ಹೋಳಿ ಹಬ್ಬದಂದು ಮದ್ಯ ನಿಷೇಧ: ಬಾರ್ ಸಿಬ್ಬಂದಿಗಳ ಮೇಲೆ ಪೊಲೀಸರ ದರ್ಪ

ಬಾರ್ ಸಿಬ್ಬಂದಿಗಳೆ ಮೇಲೆ ಪಿಎಸ್ಐ ಶಿವಶಂಕರ ಮುಕರಿ ಮತ್ತು ಅವರ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆಸಿದೆ...
ಪಿಎಸ್ಐ ಶಿವಶಂಕರ ಮುಕರಿ ಹಾಗೂ ಹಲ್ಲೆಗೊಳಗಾದ  ಅಜಿತ್ ಹಳಿಂಗಳಿ
ಪಿಎಸ್ಐ ಶಿವಶಂಕರ ಮುಕರಿ ಹಾಗೂ ಹಲ್ಲೆಗೊಳಗಾದ ಅಜಿತ್ ಹಳಿಂಗಳಿ
ಬೆಳಗಾವಿ: ಬಾರ್ ಸಿಬ್ಬಂದಿಗಳೆ ಮೇಲೆ ಪಿಎಸ್ಐ ಶಿವಶಂಕರ ಮುಕರಿ ಮತ್ತು ಅವರ ಸಿಬ್ಬಂದಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆಸಿದೆ. 
ಮಾರ್ಚ್ 13 ರಂದು ಘಟನೆ ನಡೆದಿದೆ. ಹೋಳಿ ಹಬ್ಬ ಹಿನ್ನಲೆಯಲ್ಲಿ ಮದ್ಯದ ಮಾರಾಟದ ಮೇಲೆ ನಿಷೇಧ ಹೇರಲಾಗಿತ್ತು. ಶಿವಶಕ್ತಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಂದಿರುವ ಪಿಎಸ್ಐ ಶಿವಶಂಕರ ಮುಕರಿ ಹಾಗೂ ಪೇದೆಗಳಾದ ಎಚ್.ಡಿ ಬೋಜನ್ನವರ ಹಾಗೂ ಪೂಜೇರಿ ಅವರು ಸಾರಾಯಿ ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಬಾರ್ ಸಿಬ್ಬಂದಿಗಳು ನಿರಾಕರಿಸಿದ್ದಾರೆ. ಈ ವೇಳೆ ಪೊಲೀಸರು ಬಾರ್ ಸಿಬ್ಬಂದಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. 
ಘಟನೆಯ ಸಂಪೂರ್ಣ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಬಾರ್ ಸಿಬ್ಬಂದಿ ಅಜಿತ್ ಹಳಿಂಗಳಿ ಅವರ ಹೊಟ್ಟೆ, ಮರ್ಮಾಂಗದ ಮೇಲೆ ಪೊಲೀಸರು ಅಮಾನವೀಯವಾಗಿ ಹೊಡೆದಿದ್ದಾರೆ. ಈ ವೇಳೆ ಹಳಿಂಗಳಿಯವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ಪೊಲೀಸರು ಅವರ ಮುಖಕ್ಕೆ ನೀರು ಹಾಕಿ ಎದ್ದೇಳುವಂತೆ ಮಾಡಿದ್ದಾರೆ. 
ನಂತರ ಹೊರ ಹೋಗುವಾಗ ಬಾರ್ ನಲ್ಲಿದ್ದ ಸಾರಾಯಿ ಬಾಟಲಿಗಳು ಮತ್ತು ಸಿಬ್ಬಂದಿಗಳ ಬಳಿಯಿದ್ದ ಹಣವನ್ನು ಬಲವಂತವಾಗಿ  ಕಿತ್ತುಕೊಂಡು ದರೋಡೆಕೋರರಂತೆ ವರ್ತಿಸಿ ಹೋಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್'ಪಿ ರವಿಕಾಂತೇಗೌಡ ಅವರು ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿದ್ದಾರೆ. ಈಗಾಗಲೇ ತನಿಖಾ ತಂಡ ತನಿಖೆಯನ್ನು ಆರಂಭಿಸಿದ್ದು, ವಾರದೊಳಗಾಗಿ ತನಿಖಾ ತಂಡ ವರದಿ ಸಲ್ಲಿಕೆ ಮಾಡಲಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com