ಹನಿಟ್ರ್ಯಾಪ್ ದಂಧೆ; ಬೆಂಗಳೂರಿನಲ್ಲಿ ಮೂವರು ಯುವತಿಯರು ಸೇರಿ ಐವರ ಬಂಧನ

ಹುಡುಗಿಯರನ್ನು ಮುಂದಿಟ್ಟುಕೊಂಡು ಹನಿ ಟ್ರ್ಯಾಪ್ ದಂಧೆ ಮೂಲಕ ಹಣ ಸುಲಿಗೆ ಮಾಡುತ್ತಿದ್ದ ಕಿರಾತಕರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಹುಡುಗಿಯರನ್ನು ಮುಂದಿಟ್ಟುಕೊಂಡು ಹನಿ ಟ್ರ್ಯಾಪ್ ದಂಧೆ ಮೂಲಕ ಹಣ ಸುಲಿಗೆ ಮಾಡುತ್ತಿದ್ದ ಕಿರಾತಕರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಿಜಯನಗರ ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿ ಹನಿ ಟ್ರ್ಪಾಪಿಂಗ್ ದಂಧೆಯಲ್ಲಿ ತೊಡಗಿದ್ದ ಐದು ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಮೂವರು ಯುವತಿಯರೂ ಸೇರಿದ್ದಾರೆ ಎಂದು ತಿಳಿದುಬಂದಿದೆ.  ಬಂಧಿತರನ್ನು ಆನಂದ್‌ ಆಚಾರ್‌ (43 ವರ್ಷ), ರವಿಕುಮಾರ್‌ (42 ವರ್ಷ) ಎಂದು ಗುರುತಿಸಲಾಗಿದ್ದು, ಇವರೊಂದಿಗೆ ಮೂವರು ಯುವತಿಯರನ್ನೂ ಬಂಧಿಸಲಾಗಿದೆ.

ಪೊಲೀಸರು ತಿಳಿಸಿರುವಂತೆ ಬಂಧಿತ ಆರೋಪಿಗಳು ಲೊಕ್ಯಾಂಟೋ ಎಂಬ ವೆಬ್‌'ಸೈಟ್‌'ನಲ್ಲಿ ಹುಡುಗಿಯರ ಫೋಟೋಗಳನ್ನು ಹಾಕಿ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡುವಂತಹ ಪೋಸ್ಟ್‌ ಹಾಕುತ್ತಿದ್ದರು. ಜತೆಗೆ, ಮೊಬೈಲ್‌ ಸಂಖ್ಯೆ  ನೀಡುತ್ತಿದ್ದರು. ಇದಕ್ಕೆ ಫಣೀಂದ್ರ ಎಂಬುವರು ಪ್ರತಿಕ್ರಿಯೆ ನೀಡಿದ್ದರು. ಅವರನ್ನು ವಿಜಯನಗರ ಬಸ್‌ ನಿಲ್ದಾಣದ ಬಳಿಗೆ ಬರುವಂತೆ ಯುವತಿಯಿಂದ ಹೇಳಿಸಿದ್ದರು. ಅದರಂತೆ ಫಣೀಂದ್ರ ಬಸ್‌ ನಿಲ್ದಾಣದ ಬಳಿಗೆ ಹೋಗಿದ್ದರು. ಈ  ವೇಳೆ ಯುವತಿ ಫಣೀಂಧ್ರ ಅವರನ್ನು ಖಾಸಗಿ ಹೊಟೆಲ್ ನ ರೂಮ್ ಗೆ ಕರೆದುಕೊಂಡು ಹೋಗಿದ್ದರು.

ಕೆಲವೇ ನಿಮಿಷಗಳಲ್ಲಿ ಆರು ಮಂದಿ ಅವರಿದ್ದ ಕೊಠಡಿಗೆ ಬಂದಿದ್ದರು. ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಚಿತ್ರಗಳಿದ್ದು, ಪೊಲೀಸರಿಗೆ ನೂರು ನೀಡುವುದಾಗಿ ಬೆದರಿಸಿದ್ದರು. ಬಳಿಕ ಫಣೀಂದ್ರ ಅವರ ಬಳಿ ಇದ್ದ ರು.10 ಸಾವಿರ  ನಗದನ್ನು ಕಿತ್ತುಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು. ಅಂತೆಯೇ ಈ ಆರೋಪಿಗಳ ವಿರುದ್ಧ 25–30 ದೂರುಗಳಿವೆ. ಆರೋಪಿಗಳಿಂದ ಲ್ಯಾಪ್‌ ಟಾಪ್‌, ಮೊಬೈಲ್‌, ಕೆಲ ದಾಖಲೆ ಪತ್ರಗಳನ್ನು ವಶ  ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಈ ತಂಡದ ಇತರೆ ನಾಲ್ವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com