ಹುಟ್ಟೂರು ನೆಲೋಗಿಯಲ್ಲೇ ಧರ್ಮಸಿಂಗ್ ಅಂತ್ಯ ಸಂಸ್ಕಾರ!

ಗುರುವಾರ ನಿಧನರಾದ ಮಾಜಿ ಸಿಎಂ ಧರ್ಮ ಸಿಂಗ್​ ಅವರ ಅಂತ್ಯಸಂಸ್ಕಾರ ಶುಕ್ರವಾರ ಅವರು ಹುಟ್ಟೂರಾದ ನೆಲೋಗಿಯಲ್ಲಿ ನಡೆಯಲಿದ್ದು, ಅದಕ್ಕೂ ಮುಂಚೆ ದೇಹವನ್ನು ಜೇವರ್ಗಿಯ ನೆಹರು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.
ಮಾಜಿ ಸಿಎಂ ಧರಂ ಸಿಂಗ್
ಮಾಜಿ ಸಿಎಂ ಧರಂ ಸಿಂಗ್

ಜೇವರ್ಗಿ: ಗುರುವಾರ ನಿಧನರಾದ ಮಾಜಿ ಸಿಎಂ ಧರ್ಮ ಸಿಂಗ್​ ಅವರ ಅಂತ್ಯಸಂಸ್ಕಾರ ಶುಕ್ರವಾರ ಅವರು ಹುಟ್ಟೂರಾದ ನೆಲೋಗಿಯಲ್ಲಿ  ನಡೆಯಲಿದ್ದು, ಅದಕ್ಕೂ ಮುಂಚೆ ದೇಹವನ್ನು ಜೇವರ್ಗಿಯ ನೆಹರು ಮೈದಾನದಲ್ಲಿ ಅಂತಿಮ  ದರ್ಶನಕ್ಕೆ ಇಡಲಾಗಿದೆ.

ಜೇವರ್ಗಿಯ ನೆಹರು ಮೈದಾನದಲ್ಲಿರುವ ಧರಂ ಸಿಂಗ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಉತ್ತರ ಕರ್ನಾಕದ ಬಹುತೇಕ ಜಿಲ್ಲೆಗಳಿಂದ ಅಪಾರ ಅಭಿಮಾನಿಗಳು ಆಗಮಿಸುತ್ತಿದ್ದಾರೆ.  ಧರ್ಮಸಿಂಗ್ ಅವರ ಪಾರ್ಥಿವ  ಶರೀರ ಕಲಬರಗಿಯ ನೂತನ ವಿದ್ಯಾಲಯದ ಮೈದಾನಕ್ಕೆ ರವಾನೆಯಾಗಿತ್ತು. ಇಲ್ಲಿ ಅಂತಿಮ ದರ್ಶನ ಮುಗಿದ ಬಳಿಕ 12 ಗಂಟೆ ವೇಳೆಗೆ ಧರ್ಮ ಸಿಂಗ್​ ಅವರ ಪಾರ್ಥಿವ ಶರೀರವನ್ನು ಜೇವರ್ಗಿಯ ತಾಲೂಕು ಕ್ರೀಡಾಂಗಣದಲ್ಲಿ  ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಜೇವರ್ಗಿಯ ನೆಹರು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ಹಾಗೂ ಸಹಾಯಕ ಆಯುಕ್ತ ರಾಚಪ್ಪ ಅವರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಂತೆಯೇ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಸಿದ್ಧತೆ ಪರಿಶೀಲಿಸಿದ್ದಾರೆ. ಗಣ್ಯರಿಗೆ ವಿಶೇಷ ಆಸನಗಳ  ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನ ಮುಗಿದ ಬಳಿಕ ಹುಟ್ಟೂರಾದ ನೆಲೋಗಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಧರ್ಮ ಸಿಂಗ್​ ಅವರ ಅಂತ್ಯಕ್ರಿಯೆ ನೆರವೇರಲಿದೆ.

ದಾರಿಯುದ್ದಕ್ಕೂ ಜನರ ಅಂತಿಮ ನಮನ
ಇನ್ನು ಧರಂ ಸಿಂಗ್ ಅವರ ಪಾರ್ಥೀವ ಶರೀರವನ್ನು ಕಲಬುರಗಿಗೆ ರವಾನೆ ಮಾಡುವ ವೇಳೆ ದಾರಿಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನ ನಮನ ಸಲ್ಲಿಸಿದರು. ತಮ್ಮ ನೆಚ್ಚಿನ ನಾಯಕನಿಗೆ ಅಶ್ರುತರ್ಪಣ ಸುರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com