ಜಲ್ಲಿಕಟ್ಟು ಬೆಂಬಲಕ್ಕೆ ನಿಂತ ಶ್ರೀ ಶ್ರೀ ರವಿಶಂಕರ್ ಗುರೂಜಿ

ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡುವಂತೆ ಆಗ್ರಹಿಸಿ ತಮಿಳುನಾಡಿನ ಜನತೆ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಗುರುವಾರ ಜಲ್ಲಿಕಟ್ಟು ಕ್ರೀಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ...
ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ
ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ

ಬೆಂಗಳೂರು: ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡುವಂತೆ ಆಗ್ರಹಿಸಿ ತಮಿಳುನಾಡಿನ ಜನತೆ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಗುರುವಾರ ಜಲ್ಲಿಕಟ್ಟು ಕ್ರೀಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಲ್ಲಿಕಟ್ಟು ವಿವಾದ ಸಂಬಂಧ ಇಂದು ಪ್ರತಿಕ್ರಿಯೆ ನೀಡಿರುವ ಅವರು, ತಮಿಳುನಾಡು ಜನರ ನಂಬಿಕೆ ಹಾಗೂ ನೋವು ಅರ್ಥವಾಗುತ್ತದೆ. ತಮಿಳುನಾಡಿನ ಜನತೆಗೆ ಪೊಂಗಲ್ ಹಬ್ಬ ದೊಡ್ಡ ಹಬ್ಬವಾಗಿದೆ. ಹಬ್ಬದ ಎರಡನೇ ದಿನವನ್ನು ಗೂಳಿಗಳನ್ನು ಬಿಟ್ಟು ಜಲ್ಲಿಕಟ್ಟು ಕ್ರೀಡೆಯನ್ನು ಆಡಲಾಗುತ್ತದೆ. ಹಬ್ಬಕ್ಕಾಗಿಯೇ ಗೂಳಿಗಳನ್ನು ವರ್ಷಗಳ ಕಾಲ ತಯಾರು ಮಾಡಲಾಗಿರುತ್ತದೆ. ಗೂಳಿಗಳನ್ನು ಗೌರವಯುತವಾಗಿ ನೋಡುತ್ತಾರೆ, ಅವುಗಳನ್ನು ಸುರಕ್ಷಿತವಾಗಿ ನೋಡಿಕೊಂಡು ಬರುತ್ತಾರೆಂದು ಹೇಳಿದ್ದಾರೆ.

ಕ್ರೀಡೆಯೊಂದು ಧಾರ್ಮಿಕ ಆಚರಣೆಯಾಗಿದ್ದು, ಶ್ರೀಮಂತರಿಗೆ ಇದು ಆಟವಲ್ಲ. ನ್ಯಾಯಯುತ ತೀರ್ಪು ಬರಬೇಕೆಂದರೆ ನಾವು ನ್ಯಾಯಾಲಯದಲ್ಲಿ ಸರಿಯಾದ ರೀತಿಯಲ್ಲಿ ವಾದ ಮಂಡಿಸಬೇಕಿದೆ. ತಮಿಳುನಾಡಿಗೆ ಇಂದು ಎಂತಹ ಪ್ರಮುಖ ಆಚರಣೆಯೆಂಬುದನ್ನು ತಿಳಿಸಬೇಕಿದೆ. ನ್ಯಾಯಯುತ ತೀರ್ಪು ಬರಲಿ ಎಂದು ಆಶಿಸುತ್ತೇನೆಂದು ತಿಳಿಸಿದ್ದಾರೆ.
 
ಇದೇ ವೇಳೆ ತಮಿಳುನಾಡಿಗೆ ಸಲಹೆ ನೀಡಿರುವ ಅವರು, ಪ್ರಸ್ತುತ ತಮಿಳುನಾಡಿನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು. ಇಂತಹ ಸಮಯದಲ್ಲಿ ಸಮಾಜಘಾತುಕ ಶಕ್ತಿಗಳು ತಮ್ಮ ಕೆಲಸ ಮಾಡಲು ಯತ್ನ ನಡೆಸುತ್ತವೆ. ಇದಕ್ಕೆ ಸರ್ಕಾರ ದಾರಿ ಮಾಡಿಕೊಡಬಾರದು ಎಂದಿದ್ದಾರೆ.

ಈ ಮೂಲಕ ತಮಿಳುನಾಡು ಜನತೆಗೆ ಸಂದೇಶವನ್ನು ಹೇಳಲು ಇಚ್ಛಿಸುತ್ತೇನೆ. ತಮಿಳುನಾಡು ಜನತೆಯ ಪರವಾಗಿ ನಾನಿದಿದ್ದೇನೆ. ಪ್ರತಿಭಟನೆಯಿಂದ ರಾಜಕೀಯ ಹಾಗೂ ಸಮಾಜಘಾತುಕ ಶಕ್ತಿಗಳನ್ನು ದೂರವಿಡಿ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com