ಕಲುಷಿತ ಬೆಳ್ಳಂದೂರು ಕೆರೆ: ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ

ನೊರೆ ಉಗುಳುವ ಮೂಲಕ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ಬೆಳ್ಳಂದೂರು ಕೆರೆ ಪರಿಸ್ಥಿತಿ ಕುರಿತಂತೆ ನೂತನ ಲೋಕಾಯುಕ್ತ ಪಿ ವಿಶ್ವನಾಥ್ ಶೆಟ್ಟಿ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ನೂತನ ಲೋಕಾಯುಕ್ತ ಪಿ ವಿಶ್ವನಾಥ್ ಶೆಟ್ಟಿ (ಸಂಗ್ರಹ ಚಿತ್ರ)
ನೂತನ ಲೋಕಾಯುಕ್ತ ಪಿ ವಿಶ್ವನಾಥ್ ಶೆಟ್ಟಿ (ಸಂಗ್ರಹ ಚಿತ್ರ)

ಬೆಂಗಳೂರು: ನೊರೆ ಉಗುಳುವ ಮೂಲಕ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ಬೆಳ್ಳಂದೂರು ಕೆರೆ ಪರಿಸ್ಥಿತಿ ಕುರಿತಂತೆ ನೂತನ ಲೋಕಾಯುಕ್ತ ಪಿ ವಿಶ್ವನಾಥ್ ಶೆಟ್ಟಿ ಅವರು ಸ್ವಯಂ ಪ್ರೇರಿತ ದೂರು  ದಾಖಲಿಸಿಕೊಂಡಿದ್ದಾರೆ.

ಕಳೆದ ಜನವರಿ 28ರಂದು ನೂತನ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದ ಪಿ ವಿಶ್ವನಾಥ್ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಸ್ವಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಬೆಳ್ಳಂದೂರು ಕೆರೆ ಸ್ವಚ್ಛತೆಗಾಗಿ ರಾಜ್ಯ ಸರ್ಕಾರ  ನೂರಾರು ಕೋಟಿ ವ್ಯಯಿಸಿದೆಯಾದರೂ ಕೆರೆ ಮಾತ್ರ ಈ ವರೆಗೂ ಕನಿಷ್ಟ ಶೇ.10 ರಷ್ಟೂ ಸ್ವಚ್ಛವಾಗಿಲ್ಲ. ಬದಲಿಗೆ ಮೊದಲಿಗಿಂತಲೂ ಇನ್ನೂ ಕೆಟ್ಟು ನಿಂತಿದ್ದು, ರಸ್ತೆ ಮೇಲಷ್ಟೇ ಅಲ್ಲದೇ ಇದೀಗ ಸುತ್ತಮುತ್ತಲಿನ ಮನೆಗಳ ಮೇಲೂ  ವಿಷಕಾರಿ ನೊರೆ ಹಾರಿ ಬರುತ್ತಿದೆ. ಈ ಬಗ್ಗೆ ತಮಗೆ ಬಂದಿರುವ ವರದಿಯನ್ನಾಧರಿಸಿ ವಿಶ್ವನಾಥ್ ಶೆಟ್ಟಿ ಅವರು ದೂರು ದಾಖಲಿಸಿಕೊಂಡಿದ್ದು, ಕೆರೆ ಸ್ವಚ್ಛತೆ ಹೆಸರಿನಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿಬಹುದು ಎಂಬ ಶಂಕೆ ಮೇರೆಗೆ  ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ತಮಗೆ ಬಂದಿರುವ ವರದಿಯನ್ವಯ ಕೆರೆ ಸ್ವಚ್ಛತೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವಿಶ್ವನಾಥ್ ಶೆಟ್ಟಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. "ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ತಾವು  ಪರಿಶೀಲಿಸಿದ್ದೇವೆ. ಅಲ್ಲದೆ ಖುದ್ಧ ಸ್ಥಳ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಪ್ರಮುಖವಾಗಿ ಕಸವನ್ನು ಕೆರೆ ಆಂಗಳಕ್ಕೆ ತಂದು ಎಸೆಯುವುದು, ಕಸಕ್ಕೆ ಬೆಂಕಿ ಇಡುವುದು ಇಂತಹ ಪ್ರಕರಣಗಳು  ಅಲ್ಲಿ ಸಾಮಾನ್ಯವಾಗಿದೆ. ಹೀಗಾಗಿ ಇಲ್ಲಿನ ಕೆರೆ ಸ್ವಚ್ಛತೆಗಾಗಿ ಸಂಬಂಧ ಪಟ್ಟ ಇಲಾಖೆಗಳ ಕೈಗೊಂಡ ಕ್ರಮಗಳ ಕುರಿತು ತನಿಖೆ ನಡೆಸಬೇಕಿದೆ. ಇದೇ ಕಾರಣಕ್ಕಾಗೆ ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಮಾಲಿನ್ಯ  ನಿಯಂತ್ರಣ ಮಂಡಳಿಯಿಂದ ವರದಿ ಕೇಳಲಾಗಿದೆ. ನಾಲ್ಕು ವಾರಗಳಲ್ಲಿ ವರದಿ ಕೈ ಸೇರುವ ಸಾಧ್ಯತೆ ಇದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com