ಬೆಂಗಳೂರು: ಕನ್ನಡದ ಪ್ರಖ್ಯಾತ ಪತ್ರಿಕೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ವಿರುದ್ಧ ಇನ್ನೊಂದು ಪ್ರಕರಣ ದಾಖಲಾಗಿದೆ. ರಾಜ್ಯ ಅರಣ್ಯ ಇಲಾಖೆ, ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬೆಳಗೆರೆ ವಿರುದ್ಧ ವನ್ಯಜೀವಿ ಅಪರಾಧ ಪ್ರಕರಣ ಅಡಿಯಲ್ಲಿ ಕೇಸ್ ದಾಖಲಿಸಿದೆ. ವನ್ಯಜೀವಿ ಚರ್ಮ, ಶೆಲ್ ಮತ್ತಿತರೆ ಸಂಬಂಧಿತ ವಸ್ತುಗಳನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿದ ಕಾರಣ ಕಗ್ಗಲಿಪುರ ರೇಂಜ್ ಫಾರೆಸ್ಟ್ ಅಧಿಕಾರಿ ವರುಣ್ ಕುಮಾರ್ ಅವರು ಈ ಪ್ರಕರಣವನ್ನು ದಾಖಲಿಸಿದ್ದಾರೆ.
ಅರಣ್ಯ ಅಧಿಕಾರಿಯ ಪ್ರಕಾರ, ಇದು ವನ್ಯಜೀವಿ ಕಾನೂನು ಪ್ರಕಾರ ಅಪರಾಧವಾಗಿದ್ದು ಸೆಕ್ಷನ್ 2 (1)(2) (16), 9, 39, 43, 44, 48, 49 (ಬಿ), 50 ಮತ್ತು 51 ರ ವನ್ಯಜೀವಿಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು.
ರವಿ ಬೆಳಗೆರೆ ಬಂಧನವಾದ ನಂತರದಲ್ಲಿ ಪೋಲೀಸರು ಅವರ ಮನೆಯಿಂದ ಚಿಕ್ಕೆ ಜಿಂಕೆಯ ಚರ್ಮ ಹಾಗೂ ಆಮೆ ಜಾತಿಯ ಪ್ರಾಣಿಯ ಶೆಲ್ ಗಳನ್ನು ವಶಕ್ಕೆ ಪಡೆದಿದ್ದು ಈ ಂಬಂಧ ಇದೀಗ ಅರಣ್ಯ ಇಲಾಖಾ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಅಪರೂಪದ ಜಾತಿಯ ಸಮುದ್ರ ಆಮೆಯ ಶೆಲ್ ಅದಾಗಿದ್ದು ಇನ್ನು ಜಿಂಕೆ ಚರ್ಮವು 101x80 ಸೆಂ.ಮೀ. ಇದೆ. ಅದರಲ್ಲಿ ಎದೆಯ ಭಾಗದಲ್ಲಿ 1x0.5 ಇಂಚಿನ ರಂದ್ರವು ಸಹ ಪತ್ತೆಯಾಗಿದೆ. "1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ನಾನು ಎಫ್ಐಆರ್ ದಾಖಲಿಸಲು ಬೆಂಗಳೂರು (ನಗರ) ಡಿಸಿಎಫ್ ದೀಪಿಕಾ ಬಾಜಪೇಯಿಯವರಿಗೆ ನಿರ್ದೇಶಿಸಿದ್ದೇನೆ ಮತ್ತು ಬಾಡಿ ವಾರಂಟ್ ಗೆ ಅರ್ಜಿ ಸಲ್ಲಿಸಿದ್ದೇನೆ. ಚರ್ಮವು ಎರಡು ಬುಲೆಟ್ ಗಳಿಂದಾದ ಗಾಯಗಳನ್ನು ಹೊಂದಿರುವುದರಿಂದ, ಈ ಚುಕ್ಕೆ ಜಿಂಕೆಯ ಬೇಟೆಯ ವಿವರಗಳ ಕುರಿತು ತನಿಖೆ ಮಾಡಲಾಗುತ್ತದೆ. ಬೆಳಗೆರೆ ಬಳಿ ಪರವಾನಗಿ ಪಡೆದ ಗನ್ ಮತ್ತು ಕೋವಿಗಳಿದ್ದವೆ ಎನ್ನುವುದನ್ನು ಬ್ಯಾಲಿಸ್ಟಿಕ್ ವರದಿ ಆಧಾರದ ಮೇಲೆ ಪರಿಶೀಲಿಸಬೇಕಿದೆ. " ಮುಖ್ಯ ಅರಣ್ಯ (ವನ್ಯಜೀವಿ) ಸಂರಕ್ಷಣಾಧಿಕಾರಿ ಪೊನ್ನಾಟಿ ಶ್ರೀಧರ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
"ವನ್ಯಜೀವಿಗಳ ಚರ್ಮ ಮತ್ತು ಶೆಲ್ ಗಳನ್ನು ಹೊಂದಿರುವ ಪ್ರತಿಯೊಬ್ಬರಿಗೂ ಕಾನೂನು ಒಂದೇ ಆಗಿರುತ್ತದೆ ಮತ್ತು ಹಾಗಾಗಿ ಬೆಳಗೆರೆಗೆ ಈ ಸಂಬಂಧ ಯಾವ ವಿನಾಯಿತಿ ಇಲ್ಲ. ಚುಕ್ಕೆ ಜಿಂಕೆ ಯನ್ನು ಬೇಟೆಯಾಡಿರುವುದು ವನ್ಯಜೀವಿ ರಕ್ಷಣ ಕಾಯ್ದೆ 1972 ಅಡಿಯಲ್ಲಿ ಅಪರಾಧ. " ವನ್ಯಜೀವಿ ಸಂರಕ್ಷಣಾ ವಿಭಾಗದ ವಾರ್ಡನ್ ಹೇಳಿದರು