ವಿದ್ಯಾರ್ಥಿನಿಯರ ಒಳಉಡುಪು ಧರಿಸುತ್ತಿದ್ದ ವಿಕೃತಕಾಮಿ ಅಬು ತಾಲೀಮ್ ಬಂಧನ!

ನಗರದ ಮಹಾರಾಣಿ ಕಾಲೇಜಿನ ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿನಿಯರ ಉಳಉಡುಪುಗಳನ್ನು ಧರಿಸಿ ಓಡಾಡುತ್ತಿದ್ದ ವಿಕೃತಕಾಮಿಯನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿನಿಯರ ಒಳಉಡುಪು ಕದಿಯುತ್ತಿದ್ದ ವಿಕೃತಕಾಮಿ
ವಿದ್ಯಾರ್ಥಿನಿಯರ ಒಳಉಡುಪು ಕದಿಯುತ್ತಿದ್ದ ವಿಕೃತಕಾಮಿ
Updated on

ಬೆಂಗಳೂರು: ನಗರದ ಮಹಾರಾಣಿ ಕಾಲೇಜಿನ ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿನಿಯರ ಉಳಉಡುಪುಗಳನ್ನು ಧರಿಸಿ ಓಡಾಡುತ್ತಿದ್ದ ವಿಕೃತಕಾಮಿಯನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ರೇಸ್ ಕೋರ್ಸ್ ನಲ್ಲಿ ಕಾರ್ಯಾಚರಣೆ ನಡೆಸಿದ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ವಿಕೃತಕಾಮಿ ಅಬುತಾಲಿಮ್ ನನ್ನು ಇಂದು ಬೆಳಗ್ಗೆ ಬಂಧಿಸಿದ್ದಾರೆ. ಕಳೆದ ಆರು ತಿಂಗಳುಗಳಿಂದ ವಿಕೃತಕಾಮಿ ಉಬತಾಲಿಮ್  ರಾತ್ರಿ ವೇಳೆ ರೇಸ್ ಕೋರ್ಸ್ ನ ಸಮೀಪವಿರುವ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯದ ಒಳಗೆ ನುಗ್ಗಿ ನಗ್ನನಾಗಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಧರಿಸಿ ಒಡಾಡುತ್ತಿದ್ದ. ಇದನ್ನು ಗಮನಿಸಿದ ಕೆಲ ವಿದ್ಯಾರ್ಥಿನಿಯರು  ದೂರು ನೀಡಿದ್ದರಾದರೂ ಅದರಿಂದ ಪ್ರಯೋಜನವಾಗಿರಲಿಲ್ಲ.

ಕಳೆದ 6 ತಿಂಗಳುಗಳಿಂದ ಇದೇ ಪರಿಸ್ಥಿತಿ ಮುಂದುವರೆದಿತ್ತು. ಅಂತಿಮವಾಗಿ ವಿಕೃತಕಾಮಿಯ ಕಾಟ ತಾಳಲಾರದೆ ಮಹಾರಾಣಿ ಕಾಲೇಜಿನ ಹಾಸ್ಟೆಲ್ ನಲ್ಲಿ ಫೆಬ್ರವರಿ 1ರಂದು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಬಳಿಕ  ಇಂತಹ ಘಟನೆ ಕಡಿಮೆಯಾಗಿತ್ತು ಎನ್ನುವಷ್ಟರಲ್ಲೇ ಮತ್ತೆ ಫೆಬ್ರವರಿ 12ರ ರಾತ್ರಿ ಹಾಸ್ಟೆಲ್ ಗೆ ಬಂದಿದ್ದ ವಿಕೃತಕಾಮಿ ಅಬು ತಾಲಿಮ್ ನಗ್ನನಾಗಿ ವಿದ್ಯಾರ್ಥಿನಿಯರ ಹಾಸ್ಟೆಲ್ ಪ್ರವೇಶಿಸಿ ಆವರಣದಲ್ಲಿ ಒಣಗಲು ಹಾಕಿದ್ದ  ವಿದ್ಯಾರ್ಥಿನಿಯರ ಒಳಉಡುಪಗಳನ್ನು ಧರಿಸಿ ವಿತೃತ ಆನಂದ ಪಡೆಯುತ್ತಿದ್ದ. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಅಲ್ಲದೆ ಅದೇ ದಿನ ಹಾಸ್ಟೆಲ್ ಭದ್ರತಾ ಸಿಬ್ಬಂದಿ ಈತನನ್ನು ನೋಡಿ ಹಿಡಿಯಲು ಪ್ರಯತ್ನಿಸಿದ್ದ. ಆದರೆ ಅಬು ತಾಲಿಮ್ ಗೋಡೆ ಹತ್ತಿ ಅಲ್ಲಿಂದ ಪರಾರಿಯಾಗಿದ್ದ. ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ಇದೀಗ ವಿಕೃತಕಾಮಿಯ ಸಂಪೂರ್ಣ ವಿವರ ಪಡೆದ ಪೊಲೀಸರು ಬೆಂಗಳೂರಿನ ರೇಸ್ ಕೋರ್ಸ್ ನಲ್ಲಿ ಆರೋಪಿ ಅಬು ತಾಲಿಮ್ ನನ್ನು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ವಿಕೃತಕಾಮಿ ಅಬುತಾಲಿಮ್ 15 ವರ್ಷದ ಹಿಂದ ಬಿಹಾರದಿಂದ ಬೆಂಗಳೂರಿಗೆ ಆಗಮಿಸಿದ್ದನಂತೆ. ಬೆಂಗಳೂರಿನ ರೇಸ್ ಕೋರ್ಸ್ ನಲ್ಲಿ ಕುದುರೆ ತೊಳೆಯುವ ಕೆಲಸ ಮಾಡುತ್ತಿದ್ದನಂತೆ. ರಾತ್ರಿ ವೇಳೆ  ರೇಸ್ ಕೋರ್ಸ್ ಸಮೀಪದಲ್ಲೇ ಇರುವ ಮಹಾರಾಣಿ ಕಾಲೇಜಿನ ಹಾಸ್ಟೆಲ್ ಗೆ ನಗ್ನನಾಗಿ ತೆರಳುತ್ತಿದ್ದ ಅಬು ತಾಲಿಮ್ ಅಲ್ಲಿದ್ದ ವಿದ್ಯಾರ್ಥಿನಿಯರ ಒಳಉಡುಪುಗಳನ್ನು ಧರಿಸಿ ಓಡಾಡುತ್ತಿದ್ದ. ಈ ಹಿಂದೆ ಬಿಹಾರದಲ್ಲೂ ಕೂಡ ಇದೇ  ರೀತಿ ವಿಕೃತಿ ಮೆರೆದು ಅಲ್ಲಿದ ಬೆಂಗಳೂರಿಗೆ ಓಡಿ ಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಕಳೆದ 6 ತಿಂಗಳಿನಿಂದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕಾಟ ನೀಡುತ್ತಿದ್ದ ವಿತೃಕಕಾಮಿ ಕೊನೆಗೂ ಸಿಕ್ಕಿಬಿದ್ದಿದ್ದು, ವಿದ್ಯಾರ್ಥಿನಿಯರು ನಿಟ್ಟುಸಿರು ಬಿಡುವಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com