ಶನಿವಾರ ರಾತ್ರಿ ಕುಮಾರ್ ದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಕುಮಾರ್ ಉಸಿರಾಡಲು ಪ್ರಾರಂಭಿಸಿದ್ದಾನೆ. ಕೂಡಲೇ ಪಾಲಕರು ಮತ್ತು ಸಂಬಂಧಿಕರು ಬಾಲಕನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಕುಮಾರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ವರ್ತನೆ ಇಡೀ ಗ್ರಾಮಸ್ಥರಿಗೆ ಶಾಕ್ ನೀಡಿದೆ.