ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಉಮೇಶ್ ಸೇರಿ 13 ನಟರಿಗೆ ಚಲನಚಿತ್ರ ಅಕಾಡೆಮಿ ಪ್ರಶಸ್ತಿ

2015-16ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ನಟ ಜೆ.ಕೆ.ಶ್ರೀನಿವಾಸಮೂರ್ತಿ, ನಟಿ ಆದವಾನಿ ಲಕ್ಷ್ಮೀದೇವಿ, ಹಾಸ್ಯನಟ ಎಂ.ಎಸ್‌.ಉಮೇಶ್‌,ಎಸ್‌.ದೊಡ್ಡಣ್ಣ ಸೇರಿದಂತೆ 15 ಕಲಾವಿದರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: 2015-16ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ನಟ ಜೆ.ಕೆ.ಶ್ರೀನಿವಾಸಮೂರ್ತಿ, ನಟಿ ಆದವಾನಿ ಲಕ್ಷ್ಮೀದೇವಿ, ಹಾಸ್ಯನಟ ಎಂ.ಎಸ್‌.ಉಮೇಶ್‌,ಎಸ್‌.ದೊಡ್ಡಣ್ಣ ಸೇರಿದಂತೆ 15   ಕಲಾವಿದರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ ವಾರ್ಷಿಕ ಪ್ರಶಸ್ತಿ ಆಯ್ಕೆ ನಿಮಿತ್ತ ನಿನ್ನೆ ನಡೆದ ಸಭೆಯಲ್ಲಿ 15 ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು,  ಚಿತ್ರೋದ್ಯಮದ ಅಭಿನಯ, ನಿರ್ದೇಶನ, ನಿರ್ಮಾಣ, ಹಂಚಿಕೆ, ಸಂಗೀತ, ಚಿತ್ರ ಸಾಹಿತ್ಯ, ಛಾಯಾಗ್ರಹಣ, ತಂತ್ರಜ್ಞಾನ ಕಾರ್ಮಿಕ ವಿಭಾಗ, ಪ್ರಾದೇಶಿಕ ಭಾಷಾಚಿತ್ರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಕಲಾವಿದರನ್ನು ಆಯ್ಕೆ  ಮಾಡಲಾಗಿದೆ.

ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರ, "ಕನ್ನಡ ಚಲನಚಿತ್ರ ಅಭಿವೃದ್ಧಿಗಾಗಿ ಗಣನೀಯವಾಗಿ ಸೇವೆ ಸಲ್ಲಿಸಿದ ಕಲಾವಿದರನ್ನು  ಪ್ರೋತ್ಸಾಹಿಸಲು ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ. ಪ್ರತಿ ಪ್ರಶಸ್ತಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಹಾಗೂ ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಕೊಡುಗೆ ನೀಡಿದ ಮಹನೀಯರ ಹೆಸರಿನಲ್ಲಿ ನೀಡುತ್ತಿರುವುದು  ವಿಶೇಷ. ಚಿತ್ರೋದ್ಯಮದ ಅಭಿನಯ, ನಿರ್ದೇಶನ, ನಿರ್ಮಾಣ, ಹಂಚಿಕೆ, ಸಂಗೀತ, ಚಿತ್ರ ಸಾಹಿತ್ಯ, ಛಾಯಾಗ್ರಹಣ, ತಂತ್ರಜ್ಞಾನ ಕಾರ್ಮಿಕ ವಿಭಾಗ, ಪ್ರಾದೇಶಿಕ ಭಾಷಾಚಿತ್ರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಲಾವಿದರನ್ನು  ಶನಿವಾರ ನಡೆದ  ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದ ತಿಳಿಸಿದರು.

ಚಲನಚಿತ್ರ ಅಕಾಡೆಮಿ ಪ್ರಶಸ್ತಿಯು ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದ್ದು, ಇದೇ ಮಾರ್ಚ್ 3 ರಂದು ಸಂಜೆ 6 ಗಂಟೆಗೆ ಪುರಭವನದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಕಲಾವಿದರಿಗೆ  ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇನ್ನು ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಖ್ಯಾತ ನಟ ಅಂಬರೀಷ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ವಸತಿ ಸಚಿವ ಎಂ. ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ನಟಿ ಉಮಾಶ್ರೀ,  ವಿಧಾನ ಪರಿಷತ್ ಸದಸ್ಯೆ,ನಟಿ ಜಯಮಾಲ, ಹಿರಿಯ ನಟರಾದ ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ವಾರ್ತಾ ಇಲಾಖೆ ನಿರ್ದೇಶಕ ವಿಶು ಕುಮಾರ್ ಅವರು  ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ರಾಜೇಂದ್ರ ಸಿಂಗ್ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.
ಆರ್ ನಾಗೇಂದ್ರ ರಾವ್ ಪ್ರಶಸ್ತಿ: ಅಭಿನಯ ನಟ- ಜೆಕೆ ಶ್ರೀನಿವಾಸ ಮೂರ್ತಿ
ಎಂ.ವಿ.ರಾಜಮ್ಮ ಪ್ರಶಸ್ತಿ: ಆದವಾನಿ ಲಕ್ಷ್ಮೀದೇವಿ
ಬಾಲಕೃಷ್ಣ ಪ್ರಶಸ್ತಿ (ಹಾಸ್ಯ) : ಎಂ.ಎಸ್ ಉಮೇಶ್
ತೂಗುದೀಪ ಶ್ರೀನಿವಾಸ್ ಪ್ರಶಸ್ತಿ(ಖಳ): ಎಸ್ ದೊಡ್ಡಣ್ಣ
ಬಿಆರ್ ಪಂತುಲು (ನಿರ್ದೇಶನ): ಕೆ.ವಿ ರಾಜು                       
ಶಂಕರ್ ಸಿಂಗ್ ಪ್ರಶಸ್ತಿ (ನಿರ್ಮಾಣ): ಸಿ.ಜಯರಾಂ
ಬಿ ಜಯಮ್ಮ(ಪ್ರದರ್ಶನ): ಕುಮಾರ್ ಶೆಟ್ಟರ್
ವೀರಾಸ್ವಾಮಿ ಪ್ರಶಸ್ತಿ (ಹಂಚಿಕೆ) : ಪಟಲ್ ಎಸ್ ಚಂದಾನಿ
ಜಿವಿ ಅಯ್ಯರ್ ಪ್ರಶಸ್ತಿ (ಸಂಗೀತ, ಗಾಯನ): ಬಿ.ಕೆ.ಸುಮಿತ್ರಾ                       
ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ (ಚಿತ್ರ ಸಾಹಿತ್ಯ): ಡಾ.ಬಿ.ಎಲ್ ವೇಣು
ಬಿ.ಎಸ್. ರಂಗ ಪ್ರಶಸ್ತಿ(ಛಾಯಾಗ್ರಾಹಣ): ಎಸ್ ವಿ ಶ್ರೀಕಾಂತ್
ಪಂಡರೀಬಾಯಿ ಪ್ರಶಸ್ತಿ (ಪೋಷಕ) ಬಿ.ವಿ. ರಾಧಾ
ಎಂ.ಪಿ ಶಂಕರ್ ಪ್ರಶಸ್ತಿ(ತಂತ್ರಜ್ಞಾನ): ದೇವಿ(ನೃತ್ಯ)
ಶಂಕರ್ ನಾಗ್ ಪ್ರಶಸ್ತಿ (ಕಾರ್ಮಿಕ): ಎನ್ ಎಲ್ ರಾಮಣ್ಣ
ಕೆ.ಎನ್. ಟೈಲರ್ ಪ್ರಶಸ್ತಿ (ಪ್ರಾದೇಶಿಕ ಭಾಷಾ ಚಿತ್ರ): ರಾಮ್ ಶೆಟ್ಟಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com