ಬಳ್ಳಾರಿಯ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್.ಷಾಷಾವಲಿ, ಕಲಬುರಗಿಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಹೆಚ್.ಬಿ.ಮಲ್ಲಪ್ಪ, ಬಂಟ್ವಾಳದ ಕೃಷಿ ಸಹಾಯಕ ನಿರ್ದೇಶಕ ಫ್ರಾನ್ಸಿಸ್ ಫೌಲ್ ಮಿರಾಂಡಾ, ಕೊರಟಗೆರೆಯ ಪಿಡಬ್ಲ್ಯೂಡಿ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಜಿ.ಸಿ.ಜಗದೀಶ್, ಚಿಕ್ಕಬಳ್ಳಾಪುರದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಡಿ.ಹೇಮಂತ್, ಬೆಂಗಳೂರಿನ ಕಾರ್ಮಿಕ ಭವನದ ಫ್ಯಾಕ್ಟರಿ ಮತ್ತು ಬಾಯ್ಲರ್ಸ್ ನ ಜಂಟಿ ನಿರ್ದೇಶಕ ಎಸ್.ಎಂ. ವಾಸಣ್ಣ, ಬೆಂಗಳೂರಿನ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ನ ಜಂಟಿ ನಿರ್ದೇಶಕ ಎಂ.ಸಿ.ಶಶಿಕುಮಾರ್, ಬೆಂಗಳೂರಿನ ಬಸವನಗುಡಿಯ ಉಪ ವಿಭಾಗದ ಬಿಬಿಎಂಪಿ ಸಹಾಯಕ ಇಂಜಿನಿಯರ್ ಜೆ.ವಿ.ತ್ಯಾಗರಾಜ್, ಮಂಡ್ಯ ಜಿಲ್ಲಾ ಪಂಚಾಯತ್ ನ ಕಾರ್ಯಕಾರಿ ಇಂಜಿನಿಯರ್ ಚಂದ್ರಹಾಸ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅರಣ್ಯ ಸಹಾಯಕ ಪಾಂಡುರಂಗ ಕೇಶವ ಪೈ ಮತ್ತು ಬೆಳಗಾವಿ ಜಿಲ್ಲೆಯ ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಸುರೇಶ್ ಭೀಮಾ ನಾಯ್ಕ್ ಅವರ ನಿವಾಸ ಹಾಗೂ ಮನೆ ಮೇಲೆ ದಾಳಿ ನಡೆದಿದೆ.