ಬ್ರಿಟನ್ ಎನ್ ಹೆಚ್ ಎಸ್ ನಿಂದ "ಹೆಲ್ತ್ ಸಿಟಿ" ಮೇಲ್ವಿಚಾರಣೆ: ಆರೋಗ್ಯ ಸಚಿವ ರಮೇಶ್ ಕುಮಾರ್

ಹುಬ್ಬಳ್ಳಿ - ಧಾರವಾಡದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹು ನಿರೀಕ್ಷಿತ ಹೆಲ್ತ್ ಸಿಟಿ ಯೋಜನೆಯ ಮೇಲ್ವಿಚಾರಣೆಯನ್ನು ಬ್ರಿಟನ್ ನ ಖ್ಯಾತ ಎನ್ ಹೆಚ್ ಎಸ್ (National Health Services) ಸಂಸ್ಥೆ ನಡೆಸಲಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಎರಡನೇ ಅಂತಾರಾಷ್ಟ್ರೀಯ ಆರೋಗ್ಯ ಪ್ರವಾಸೋದ್ಯಮ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ಘಾಟಿಸಿದ ರಮೇಶ್ ಕುಮಾರ್
ಎರಡನೇ ಅಂತಾರಾಷ್ಟ್ರೀಯ ಆರೋಗ್ಯ ಪ್ರವಾಸೋದ್ಯಮ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ಘಾಟಿಸಿದ ರಮೇಶ್ ಕುಮಾರ್
Updated on

ಬೆಂಗಳೂರು: ಹುಬ್ಬಳ್ಳಿ - ಧಾರವಾಡದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹು ನಿರೀಕ್ಷಿತ ಹೆಲ್ತ್ ಸಿಟಿ ಯೋಜನೆಯ ಮೇಲ್ವಿಚಾರಣೆಯನ್ನು ಬ್ರಿಟನ್ ನ ಖ್ಯಾತ ಎನ್ ಹೆಚ್ ಎಸ್ (National Health Services) ಸಂಸ್ಥೆ ನಡೆಸಲಿದೆ  ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಎರಡನೇ ಅಂತಾರಾಷ್ಟ್ರೀಯ ಆರೋಗ್ಯ ಪ್ರವಾಸೋದ್ಯಮ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಮೇಶ್ ಕುಮಾರ್ ಅವರು, ಹೆಲ್ಟ್ ಸಿಟಿಗಾಗಿ ರಾಜ್ಯ ಸರ್ಕಾರ ಸುಮಾರು 300 ಎಕರೆ  ಭೂಮಿಯನ್ನು ಗುರುತಿಸಿದ್ದು, ಇಲ್ಲಿ ಎಲ್ಲ ರೀತೀಯ ವೈದ್ಯಕೀಯ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ರಾಜ್ಯ ಸರ್ಕಾರದ ವತಿಯಿಂದ ಮಾಡಬೇಕಿರುವ ಕಾರ್ಯಗಳಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಭೂಮಿ ವಶಪಡಿಸಿಕೊಳ್ಳುವ  ಕಾರ್ಯ ಕೂಡ ಬಹುತೇಕ ಮುಕ್ತಾಯವಾಗಿದೆ ಎಂದು ಹೇಳಿದರು.

ಇದೇ ವೇಳೆ ಹೆಲ್ತ್ ಸಿಟಿಯಲ್ಲಿ ಒಂದು ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ, ವೈದ್ಯಕೀಯ, ಶುಶ್ರೂಷಾ ವಿಭಾಗ ಮತ್ತು ದಂತ ವೈದ್ಯಕೀಯ ಕಾಲೇಜುಗಳು ಹೆಲ್ಟ್ ಸಿಟಿ ಯೋಜನೆಯಲ್ಲಿರಲಿದೆ. ಬ್ರಿಟನ್ ಮೂಲಕ ಎನ್ ಹೆಚ್ ಎಸ್  ಸಂಸ್ಥೆಯಡಿಯಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲಾಗುತ್ತದೆ ಎಂದು ಹೇಳಿದರು.

ಕಳೆದ ಬಾರಿ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರು ಭಾರತಕ್ಕೆ ಭೇಟೀ ನೀಡಿದ್ದ ಸಂದರ್ಭದಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದದನ್ವಯ ಹೆಲ್ಟ್ ಸಿಟಿ ನಿರ್ಮಾಣ ಮಾಡಲಾಗುತ್ತಿದ್ದು, ದೇಶದ 11 ಪ್ರದೇಶಗಳಲ್ಲಿ ಈ ಪ್ರತಿಷ್ಠಿತ ಹೆಲ್ತ್ ಸಿಟಿ  ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಹೆಲ್ತ್ ಸಿಟಿ ಕೂಡ ಒಂದಾಗಿದ್ದು, ಈ ಬೃಹತ್ ಆಸ್ಪತ್ರೆಯಲ್ಲಿ 1 ಸಾವಿರಕ್ಕೂ ಹೆಚ್ಚು ಬೆಡ್ ಗಳು, ಹಾಗೂ ಅತ್ಯಾಧುನಿಕ ವೈದ್ಯಕೀಯ  ಸಲಕರಣಗಳನ್ನು ಅಳವಡಿಲಾಗುತ್ತದೆ. ಬಡ ಮತ್ತು ಬಡತನ ರೇಖೆಗಿಂತ ಕೆಳಗಿರುವ ಮಧ್ಯಮವರ್ಗದವರಿಗೆ ಇಲ್ಲಿ ಶೇ.20 ರಿಯಾಯಿತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com