
ಬೆಂಗಳೂರು: ರಾಜ್ಯದ 19 ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಟೋಲ್ ಸಂಗ್ರಹ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಬೀದರ್‌ನಿಂದ ನಂಜನಗೂಡಿನವರೆಗೂ ಅಲ್ಲಲ್ಲಿ ಬರುವ ರಾಜ್ಯ ಹೆದ್ದಾರಿಗಳಲ್ಲಿ 1530 ಕಿ.ಮೀ. ರಸ್ತೆಗೆ ಟೋಲ್ ವಿಧಿಸಲು ತೀರ್ಮಾನಿಸಲಾಗಿದೆ. ಯಾವ ಸ್ಥಳದಲ್ಲಿ ಟೋಲ್ ನಿಗದಿ ಮಾಡಬೇಕು, ಎಷ್ಟೆಷ್ಟುದರ ನಿಗದಿ ಮಾಡಬೇಕು ಎನ್ನುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ಸರ್ಕಾರ ಕೈಗೊಳ್ಳುವ ತೀರ್ಮಾನದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಿ.ಮೀ.ಗೆ ಇಂತಿಷ್ಟುಎಂದು ದರ ನಿಗದಿ ಮಾಡಲಿದೆ. ನಿರ್ವಹಣೆಯನ್ನು ಖಾಸಗಿಗೆ ವಹಿಸಿ ಆನಂತರ ಟೋಲ್ ಸಂಗ್ರಹ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಉಳಿದಂತೆ ಪರಿಶಿಷ್ಟಜಾತಿ, ಪಂಗಡಗಳ ಬಡ್ತಿ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀ ಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲ, ಕೋರ್ಟ್ ತೀರ್ಪಿನ ಅನ್ವಯ ಹಿಂಬಡ್ತಿ ಪಡೆಯುವರ ಪಟ್ಟಿಸಿದ್ಧಪಡಿಸಿ ಅನಿವಾರ್ಯವಾದರೆ ಆದೇಶ ಪಾಲನೆಗೆ ಸಜ್ಜಾಗಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಟೋಲ್ ದರ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಜಿಆರ್ ಶಣ್ಮುಗಪ್ಪ ಅವರು ಅಸಮಾಧಾನವ ವ್ಯಕ್ತಪಡಿಸಿದ್ದು, ಸರ್ಕಾರದ ನಿರ್ಧಾರದಿಂದ ಲಾರಿ ಮಾಲೀಕರು ಕೂಡ ದರೆ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಸರ್ಕಾರದ ನಿರ್ಧಾರ ಅವೈಜ್ಞಾನಿಕ ಎಂದು ಅವರು ಟೀಕಿಸಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಒಕ್ಕೂಟದ ಕಾರ್ಯದರ್ಶಿ ಬಿ ವಿಜಯ್ ಕುಮಾರ್ ಅವರು ಅಸಮಾನ ವ್ಯಕ್ತಪಡಿಸಿದ್ದು, ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಟೋಲ್ ದರಗಳು ಅತೀ ಹೆಚ್ಚಾಗಿವೆ. ಇದರಿಂದಾಗಿ ಉತ್ಪಾದನಾ ವೆಚ್ಚ ಹಾಗೂ ಸರಕು ಸಾಗಣೆ ವೆಚ್ಚಗಳು ಏರಿಕೆಯಾಗಲಿದ್ದು, ವಸ್ತುಗಳ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
19 ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ವಿಧಿಸಲು ಸರ್ಕಾರ ನಿರ್ಧರಿಸಿದೆ. ಹೆದ್ದಾರಿಗಳ ಪಟ್ಟಿಇಲ್ಲಿದೆ.
1 ಮುದಗಲ್-ಕುಡುತಿನಿ ರಾಜ್ಯ ಹೆದ್ದಾರಿ 29ರಲ್ಲಿ ಮುದಗಲ್‌ನಿಂದ ತಾವರೆಕೆರೆ, ಕನಕಗಿರಿ ಮಾರ್ಗವಾಗಿ ಗಂಗಾವತಿ ವರೆಗೆ 74 ಕಿಮೀ.
2 ಪಡುಬಿದ್ರಿ-ಚಿಕ್ಕಲಗುಡ್ಡ ಹೆದ್ದಾರಿ 1ರಲ್ಲಿ ಬೆಳ್ಮಣ್ ಮಾರ್ಗವಾಗಿ ಕಾರ್ಕಳದ ವರೆಗೆ 28 ಕಿ.ಮೀ.
3 ಎಕ್ಕಂಬಿ - ಮೊಳಕಾಲ್ಮೂರು ರಾಜ್ಯ ಹೆದ್ದಾರಿ 2ರಲ್ಲಿ ಹಾವೇರಿ ಅಕ್ಕಿ ಆಲೂರು ಮಾರ್ಗವಾಗಿ ಹಾನಗಲ್ ವರೆಗೆ 33 ಕಿ.ಮೀ.
4 ಔರಾದ - ಸದಾಶಿವಗಡ ರಾಜ್ಯ ಹೆದ್ದಾರಿ 34ರಲ್ಲಿ ಧಾರವಾಡದಿಂದ ಕರಡಿಗುಡ್ಡ ಮಾರ್ಗವಾಗಿ ಸವದತ್ತಿವರೆಗೆ 36 ಕಿ.ಮೀ.
5 ಹೊಸಕೋಟೆ-ಗೌನಿಪಲ್ಲಿ ಹೆದ್ದಾರಿ 82ರಲ್ಲಿ ಹೊಸ ಕೋಟೆಯಿಂದ ಚಿಂತಾಮಣಿ ಬೈಪಾಸ್ 52ಕಿ.ಮೀ.
6 ಮನಗೂಳಿ-ಚಿಚ್ಚಳ ರಾಜ್ಯ ಹೆದ್ದಾರಿ 61, ವನಮಾರಪಲ್ಲಿ-ರಾಯಚೂರು ರಾಜ್ಯ ಹೆದ್ದಾರಿ 15ರಲ್ಲಿ ತಿಂತಿಣಿ, ದೇವದುರ್ಗ, ಗಬ್ಬೂರು ಮಾರ್ಗ ಕಲ್ಮಲಾವರೆಗೆ 74 ಕಿಮೀ
7 ಹುಣಸನಹಳ್ಳಿ-ಚಿಕ್ಕಳ್ಳಿ ಹೆದ್ದಾರಿ 3ರಲ್ಲಿ ಮಾಗಡಿ, ರಾಷ್ಟ್ರೀಯ ಹೆದ್ದಾರಿ 48, ದಾಬಸ್ ಪೇಟೆ, ಕೊರಟಗೆರೆ, ಪಾವಗಡ ಮಾರ್ಗವಾಗಿ ಆಂಧ್ರಪ್ರದೇಶದ ಕಂಬ್ದೂರು ವರೆಗೆ 91 ಕಿ.ಮೀ.
8 ಬಾಗಲಕೋಟೆ-ಬಿಳಿಗಿರಿರಂಗನಬೆಟ್ಟಹೆದ್ದಾರಿ 57ರಲ್ಲಿ ನವಲಗುಂದ, ಶೆಲವಾಡಿ, ಗದಗ ಮಾರ್ಗವಾಗಿ ಮುಂಡರಗಿ ವರೆಗೆ 80 ಕಿ.ಮೀ.
9 ಶಿರಾ-ನಂಜನಗೂಡು ಹೆದ್ದಾರಿ 84ರಲ್ಲಿ ಗುಬ್ಬಿ, ಸಿಎಸ್ ಪುರ, ಬೀರಗೊಂಡನಹಳ್ಳಿ ಹತ್ತಿರ ಯಡಿ ಯೂರು (ರಾ.ಹೆ. 48)ವರೆಗೆ 49 ಕಿ.ಮೀ.
10 ಶಿರಾ-ನಂಜನಗೂಡು ರಾಜ್ಯ ಹೆದ್ದಾರಿ 84ರಲ್ಲಿ ಬೀರಗೊಂಡನಹಳ್ಳಿ ಹತ್ತಿರ ಯಡಿಯೂರಿನಿಂದ (ರಾಷ್ಟ್ರೀಯ ಹೆದ್ದಾರಿ 48) ಕೌಡ್ಲೆ ಮಾರ್ಗವಾಗಿ ಮಂಡ್ಯದವರೆಗೆ 60 ಕಿ.ಮೀ.
11 ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿ 76ರಲ್ಲಿ ದಾವಣಗೆರೆ, ಸಂತೆಬೆನ್ನೂರು, ಚನ್ನಗಿರಿಯಿಂದ ಬೀರೂರು ಮಾರ್ಗವಾಗಿ 149 ಕಿ.ಮೀ
12 ಔರಾದ್-ಸದಾಶಿವಗಡ ಹೆದ್ದಾರಿ 34, ರಾಮ ದುರ್ಗ-ಮಾನ್ವಿ ಹೆದ್ದಾರಿ 14 ಹಾಗೂ ಸಂಕೇಶ್ವರ- ಸಂಗಮ ರಾಜ್ಯ ಹೆದ್ದಾರಿ 44ರಲ್ಲಿ ಸವದತ್ತಿಯಿಂದ ರಾಮದುರ್ಗ, ಹಲಗಟ್ಟಿ, ಬಾದಾಮಿ, ಪಟ್ಟದಕಲ್ಲು ಮಾರ್ಗವಾಗಿ ಕಮತಗಿ ವರೆಗೆ 130 ಕಿ.ಮೀ.
13 ಪಡುಬಿದ್ರಿ-ಚಿಕ್ಕಲಗುಡ್ಡ ರಾಜ್ಯ ಹೆದ್ದಾರಿ 1ರಲ್ಲಿ ಹಾನಗಲ್ ನಿಂದ ಶಿಕಾರಿಪುರ ಮಾರ್ಗವಾಗಿ ತಡಸವರೆಗೆ 144 ಕಿ.ಮೀ
14 ಪಡುಬಿದ್ರಿ-ಚಿಕ್ಕಲಗುಡ್ಡ ಹೆದ್ದಾರಿ 1ರಲ್ಲಿ ಕುಪ್ಪಳಿ, ಕವಿಶೈಲ ಹೆದ್ದಾರಿ 148ರಲ್ಲಿ ಹಾಗೂ ಕುಮಟಾ- ತಡಸ ರಾಜ್ಯ ಹೆದ್ದಾರಿ 69ರಲ್ಲಿ ಶಿವಮೊಗ್ಗ 0.40 ಕಿ.ಮೀ.ಯಿಂದ ಶಿಕಾರಿಪುರ, ಆನವಟ್ಟಿಮಾರ್ಗವಾಗಿ ಹಾನಗಲ್‌ವರೆಗೆ 128 ಕಿ.ಮೀ.
15 ಹುಣಸನಹಳ್ಳಿ-ಚಿಕ್ಕಳ್ಳಿ ರಾಜ್ಯ ಹೆದ್ದಾರಿ 3ರಲ್ಲಿ ಹಾಗೂ ಕೊರಟಗೆರೆ-ಬಾವಲಿ ರಾಜ್ಯ ಹೆದ್ದಾರಿ 33ರಲ್ಲಿ ಮಳವಳ್ಳಿ, ಮದ್ದೂರು, ಹುಲಿಯೂರು ದುರ್ಗ, ಕುಣಿಗಲ್, ತುಮ ಕೂರು ಮಾರ್ಗವಾಗಿ ಕೊರಟಗೆರೆವರೆಗೆ 150 ಕಿ.ಮೀ.
16 ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ 18ರಲ್ಲಿ ಮುಧೋಳದಿಂದ ಮಹಾಲಿಂಗಪುರ, ಕಬ್ಬೂರ, ಚಿಕ್ಕೋಡಿ, ನಿಪ್ಪಾಣಿ (ರಾಷ್ಟ್ರೀಯ ಹೆದ್ದಾರಿ 4) ಮಾರ್ಗವಾಗಿ ಮಹಾರಾಷ್ಟ್ರ ಗಡಿ ವರೆಗೆ 108 ಕಿ.ಮೀ. ಕೆಆರ್‌ಡಿಸಿಎಲ್
17 ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿ 30ರಲ್ಲಿ ಸಿಂಧನೂರಿನಿಂದ ತಾವರೆಗೇರಾ ಮಾರ್ಗವಾಗಿ ಕುಷ್ಟಗಿ ವರೆಗೆ 75 ಕಿ.ಮೀ.
18 ಮಂಗಸೂಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ 73ರಲ್ಲಿ ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಲಕ್ಷ್ಮೇಶ್ವರ ವರೆಗೆ 43 ಕಿ.ಮೀ.
19 ಕಂಪ್ಲಿ, ಕುರುಗೋಡು ರಾಜ್ಯ ಹೆದ್ದಾರಿ 132ರಲ್ಲಿ ಬಳ್ಳಾರಿಯಿಂದ ಮೋಕಾವರೆಗೆ 26 ಕಿ.ಮೀ.
Advertisement