ಬೆಂಗಳೂರು: ಮಾಜಿ ಸಚಿವ ಹಾಗೂ ನಟ ಅಂಬರೀಷ್ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾದ ಅಂಬರೀಷ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಮೂರು ವರ್ಷಗಳಿಂದ ರೊಟೀನ್ ಚೆಕಪ್‍ಗೆ ಅಂಬರೀಷ್ ಬರ್ತಿದ್ದಾರೆ. ಇವತ್ತು ಹೆಲ್ತ್ ಚೆಕಪ್‍ಗೆ ಬಂದಿದ್ರು. ರಕ್ತ ಪರೀಕ್ಷೆ ನಡೆಯುತ್ತಿದೆ. ಭಯಪಡುವಂತಹದ್ದು ಏನು ಇಲ್ಲ ಒಂದರೆರಡು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಯ ದಿನ ವಿಧಾನಸೌಧಕ್ಕೆ ತಮಾಷೆಗಾಗಿ ಅಂಬರೀಷ್ ವ್ಹೀಲ್ ಚೇರಿ್ ನಲ್ಲಿ ಆಗಮಿಸಿದ್ದರು.