ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆ ಬಳಕೆಗೆ ತೀವ್ರ ವಿರೋಧ: ಟ್ವಿಟರ್'ನಲ್ಲಿ ಅಭಿಯಾನ

ಪ್ರಾದೇಶಿಕ ಭಾಷಆ ನೀತಿಗಳನ್ನು ಗಾಳಿಗೆ ತೂರಿ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷಾ ಬಳಕೆ ಮಾಡಲಾಗಿದ್ದು, ಇದಕ್ಕೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆ ಬಳಕೆಗೆ ವಿರೋಧಿಸಿ ಬನವಾಸಿ ಬಳಗ ಪ್ರಕಾಶನವು ಟ್ವಿಟರ್ ನಲ್ಲಿ ಅಭಿಯಾನವನ್ನು ಆರಂಭಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಪ್ರಾದೇಶಿಕ ಭಾಷಆ ನೀತಿಗಳನ್ನು ಗಾಳಿಗೆ ತೂರಿ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷಾ ಬಳಕೆ ಮಾಡಲಾಗಿದ್ದು, ಇದಕ್ಕೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆ ಬಳಕೆಗೆ ವಿರೋಧಿಸಿ ಬನವಾಸಿ ಬಳಗ ಪ್ರಕಾಶನವು ಟ್ವಿಟರ್ ನಲ್ಲಿ ಅಭಿಯಾನವನ್ನು ಆರಂಭಿಸಿದೆ. 
ಚೆನ್ನೈ, ಕೋಲ್ಕತಾ ಮತ್ತು ದೆಹಲಿ ಸೇರಿದಂತೆ ಇತರೆಡೆ ಇರುವ ಮೆಟ್ರೋ ನಿಲ್ದಾಣಗಳಲ್ಲಿ 2 ಭಾಷೆಯ ನೀತಿ ಇರುವಾಗ ನಗರದಲ್ಲಿ ಮಾತ್ರ ತ್ರಿಭಾಷೆ ಬಳಕೆ ಏಕೆ ಎಂಬ ದನಿ ಗಟ್ಟಿಯಾಗಿ ಕೇಳಿಬರತೊಡಗಿವೆ. 
'ನಮ್ಮ ಮೆಟ್ರೋ ಹಿಂದಿ ಬಳಕೆ ಬೇಡ' ಎಂಬ ಅಭಿಯಾನವನ್ನು ಬನವಾಸಿ ಬಳಗ ಆಯೋಜಿಸಿದ್ದು, ಹೋರಾಟಕ್ಕೆ ಬೆಂಬಲ ಸೂಚಿಸಿ, ಹಿಂದಿ ಹೇರಿಯೆ ವಿರುದ್ಧ ದನಿ ಎತ್ತಲು ಹಾಗೂ ಸಮಾನ ಭಾಷಾ ನೀತಿಗಾಗಿ ಆಗ್ರಹಿಸಿ ಈ ಹೋರಾಟವನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದೆ. 
ಇದಲ್ಲದೆ, ಫೇಸ್ ಬುಕ್ ನಲ್ಲೂ ಬನವಾಸಿ ಬಳಗ ಪ್ರಕಾಶನ ಪೋಸ್ಟ್ ಹಾಕಿದ್ದು, ನಮ್ಮ ಮೆಟ್ರೋ ನಮ್ಮದಾಗಿಯೇ ಉಳಿಯಬೇಕೆಂದರೆ ಅನವಶ್ಯಕ ಹಿಂದಿ ಹೇರಿಕೆ ನಿಲ್ಲಬೇಕು. ಕನ್ನಡ ಸಾರ್ವಭೌಮತೆಯನ್ನು ಎತ್ತಿ ಹಿಡಿಯಿರಿ ಎಂದು ಹೇಳಿಕೊಂಡಿದೆ. 
ಬಸವಾಸಿ ಬಳಕ ಆಯೋಜಿಸಿರುವ ಈ ಅಭಿಯಾನದಲ್ಲಿ ಸಾಕಷ್ಟು ಕನ್ನಡಿಗರು ಪಾಲ್ಗೊಳ್ಳುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com