ಚಿಲ್ಲರೆ ಸಮಸ್ಯೆಗೆ ಅಂತ್ಯ: ಸ್ಮಾರ್ಟ್'ಕಾರ್ಡ್ ವಿತರಣೆ ಆರಂಭಿಸಿದ ಬಿಎಂಟಿಸಿ

ಪ್ರತಿನಿತ್ಯ ಚಿಲ್ಲರೆ ಸಮಸ್ಯೆಗಳನ್ನು ಎದುರಿಸುತ್ತಿದ್ದ ಪ್ರಯಾಣಿಕರ ಸಹಾಯಕ್ಕೆ ಬಂದಿರುವ ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ವಿತರಿಸುವುದನ್ನು ಆರಂಭಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಪ್ರತಿನಿತ್ಯ ಚಿಲ್ಲರೆ ಸಮಸ್ಯೆಗಳನ್ನು ಎದುರಿಸುತ್ತಿದ್ದ ಪ್ರಯಾಣಿಕರ ಸಹಾಯಕ್ಕೆ ಬಂದಿರುವ ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ವಿತರಿಸುವುದನ್ನು ಆರಂಭಿಸಿದೆ. 
ಮೊದಲ ಹಂತದಲ್ಲಿ ಸ್ಮಾರ್ಟ್ ಕಾರ್ಡ್ ಗಳನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ವಲಯಕ್ಕೆ ಅಕ್ಟೋಬರ್ ತಿಂಗಳ ನಂತರ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಸ್ಮಾರ್ಟ್ ವಿತರಣೆ ಕುರಿತಂತೆ ಇದೀಗ ಹಲವು ಗೊಂದಲಗಳಿದ್ದು, ಸ್ಮಾರ್ಟ್ ಕಾರ್ಡ್ ಖರೀಸುವುದು ಹೇಗೆ ಹಾಗೂ ಅಲ್ಲಿ ಸಿಗುತ್ತದೆ ಎಂಬ ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...
ಸ್ಮಾರ್ಟ್ ಕಾರ್ಡ್ ಪಡೆಯಲು ಇಚ್ಛಿಸುವವರು ಪ್ರಮುಖ ಬಿಎಂಟಿಸಿ ಬಸ್ ನಿಲ್ದಾಣಗಳಾಗಿರುವ ಮೆಜೆಸ್ಟಿಕ್, ಶಿವಾಜಿನಗರ, ಕೆಂಗೇರಿ, ದೊಮ್ಮಲೂರು, ಬನಶಂಕರಿ, ಐಟಿಪಿಎಲ್, ಜಯನಗರ, ವಿಜಯನಗರ, ಕೋರಮಂಗಲ ಮತ್ತು ಯಶವಂತಪುರ ಗಳಲ್ಲಿ ಪಡೆಯಬಹುದಾಗಿದೆ. ಇದರಂತೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ. 
ಬೆಂಗಳೂರಿನಲ್ಲಿ ಒಟ್ಟು 13 ಬೆಂಗಳೂರು ಒನ್ ಕೇಂದ್ರವಿದ್ದು, ಜೆ.ಪಿ.ನಗರ, ಸಂಜಯ್ ನಗರ, ನಾಗರಭಾವಿ, ಜೀವನಹಳ್ಳಿ, ರಾಜಾಜಿನಗರ, ಕೆ.ಆರ್. ಪುರಂ, ಆರ್.ಟಿ. ನಗರ, ಕವಲ್ ಭೈರಸಂದ್ರ, ಇಂದಿರಾನಗರ, ಮಲ್ಲೇಶ್ವರಂ, ಕೊಡಿಗೆಹಳ್ಳಿ, ಬಸವೇಶ್ವರನಗರ ಎಲ್ಐಸಿ ಕಾಲೋನಿ ಮತ್ತು ಅರ್ಕೆರೆ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ. 
ಮೊಬೈಲ್ ಪ್ರೀಪೇಯ್ಡ್ ರೀಚಾರ್ಜ್ ಮಾಡುವ ರೀತಿಯಲ್ಲಿ ಹಣ ನೀಡಿ ಈ ಕಾರ್ಡ್ ನ್ನು ಆಕ್ಸಿಸ್ ಬ್ಯಾಂಕ್ ಇಲ್ಲವೇ ಬಿಎಂಟಿಸಿ ಕೇಂದ್ರಗಳಲ್ಲಿ ಟಾಪ್ ಆಪ್ ಮಾಡಿಕೊಳ್ಳಬಹುದಾಗಿದೆ. ಟಾಪ್ ಅಪ್ ಮಿತಿ ರೂ.10 ಸಾವಿರ ನಿಗದಿ ಪಡಿಸಲಾಗಿದ್ದು, ರೂ.100 ರಿಂದ 1,000 ಹೀಗೆ ಟಾಪ್ ಅಪ್ ಬೆಲೆ ನಿಗದಿಯಾಗಿದೆ. ರೂ.10,000 ಸಾವಿರಕ್ಕಿಂದ ಅಧಿಕ ಮೊತ್ತ ರೀಚಾರ್ಜ್ ಮಾಡುವುದಾದರೆ ಅದಕ್ಕೆ ಗುರುತಿನ ಚೀಟಿ ನೀಡಬೇಕಾಗುತ್ತದೆ. 
ಸ್ಮಾರ್ಟ್ ಕಾರ್ಡ್ ಪಡೆಯಲು ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಕ್ರಿಯೆಗಳನ್ನು ಪಾಲನೆ ಮಾಡಬೇಕಾಗುತ್ತದೆ. ಅರ್ಜಿಗಳನ್ನು ತುಂಬಿ, ಸಂಬಂಧ ಪಟ್ಟ ದಾಖಲೆಗಳೊಂದಿಗೆ ಸಲ್ಲಿಕೆ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. 
ಇದಲ್ಲದೆ ಇಂಟರ್ನೆಟ್ ಮೂಲಕವೂ transit.axisbank.co.in ... www.mybmtc.com/passes ಇ-ಅಪ್ಲಿಕೇಶನ್ ಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಟೋಕನ್ ಸಂಖ್ಯೆಯನ್ನು ನೀಡಲಾಗುತ್ತದೆ. ಈ ನಂಬರ್ ಜೊತೆಗೆ ಶಾಲೆ ಅಥವಾ ಕಾಲೇಜಿನ ಮುದ್ರೆ, ಸಹಿಯೊಂದಿಗಿರುವ ಅರ್ಜಿಯನ್ನು ಕೌಂಟರ್ ಗಳಲ್ಲಿ ಸಲ್ಲಿಕೆ ಮಾಡಿ. ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com