ಕೆಪಿಸಿಸಿ ಕಾರ್ಯದರ್ಶಿ ಮುಳಗುಂದ್ ನಿವಾಸದ ಮೇಲೆ ಐಟಿ ರೈಡ್

ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ಐಟಿ ದಾಳಿ ಮುಂದುವರಿದಿದ್ದು ಇಂಧನ ಸಚಿವ ಡಿಕೆಶಿ ಆಪ್ತ, ಕೆಪಿಸಿಸಿ ಕಾರ್ಯದರ್ಶಿ ವಿಜಯ್ ಮುಳಗುಂದ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.
ಐಟಿ ರೈಡ್
ಐಟಿ ರೈಡ್
Updated on
ಬೆಂಗಳೂರು: ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ಐಟಿ ದಾಳಿ ಮುಂದುವರಿದಿದ್ದು ಇಂಧನ ಸಚಿವ ಡಿಕೆಶಿ ಆಪ್ತ, ಕೆಪಿಸಿಸಿ ಕಾರ್ಯದರ್ಶಿ ವಿಜಯ್ ಮುಳಗುಂದ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.
ಈ ಬೆಳವಣಿಗೆ ಕೈ ಪಾಳೆಯವನ್ನು ಆತಂಕಕ್ಕೆ ದೂಡಿದ್ದು ಇತ್ತೀಚೆಗೆ ನಡೆದ  ಗುಜರಾತ್ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದ ಗುಜರಾತ್ ಕಾಂಗ್ರೆಸ್‌ ನ ಶಾಸಕರ ಆತಿಥ್ಯವನ್ನು ಡಿಕೆಶಿ ಮತ್ತು ವಿಜಯ್ ಮುಳಗುಂದ್ ವಹಿಸಿಕೊಂಡಿದ್ದರು.
ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಕಾವೇರಿ ಹ್ಯಾಂಡ್ ಲೂಮ್ ಅಧ್ಯಕ್ಷರಾಗಿದ್ದ ಮುಖಗುಂದ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಇಂದು ಬೆಳಗ್ಗೆ ದಾಳಿ ಪ್ರಾರಂಭವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com