆಳಗ್ಗೆ ಹೊತ್ತಿಗೆ ಮನೆಯಲ್ಲಿ ಸುಮಾರು 5 ಅಡಿಗಳ ವರೆಗೂ ನೀರು ನಿಂತಿತ್ತು ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಹಿಳೆ, ನಿಜಕ್ಕೂ ಇದೊಂದು ದುಸ್ವಪ್ನವಾಗಿತ್ತು. ರಾತ್ರಿ ಸಾಮಾನ್ಯವಾಗಿಯೇ ಊಟ ಮಾಡಿ ಮಲಗಿದೆವು. ಆದರೆ ಮಧ್ಯರಾತ್ರಿ ಹೊತ್ತಿಗೆ ಮಳೆ ಜೋರಾಯಿತು. ಮಂಗಳವಾರ ಬೆಳಗಿನ ಜಾವ ಸುಮಾರು 4  ಗಂಟೆ ಹೊತ್ತಿಗೆ ಮಳೆ ಭಾರಿ ಪ್ರಮಾಣದಲ್ಲಿ ಸುರಿಯಲಾರಂಭಿಸಿತು. ಅಷ್ಟು ಹೊತ್ತಿಗಾಗಲೇ ಮನೆಯಲೆಲ್ಲಾ ನೀರು ತುಂಬಿತ್ತು. ಕೆಲವೇ ಸಮಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿತ್ತು. ನಿಜಕ್ಕೂ ನಾನು ನಾನು  ಹೆದರಿದ್ದೆ. ಇಂದೇ ನಮ್ಮ ಕೊನೆ ದಿನ ಎಂದು ಭಾವಿಸಿದ್ದೆ, ಆದರೆ ಅಷ್ಟು ಹೊತ್ತಿಗಾಗಲೇ ನಮ್ಮ ಮಗ ಮುತ್ತು ನನ್ನನ್ನು ಹೊರಗೆ ಕರೆದುಕೊಂಡು ಹೋದ.

ಬಳಿಕ ರಸ್ತೆ ಬದಿಯಲ್ಲಿದ್ದ ಟ್ರಾಕ್ಟರ್ ನಲ್ಲಿ ನಾನು ಆಶ್ರಯ ಪಡೆದೆ. ಬಳಿಕ ನಮ್ಮ ನೆರೆಮನೆಯ ಐವರು ಮಹಿಳೆಯರೂ ಕೂಡ ನನ್ನೊಂದಿಗೆ ಟ್ರಾಕ್ಟರ್ ಏರಿ ಆಶ್ರಯ ಪಡೆದರು. ಕೆಲವರು ಮರ ಹತ್ತಿ ಕುಳಿತರೆ, ಮತ್ತೆ ಕೆಲವರು ಕಾಪೌಂಡ್  ಹತ್ತಿ ಕುಳಿತರು, ಸುಮಾರು 7 ಗಂಟೆಗಳ ಕಾಲ ನಾವು ಇದೇ ಪರಿಸ್ಥಿತಿಯಲ್ಲಿದ್ದೆವು ಎಂದು ಚಿತ್ರಾ ಹೇಳಿದ್ದಾರೆ.

ಇದೇ ಮೊದಲೇನಲ್ಲ
ಇನ್ನು ಕೋರಮಂಗಲದಲ್ಲಿ ಮಳೆ ಬಂದಾಗ ಇಂತಹ ಸ್ಥಿತಿ ನಿರ್ಮಾಣವಾಗುವುದು ಇದೇ ಮೊದಲನೇಲ್ಲ ಎಂದು ಸಂತ್ರಸ್ಥೆ ಚಿತ್ರಾ ಅವರು ಹೇಳಿದ್ದಾರೆ. ಈ ಹಿಂದೆ ಮಳೆ ಬಂದಾಗಲೆಲ್ಲಾ ಇಲ್ಲಿ ಇದೇ ಪರಿಸ್ಥಿತಿ ಇರುತ್ತದೆ ಎಂದು  ಹೇಳಿದ್ದಾರೆ. ಮತ್ತೋರ್ವ ನಿವಾಸಿ ಅಲಮೇಲಮ್ಮ ಎಂಬುವವರು ಮಾತನಾಡಿ,  ಕಳೆದ 20 ವರ್ಷಗಳಿಂದ ನಾವು ಇಲ್ಲೇ ವಾಸಿಸುತ್ತೇದ್ದೇವೆ. ಮಳೆಗಾಲದಲ್ಲಿ ನಾವು ನಿಜಕ್ಕೂ ಹೆದರಿಕೆಯಿಂದಲೇ ಬದುಕ ಬೇಕಾದ ಪರಿಸ್ಥಿತಿ ಇರುತ್ತದೆ.  ಮಳೆ ನಿಂತ ಮೇಲೆ ಅಧಿಕಾರಿಗಳು ಆಗಮಸಿ ವೀಕ್ಷೀಸುತ್ತಾರೆಯಾದರೂ, ಬಳಿಕ ಯಾರೂ ಇತ್ತ ಸುಳಿಯುವುದಿಲ್ಲ. ತಾತ್ಕಾಲಿಕ ಕಾಮಗಾರಿಗಳನ್ನು ಮಾಡುತ್ತಾರೆ. ಮತ್ತೆ ಮಳೆ ಬಂದರೆ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು  ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com