ಮ್ಯಾನ್ ಹೋಲ್ ನಲ್ಲಿ 3 ಕಾರ್ಮಿಕರ ಸಾವು ಪ್ರಕರಣ: ಗುತ್ತಿಗೆದಾರರೇ ಹೊಣೆ ಎಂದ ಬಿಡಬ್ಯ್ಲೂ ಎಸ್ ಎಸ್ ಬಿ

ಸಿ.ವಿ ರಾಮನ್ ನಗರದಲ್ಲಿ ಮ್ಯಾನ್ ಹೋಲ್ ಗೆ ಇಳಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಗುತ್ತಿಗೆದಾರರೇ ನೇರ ಹೊಣೆ ಎಂದು...
ಪರಿಶೀಲನೇ ನಡೆಸುತ್ತಿರುವ ಜಾರ್ಜ್ ಮತ್ತು ಮೇಯರ್ ಪದ್ಮಾವತಿ
ಪರಿಶೀಲನೇ ನಡೆಸುತ್ತಿರುವ ಜಾರ್ಜ್ ಮತ್ತು ಮೇಯರ್ ಪದ್ಮಾವತಿ

ಬೆಂಗಳೂರು: ಸಿ.ವಿ ರಾಮನ್ ನಗರದಲ್ಲಿ ಮ್ಯಾನ್ ಹೋಲ್ ಗೆ ಇಳಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಗುತ್ತಿಗೆದಾರರೇ ನೇರ ಹೊಣೆ ಎಂದು ಬೆಂಗಳೂರು ನಗರ ನೀರು ಸರಬರಾಜು ಮಂಡಳಿ ತಿಳಿಸಿದೆ.

ರಾಮ್ ಕೇ ಎಂಟರ್ ಪ್ರೈಸಸ್ ಗುತ್ತಿಗೆ ಕಂಪನಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸಿದ್ದಾರೆ, ಹೀಗಾಗಿ ಪ್ರಕರಣ ಸಂಬಂಧ ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಎಂದು ಬಿಡಬ್ಲ್ಯೂ ಎಸ್ ಎಸ್ ಬಿ ಅಧ್ಯಕ್ಷರು ಹೇಳಿದ್ದಾರೆ.

ದುರಂತಕ್ಕೆ ಗುತ್ತಿಗೆದಾರರೇ ಪ್ರಮುಖ ಕಾರಣ, ಎಲ್ಲಾ ರೀತಿಯ ನಿಯಮಗಳನ್ನು ಗಾಳಿಗೆ ತೂರಿ  ಮ್ಯಾನ್ ಹೋಲ್ ಗೆ ಕಾರ್ಮಿಕರನ್ನು ಇಳಿಸಿದ್ದಾರೆ. ಈ ಸಂಬಂಧ ಬಿಡಬ್ಯ್ಬ ಎಸ್ ಎಸ್ ಬಿ ಅಧ್ಯಕ್ಷರಿಗೆ ವರದಿ ಸಲ್ಲಿಸಿದ್ದೇವೆ ಎಂದು ಮುಖ್ಯ ಎಂಜಿನೀಯರ್ ಮಂಜುನಾಥ್ ಹೇಳಿದ್ದಾರೆ.

ಕೆಲಸ ಆರಂಭಿಸುವ ಮುನ್ನ ಗುತ್ತಿಗೆದಾರರು ಕರಾಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸುವ ಸಂಬಂಧ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಜೊತೆಗೆ ಯಾವುದೇ ಯಂತ್ರೋಪಕರಣ ಬೇಕು ಎಂಬುದರ ಬಗ್ಗೆಯೂ ಮೆಮೋ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕಾರ್ಮಿಕರಿಗೆ ಯಾವುದೇ ಸುರಕ್ಷತಾ ವ್ಯವಸ್ಥೆ ಮಾಡಿರಲಿಲ್ಲ. ಸದ್ಯ ಗುತ್ತಿಗೆದಾರ ಹೈದರಾಬಾದ್ ನಲ್ಲಿದ್ದು ಬುಧವಾರ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಜಲಮಂಡಳಿಗೆ ಮಾಹಿತಿ ನೀಡದೇ, ಸದಾ ಬ್ಯುಸಿಯಾಗಿರುವ ರಸ್ತೆಯಲ್ಲಿ ರಾತ್ರಿ 10.30 ರವೇಳೆಗೆ ಕೆಲಸ ಆರಂಭಿಸಿರುವುದು ಗುತ್ತಿಗೆದಾರನ ತಪ್ಪು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಮೇಯರ್ ಪದ್ಮಾವತಿ ಜೊತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಜಾರ್ಜ್ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೂವರು ಕಾರ್ಮಿಕರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com