ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಕೊಲ್ಲೂರು ಮುಕಾಂಬಿಕಾ ದೇಗುಲ ಭೇಟಿ ರದ್ದು!
ಬೆಂಗಳೂರು: ಶ್ರೀಲಂಕಾದ ಪ್ರಧಾನಿ ರಣಿಲ್ ವಿಕ್ರಮಸಿಂಘೆ ಅವರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ಭೇಟಿ ಕಾರ್ಯಕ್ರಮ ರದ್ದಾಗಿದೆ ಎಂದು ತಿಳಿದುಬಂದಿದೆ.
ಪ್ರತೀಕೂಲ ಹವಾಮಾನದಿಂದಾಗಿ ರಣಿಲ್ ವಿಕ್ರಮ ಸಿಂಘೆ ಅವರ ಹೆಲಿಕಾಪ್ಟರ್ ಇಳಿಯಲು ಸೂಕ್ತ ವಾತಾವರವಿಲ್ಲದ ಕಾರಣ ಕಾರ್ಯಕ್ರಮವನ್ನು ತಾತ್ಕಾಲಿಕಲಾಗಿ ರದ್ದು ಮಾಡಲಾಗಿದೆ. ಅರೆ ಶಿರೂರಿನ ಹೆಲಿಪ್ಯಾಡಿನಲ್ಲಿ ಬೆಳಗ್ಗೆಯಿಂದ ಪರಿಶೀಲನೆ ನಡೆಸಿದ ಶ್ರೀಲಂಕಾದ ಅಧಿಕಾರಿಗಳ ತಂಡ ಹಾಗೂ ಉಡುಪಿ ಜಿಲ್ಲಾಡಳಿತವು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಇಳಿಯಲು ವಾತಾವರಣ ಸೂಕ್ತವಾಗಿಲ್ಲ ಎಂದು ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12:15ರ ಸುಮಾರಿಗೆ ಶ್ರೀಲಂಕಾ ಪ್ರಧಾನಿಯ ಇಂದಿನ ಭೇಟಿ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಲಾಗಿದೆ.
ಪೂರ್ವನಿಗದಿಯಂತೆ ಶ್ರಿಲಂಕಾ ಪ್ರಧಾನಿಯು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಯಕ್ಕೆ ಶನಿವಾರ ಭೇಟಿ ನೀಡಬೇಕಿತ್ತು. ಆದರೆ ಒಳ್ಳೆಯ ಮುಹೂರ್ತ ಇದೇ ಎಂಬ ಕಾರಣಕ್ಕೆ ಅದನ್ನು ಇಂದಿಗೆ ಮುಂದೂಡಲಾಗಿತ್ತು. ಇದೀಗ ಮತ್ತೆ ಕಾರ್ಯಕ್ರಮ ಮುಂದೂಡಲಾಗಿದ್ದು, ಮುಂದಿನ ಭೇಟಿಯ ಬಗ್ಗೆ ಇಂದು ಸಂಜೆ ಶ್ರೀಲಂಕಾದ ಅಧಿಕಾರಿಗಳು ಬೆಂಗಳೂರಿನಲ್ಲಿ ಪ್ರಕಟಿಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ