ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ನಷ್ಟ ಪರಿಹಾರ ಹಂಚಿಕೆ ಆರಂಭ

ಖಾರಿಫ್ ಬೆಳೆ ಕಳೆದು ಕೊಂಡು ನಷ್ಟ ಅನುಭವಿಸುತ್ತಿರುವ ಅರ್ಹ ರೈತರಿಗೆ ರಾಜ್ಯ ಸರ್ಕಾರ ಮಂಗಳವಾರದಿಂದ ಬೆಳೆ ಪರಿಹಾರ ಹಣ ನೀಡಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಖಾರಿಫ್ ಬೆಳೆ ಕಳೆದು ಕೊಂಡು ನಷ್ಟ ಅನುಭವಿಸುತ್ತಿರುವ ಅರ್ಹ ರೈತರಿಗೆ ರಾಜ್ಯ ಸರ್ಕಾರ ಮಂಗಳವಾರದಿಂದ ಬೆಳೆ ಪರಿಹಾರ ಹಣ ನೀಡಲು ಆರಂಭಿಸಿದೆ.
ರಾಜ್ಯದ ಸುಮಾರು 9.68 ಲಕ್ಷ ರೈತರು ಬೆಳೆ ನಷ್ಟಕ್ಕೊಳಗಾಗಿದ್ದಾರೆ, ಇಂಥಹ ರೈತರಿಗೆ ನೇರವಾಗಿ ಪರಿಹಾರ ಹಣ ನೀಡಲಾಗುವುದು. ರೈತರ ಬೆಳೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ 450 ಕೋಟಿ ರು. ಬಿಡುಗಡೆ ಮಾಡಿದೆ. 
ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ 1,682,40 ಕೋಟಿ ರೂ ಹಣ ನೀಡಲು ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 450 ಕೋಟಿ ಜೊತೆಗೆ ರಾಜ್ಯ ಸರ್ಕಾರ 221 ಕೋಟಿ ಸೇರಿಸಿ ಬರ ಪರಿಹಾರ ನೀಡಲು ಮುಂದಾಗಿದೆ.
ಶೇ. 33 ರಷ್ಟು ಬೆಳೆ ನಷ್ಟ ಅನುಭವಿಸಿರುವ ರೈತರು ಪರಿಹಾರಕ್ಕೆ ಅರ್ಹರಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಮಾರ್ಗದರ್ಶನದಂತೆ ರೈತರಿಗೆ ಪರಿಹಾರ ಹಣ ನಿಗದಿ ಮಾಡಲಾಗಿದೆ. ಮಳೆ ಆಧಾರಿತ ಒಂದು ಎಕರೆ  ಭೂಮಿಗೆ 6,800 ರು. ಹಾಗೂ ನೀರಾವರಿ ಆಧಾರಿತ 1 ಎಕರೆ ಭೂಮಿಗೆ 13,500 ರು.ಎಲ್ಲಾ ಋತುಗಳಲ್ಲಿ ಬೆಳೆ ಬೆಳೆಯುವ ಎರಡು ಎಕರೆ ಜಮೀನಿಗೆ18 ಸಾವಿರ ರು. ಪರಿಹಾರ ಹಣ ನಿಗದಿ ಮಾಡಲಾಗಿದೆ.
ರೈತರಿಗಾಗಿ ಕಂದಾಯ ಇಲಾಖೆ 40 ಲಕ್ಷ ಡಾಟಾ ಬ್ಯಾಂಕ್ ಸೃಷ್ಟಿಸಿದ್ದು, ಆಧಾರ್ ಕಾರ್ಡ್ ಮೂಲಕ ರೈತರು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಳ್ಳಬಹುದಾಗಿದೆ.ರೈತರ ಭೂಮಿ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಚಿತ್ರದುರ್ಗದ 67,352 ರೈತರು ಬೆಳೆ ನಷ್ಟ ಪರಿಹಾರ ಹಣವನ್ನು ಪಡೆಯಲಿದ್ದಾರೆ. ರಾಜ್ಯದ 139 ತಾಲೂಕುಗಳನ್ನು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com