ಬೆಂಗಳೂರು: ಮುದ್ದು ಮಗಳಿಗೆ ಕಿಡ್ನಿ ದಾನ ಮಾಡಿ ಮರು ಜನ್ಮ ನೀಡಿದ ತಾಯಿ

ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದ ತನ್ನ ನಾಲ್ಕು ವರ್ಷದ ಮಗಳಿಗೆ ತಾಯಿಯೇ ತನ್ನ ಮೂತ್ರಪಿಂಡ ನೀಡಿ ಆಕೆಗೆ ಮರುಜನ್ಮ ನೀಡಿರುವ ಘಟನೆ ಬೆಂಗಳೂರಿನ ರೈನ್ ಬೋ ...
ರೈನ್ ಬೋ ಆಸ್ಪತ್ರೆ ವೈದ್ಯರೊಂದಿಗೆ ಅರ್ಪಿತಾ ಪೋಷಕರು
ರೈನ್ ಬೋ ಆಸ್ಪತ್ರೆ ವೈದ್ಯರೊಂದಿಗೆ ಅರ್ಪಿತಾ ಪೋಷಕರು

ಬೆಂಗಳೂರು: ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದ ತನ್ನ ನಾಲ್ಕು ವರ್ಷದ ಮಗಳಿಗೆ ತಾಯಿಯೇ ತನ್ನ ಮೂತ್ರಪಿಂಡ ನೀಡಿ ಆಕೆಗೆ ಮರುಜನ್ಮ ನೀಡಿರುವ ಘಟನೆ ಬೆಂಗಳೂರಿನ ರೈನ್ ಬೋ ಆಸ್ಪತ್ರೆಯಲ್ಲಿ ನಡೆದಿದೆ.

ಒಡಿಶಾ ಮೂಲದ ಪ್ರಿಯಾಂಕ (31) ಮತ್ತು ಅಶ್ವಿನ್‌ ಶಾಮಲ್‌ ದಂಪತಿಯ ಪುತ್ರಿ ಅರ್ಪಿತಾ ಎಂಬಾಕೆಗೆ  ಮಾರತ್ ಹಳ್ಳಿಯ ರೈನ್ ಬೋ ಆಸ್ಪತ್ರೆಯಲ್ಲಿ ಮೂತ್ರಪಿಂಡ ಜೋಡಿಸುವ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಪ್ರಿಯಾಂಕಾಗೆ ಹುಟ್ಟಿನಿಂದ ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದಳು, ಆಕೆಗೆ ಕಳೆದ ಒಂದು ವರ್ಷದಿಂದ ಡಯಾಲಿಸಿಸ್ ಮಾಡಲಾಗುತ್ತಿತ್ತು, ಆದರೆ ಆಕೆಗೆ ಕಿಡ್ನಿ ನೀಡಲು ದಾನಿಗಳು ಮುಂದೆ ಬಾರದ ಕಾರಣ ತನ್ನ ತಾಯಿಯೇ ಮಗಳಿಗೆ ಕಿಡ್ನಿ ನೀಡಿದ್ದಾರೆ.

ನನ್ನ ಅತ್ತೆ ಮಾವ ವಿಧಿವಶರಾಗಿದ್ದಾರೆ. ತನ್ನ ತಂದೆ ತಾಯಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ನನ್ನ ಗಂಡ ಉದ್ಯೋಗದಲ್ಲಿದ್ದಾರೆ, ಹೀಗಾಗಿ ನಾನೇ ನನ್ನ ಮಗಳಿಗೆ ಕಿಡ್ನಿ ನೀಡಲು ನಿರ್ಧರಿಸಿದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

ರೈನ್‌ಬೋ ಆಸ್ಪತ್ರೆ ನಿರ್ದೇಶಕ ಡಾ.ಕಿಶೋರ್‌ ಫಡ್ಕೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದರು. ಮಕ್ಕಳಲ್ಲಿ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಾಗ ಬಹುತೇಕರು ಡಯಾಲಿಸಿಸ್‌ ಮೊರೆ ಹೋಗುತ್ತಾರೆ. ಆದರೆ ಇದೊಂದೇ ಪರಿಹಾರವಲ್ಲ. ಆದರೆ ಆಸ್ಪತ್ರೆಯಲ್ಲಿ ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ರೈನ್‌ ಬೋ ಮಕ್ಕಳ ಆಸ್ಪತ್ರೆಯ ಡಾ.ಸೌಮಿಲ್‌ ಗೌರ್‌ ಮತ್ತು ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯ ಡಾ.ಸುರೇಶ್‌ ರಾಘವಯ್ಯ ನೇತೃತ್ವದ ತಂಡ ಶಸ್ತ್ರ ಚಿಕಿತ್ಸೆ ನಡೆಸಿದೆ'' ಎಂದರು.

ಮಹಿಳಾ ದಿನಚಾರಣೆಯ ಅಂಗವಾಗಿ ತಾಯಿಯ ಈ ಮಹಾನ್ ಕಾರ್ಯವನ್ನು ಗುರುತಿಸಿ ರೈನ್ ಬೋ ಆಸ್ಪತ್ರೆಯವರು ಪ್ರಿಯಾಂಕಾ ಅವರಿಗೆ ಸನ್ಮಾನ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿರುವ ಕಾರಣ ಪ್ರಿಯಾಂಕಾ ದಂಪತಿ ತಮ್ಮ ಪುತ್ರಿ ಜೊತೆ ವಾಪಸ್ ಒಡಿಸಾಗೆ ತೆರಳಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com