ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ಧಾರ್ಮಿಕ ಕಾರಣಗಳಿಗಾಗಿ ಪೋಷಕರಿಂದ ರುಬೆಲ್ಲಾ ಲಸಿಕೆಗೆ ವಿರೋಧ

ಕಲಬುರಗಿ ಶಾಲೆಗಳ 107 ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕಲು ವಿರೋಧ ವ್ಯಕ್ತ ಪಡಿಸಿದ್ದಾರೆ. ..

ಕಲಬುರಗಿ: ಕಲಬುರಗಿ ಶಾಲೆಗಳ 107 ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕಲು ವಿರೋಧ ವ್ಯಕ್ತ ಪಡಿಸಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಫೆಬ್ರವರಿ 7 ರಿಂದ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನ ಆರಂಭಿಸಿದೆ. ಈ ಸಂಬಂಧ ಮಕ್ಕಳಿಗೆ ಶಾಲೆಯಲ್ಲೂ ಲಸಿಕೆ ಹಾಕಲಾಗುತ್ತಿದೆ, ವಿದ್ಯಾರ್ಥಿಗಳ ಪೋಷಕರ ಸಮ್ಮತಿ ಪಡೆದು ಲಸಿಕೆ ಹಾಕಲಾಗುತ್ತಿದೆ. ಬಹುತೇಕ ಪೋಷಕರು ಮಕ್ಕಳಿಗೆ ರುಬೆಲ್ಲಾ ಮತ್ತು ದಡಾರ ಲಸಿಕೆ ಹಾಕಲು ಒಪ್ಪಿಗೆ ಸೂಚಿಸಿದ್ದಾರೆ.

ಕಲಬರುಗಿ ಶಾಲೆಯಲ್ಲಿರುವ 20, 366 ಮಕ್ಕಳ ಪೈಕಿ 107ಮಕ್ಕಳ ಫೋಷಕರು ಧಾರ್ಮಿಕ ಕಾರಣ ನೀಡಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸದಿರಲು ನಿರ್ಧರಿಸಿದ್ದಾರೆ. ಬಹುತೇಕ ಶಾಲೆಗಳು  ಕಲಬುರಗಿಯಲ್ಲಿ ರೆಹಮತ್ ನಗರ, ಖಾನಾಪುರ್ ಮತ್ತು ಮಕ್ತಾಂಪುರ ಪ್ರದೇಶದಲ್ಲಿವೆ,  ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ.

ಈ ಪ್ರದೇಶದ ಶಾಲೆಗಳಲ್ಲಿರುವ ಮಕ್ಕಳಿಗೆ ಲಸಿಕೆ ಹಾಕಿಸದಂತೆ ಪೋಷಕರು ಒಪ್ಪಿಗೆ ನೀಡಿಲ್ಲ ಎಂದು ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಶಿವರಾಜ್ ಸಜ್ಜನಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಗಮನಕ್ಕೆ ತರಲಾಗಿದೆ, ನಾವು ಯಾವುದೇ ಧರ್ಮವಿರೋಧಿ ಕೆಲಸ ಮಾಡುತ್ತಿಲ್ಲ, ಹಾಗಾಗಿ ಸಹಕಾರ ನೀಡಬೇಕು ಎಂದು ಧಾರ್ಮಿಕ ಮುಖಂಡರಲ್ಲಿ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com