ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜನವರಿ 10ರಂದು ಬೆಳಗ್ಗೆ 930ಕ್ಕೆ ಪಿಎಸ್‌ಎಲ್‌ವಿ -ಸಿ40 ರಾಕೆಟ್, ಕಾರ್ಟೊ ಸ್ಯಾಟ್–3ರ ಜತೆ ಇನ್ನೂ 30 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ ಎಂದು ಇಸ್ರೊ ನಿರ್ದೇಶಕ ದೇವಿ ಪ್ರಸಾದ್ ಕಾರ್ನಿಕ್ ಅವರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.