ಬೆಂಗಳೂರು: ಸಿನಿಮಾ ಮಾದರಿಯಲ್ಲಿ ಆಭರಣದ ಅಂಗಡಿ ದರೋಡೆ

ವಿಲಕ್ಷಣ ಘಟನೆಯೊಂದರಲ್ಲಿ ನಗರದ ಅಂಗಡಿ ಮೇಲೆ ಲಾಡ್ಜ್ ಕೋಣೆಯಿಂದ ರಂಧ್ರ ಕೊರೆಯುವುದರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಲಕ್ಷಣ  ಘಟನೆಯೊಂದರಲ್ಲಿ ನಗರದ ಅಂಗಡಿ ಮೇಲೆ ಲಾಡ್ಜ್ ಕೋಣೆಯಿಂದ ರಂಧ್ರ ಕೊರೆಯುವುದರ ಮೂಲಕ ಜ್ಯುವೆಲ್ಲರಿ ಶೋರೂಂನ ದರೋಡೆ ಮಾಡಿದ ಘಟನೆ ನಡೆದಿದೆ.
ಕಾಟನ್ ಪೇಟೆ ಮುಖ್ಯ ರಸ್ತೆಯಲ್ಲಿರುವ ಕಾಂಚನ ಜ್ಯುವೆಲ್ಲರಿ ಶಾಪ್ ನಲ್ಲಿ ಈ ಘಟನೆ ನಡೆದಿದೆ. ಎರಡು ಮಹಡಿಯ ಕಟ್ಟಡದ ನೆಲ ಮಹಡಿಯಲ್ಲಿ ಜ್ಯುವೆಲ್ಲರಿ ಶೋರೂಂ ಇದೆ. ಮೊದಲ ಮಹಡಿಯಲ್ಲಿ ಲಾಡ್ಜ್ ಇದೆ.
20 ದಿನಗಳಿಂದ ಲಾಡ್ಜ್ ನಲ್ಲಿ ಬಾಡಿಗೆಗೆ ರೂಂ ಪಡೆದು ದರೋಡೆಕೋರ ವಾಸವಾಗಿದ್ದನು. ತನ್ನ ರೂಮಿನ ನೆಲವನ್ನು ಎಲೆಕ್ಟ್ರಾನಿಕ್ ಡ್ರಿಲ್ಲಿಂಗ್ ಟೂಲ್ಸ್ ನ್ನು ಬಳಸಿದ್ದನು. ನಂತರ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ  ಬೀಗ ಮುರಿದು ಚಿನ್ನ, ಬೆಳ್ಳಿಯನ್ನು ಕದ್ದು ನಂತರ ತನ್ನ ಕೋಣೆಗೆ ಹತ್ತಿ ಕೋಣೆಯನ್ನು ಖಾಲಿ ಮಾಡಿದ್ದಾನೆ.
ಲಾಡ್ಜ್ ನಲ್ಲಿ ರೂಂ ಪಡೆಯಲು ನಕಲಿ ಮತದಾರರ ಗುರುತು ಪತ್ರವನ್ನು ಆತ ಪಡೆದಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ.  ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com