ಹವಳ ಮಾತಾಡ್ತಂತೆ: ಗಂಡ ಸಾಯ್ತಾರೆಂದು ತಾಳಿ ತೆಗೆದು ಹವಳ ಒಡೆದ ಮಹಿಳೆಯರು!
ಮಾಂಗಲ್ಯ ಸರಕ್ಕೆ ಹಾಕಿದ್ದ ಹವಳ ಮಾತನಾಡಿತು...ತಾಳಿಯಲ್ಲಿರುವ ಹವಳ ತೆಗೆಯದಿದ್ದರೆ ಗಂಡನ ಸಾವು ಖಚಿತ ಎಂಬ ವದಂತಿಗಳು ಹಲವೆಡೆ ಹರಡಿದ್ದು. ಗಾಬರಿಗೊಂಡಿರುವ ಮಹಿಳೆಯರು ತಾಳಿ ತೆಗೆದು ಅದರಲ್ಲಿರುವ ಕೆಂಪು ಹವಳಗಳನ್ನು...
ಬಳ್ಳಾರಿ: ಮಾಂಗಲ್ಯ ಸರಕ್ಕೆ ಹಾಕಿದ್ದ ಹವಳ ಮಾತನಾಡಿತು...ತಾಳಿಯಲ್ಲಿರುವ ಹವಳ ತೆಗೆಯದಿದ್ದರೆ ಗಂಡನ ಸಾವು ಖಚಿತ ಎಂಬ ವದಂತಿಗಳು ಹಲವೆಡೆ ಹರಡಿದ್ದು. ಗಾಬರಿಗೊಂಡಿರುವ ಮಹಿಳೆಯರು ತಾಳಿ ತೆಗೆದು ಅದರಲ್ಲಿರುವ ಕೆಂಪು ಹವಳಗಳನ್ನು ಒಡೆದು ಹಾಕಿರುವ ಘಟನೆ ಬುಧವಾರ ನಡೆದಿದೆ.
ತಾಳಿಯಲ್ಲಿರುವ ಕೆಂಪು ಹವಳಕ್ಕೆ ಜೀವ ಬರುತ್ತದೆ. ಅದು ಮಾತನಾಡಿದರೆ ಪತಿ ಸಾವಿಗೀಡಾಗುತ್ತಾನೆಂಬ ವದಂತಿ ಬಳ್ಳಾರಿ, ದಾವಣಗೆರೆ, ಕೊಪ್ಪಳ ಜಿಲ್ಲೆ ಸೇರಿದಂತೆ ಹಲವೆಡೆ ಹರಡಿದೆ.
ಮಂಗಳವಾರ ಮಧ್ಯರಾತ್ರಿಯಿಂದಲೇ ಈ ಗಾಳಿ ಸುದ್ದಿ ಹರಡಿದ್ದು, ಮಹಿಳೆಯರು ಆತಂಕ್ಕೊಳಗಾಗಿದ್ದಾರೆ. ಪತಿಯ ಜೀವಕ್ಕೆ ಕುತ್ತು ಬರುತ್ತದೆ ಎಂದು ಹೆದರಿದ ಗೃಹಿಣಿಯರು ತಾಳಿಯ ಜೊತೆಗಿದ್ದ ಹವಳಗಳನ್ನು ಒಡೆದು ಪುಡಿ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.