ಬೆಂಗಳೂರು: ಬರೋಬ್ಬರೀ 195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿ ಒಂದು ಬಾರಿಯೂ ದಂಡ ಕಟ್ಟದ ಕಾರು!

ಬೆಂಗಳೂರಿನಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿರುವ ಖ್ಯಾತಿಗೆ ಕೆಎ02-MF5728 ನಂಬರಿನ ಕಾರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿರುವ ಖ್ಯಾತಿಗೆ ಕೆಎ02-MF5728 ನಂಬರಿನ ಕಾರು ಪಾತ್ರವಾಗಿದೆ.

ಮಹಾಲಕ್ಷ್ಮಿ ಎಂ ಸಂತೋಷ್ ಎಂಬುವರ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿದ್ದು, ಇದುವರೆಗೂ ಸುಮಾರು 195 ಬಾರಿ ನಿಯಮ ಉಲ್ಲಂಘಿಸಿ ಪಾರ್ಕಿಂಗ್ ಮಾಡಲಾಗಿದೆ.

ರಾಜು ಗುಜಾರ್ ಎಂಬುವರ ಹೆಸರಿನಲ್ಲಿ ನೋಂದಣಿಯಾಗಿರುವ ಕೆಎ05 -MF3310, 173 ಬಾರಿ ನಿಯಮ ಉಲ್ಲಂಘಿಸಿ 2ನೇ ಸ್ಥಾನದಲ್ಲಿದೆ. ಜಿತೇಂದ್ರ ಕುರೇಲ್ ಎಂಬುವರಿಗೆ ಸೇರಿದ ಕೆಎ05-MB7901  ಸಂಖ್ಯೆಯ ಕಾರಿನ ವಿರುದ್ಧ 163 ಕೇಸು ದಾಖಲಾಗಿದೆ.

ಮಹಾಲಕ್ಷ್ಮಿ ಅವರಿಗೆ ಸೇರಿರುವ ಕಾರು ಬೆಂಗಳೂರು ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಲಾಗಿದೆ, 195 ಪಾರ್ಕಿಂಗ್ ನಿಯಮ ಉಲ್ಲಂಘಿಸಿರುವ ಈ ಕಾರಿನ ಮಾಲೀಕ ಪ್ರತಿ ಕೇಸಿಗೆ 100 ರು ನಂತೆ ಒಟ್ಟು 19,500 ರು ದಂಡ ಕಟ್ಟಬೇಕಿದೆ.

ಇದೇ ರೀತಿ 163 ಕೇಸು ದಾಖಲಾಗಿರುವ ರಾಜು ಅವರು ಕಾರು ಕೂಡ ಪಶ್ಚಿಮ ವಿಭಾಗ ಅರ್ ಟಿ ಓ ಕಚೇರಿಯಲ್ಲಿ ನೋಂದಣಿಯಾಗಿದ್ದು, ಫುಟ್ ಪಾತ್ ನಲ್ಲಿ 4 ಬಾರಿ ಪಾರ್ಕಿಂಗ್ ಮಾಡಿದ್ದು ಸೇರಿ ಒಟ್ಟು 163 ಪ್ರಕರಣ ದಾಖಲಾಗಿವೆ.

ಸಂಚಾರಿ ನಿಯಮ ಹಾಗೂ ಪಾರ್ಕಿಂಗ್ ನಿಯಮ ಉಲ್ಲಂಘಿಸಿರುವ ಸುಮಾರು 500 ವಾಹನಗಳ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಅನೇಕ ಮಾಲೀಕರು ಸ್ವತಃ ತಾವೇ ತಪ್ಪು ಮಾಡಿರುವುದು ಕಂಡು ಬಂದಿದೆ, ಆದರೆ ಇದುವರೆಗೂ ದಂಡ ಕಟ್ಟಿಲ್ಲ,  ಒಂದು ವೇಳೆ ದಂಡವನ್ನು ಕಟ್ಟದಿದ್ದರೇ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮ ಉಲ್ಲಂಘನೆ ಬಗ್ಗೆ ಕಾರಿನ ಮಾಲೀಕರಿಗೆ ಮಾಹಿತಿ ಇಲ್ಲದಿರಬಹುದು. ಅಥವಾ ಮಾಲೀಕರು ತಮ್ಮ  ವಿಳಾಸ ಬದಲಾಯಿಸಬಾರದು, ಕೆಲವರು ತಮ್ಮ ವಾಹನಗಳನ್ನು ಮಾರಾಟ ಮಾಡಿರಬಹುದು. ಹೀಗಾಗಿ ದಂಡ ಕಟ್ಟಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com