ಏಕಾಂಗಿಯಾಗಿ ಮೂರು ಕೆರೆಗಳ ಸ್ವಚ್ಛಗೊಳಿಸಿದ "ವಾಸ್ತು ಶಿಲ್ಪಿ"

ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಬೆಂಗಳೂರಿನ ಈ ವಾಸ್ತು ಶಿಲ್ಪಿ ಮಾಡಿ ತೋರಿಸಿದ್ದು, ಅತ್ಯಾಧುನಿಕ ಮತ್ತು ಅಗ್ಗದ ತಂತ್ರಜ್ಞಾನದ ಮೂಲಕ ಬರೊಬ್ಬರಿ ಮೂರು ಕೆರೆಗಳನ್ನು ಸ್ವಚ್ಛಗೊಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಸ್ವಚ್ಛಗೊಂಡ ಕೆರೆ ಮತ್ತು ಹಿಮಾಂಶು ಆರ್ತೀವ್
ಸ್ವಚ್ಛಗೊಂಡ ಕೆರೆ ಮತ್ತು ಹಿಮಾಂಶು ಆರ್ತೀವ್

ಬೆಂಗಳೂರು: ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಬೆಂಗಳೂರಿನ ಈ ವಾಸ್ತು ಶಿಲ್ಪಿ ಮಾಡಿ ತೋರಿಸಿದ್ದು, ಅತ್ಯಾಧುನಿಕ ಮತ್ತು ಅಗ್ಗದ ತಂತ್ರಜ್ಞಾನದ ಮೂಲಕ ಬರೊಬ್ಬರಿ ಮೂರು ಕೆರೆಗಳನ್ನು  ಸ್ವಚ್ಛಗೊಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಹೆಸರು ಹಿಮಾಂಶು ಆರ್ತೀವ್.. ವಯಸ್ಸು 29 ಮತ್ತು ಉದ್ಯೋಗ ಆರ್ಕಿಟೆಕ್ಟ್ (ವಾಸ್ತು ಶಿಲ್ಪಿ)..ಅರೆ ಕೆರೆಗೂ ಆರ್ಕಿಟೆಕ್ಟ್ ಗೂ ಎಲ್ಲಿಂದ ಎಲ್ಲಿಯ ಸಂಬಂಧ ಎಂದು ಅಚ್ಚರಿ ಪಡಬಹುದು. ಆದರೆ ಈ ವಾಸುಶಿಲ್ಪಿ ಅತ್ಯಾಧುನಿಕ  ತಂತ್ರಜ್ಞಾನದ ಮೂಲಕ ಮೂರು ಕೆರೆಗಳನ್ನು ಸ್ವಚ್ಛ ಮಾಡಿ ತೊರಿಸಿದ್ದಾರೆ. ಅತೀವ ಪರಿಸರ ಕಾಳಜಿ ಬೆಳೆಸಿಕೊಂಡಿರುವ ಹಿಮಾಂಶ ಆರ್ತೀವ್ ಬಯೋಮ್ ಎನ್ವಿರಾನ್ ಮೆಂಟಲ್ ಟ್ರಸ್ಟ್ ನ ಸದಸ್ಯರಾಗಿದ್ದು, ಟ್ರಸ್ಟ್ ವತಿಯಿಂದ  ನಡೆಯುವ ಪರಿಸರ ಕಾಳಜಿ ಮತ್ತು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಅವರ ಪರಿಸರ ಕಾಳಜಿಗೆ ಅವರ ಕೆರೆ ಸ್ವಚ್ಛತಾ ಕಾರ್ಯ ಕೈಗನ್ನಡಿಯಾಗಿದ್ದು, ಅತೀ ಕಡಿಮೆ ದರದಲ್ಲಿ ಕೆರೆ ಸ್ವಚ್ಛಗೊಳಿಸುವ ಮೂಲಕ ಅಚ್ಚರಿ  ಮೂಡಿಸಿದ್ದಾರೆ. ಹಿಮಾಂಶು ಆರ್ತೀವ್ ಅವರ ಪರಿಶ್ರಮದಿಂದಾಗಿ ಇಂದು ಬೆಂಗಳೂರಿನ ಪುಟ್ಟೇನಹಳ್ಳಿ, ಜಕ್ಕೂರು ಮತ್ತು ಕೈಕೊಂಡ್ರಳ್ಳಿ ಕೆರೆಗಳು ಸ್ವಚ್ಛಗೊಂಡು ನೋಡುಗರ ಕಣ್ಮನ ಸೆಳೆಯುತ್ತಿದೆ.

ಕೆರೆಗಳಲ್ಲಿ ತುಂಬಿರುವ ವಿಷಕಾರಿ ಅಂಶಗಳನ್ನು ನೈಸರ್ಗಿಕವಾಗಿ ಹೊರತೆಗೆಯುವ ಮೂಲಕ ಈ ಮೂರು ಕೆರೆಗಳನ್ನು ಹಿಮಾಂಶು ಸ್ವಚ್ಛಗೊಳಿಸಿದ್ದಾರೆ. ಬಯೋಮ್ ಎನ್ವಿರಾನ್ ಮೆಂಟಲ್ ಟ್ರಸ್ಟ್ ನ ಸದಸ್ಯರಾಗಿರುವ ಹಿಮಾಂಶು  2016ರಲ್ಲಿ ಪುಟ್ಟ ಕೃತಕ ತೇಲುವ ದ್ವೀಪದ ಮಾದರಿಗಳನ್ನು ಪುಟ್ಟೇನ ಹಳ್ಳಿ ಕೆರೆಯಲ್ಲಿ ನಿರ್ಮಿಸಿದರು. ಈ ಕೃತಕ ದ್ವೀಪದಲ್ಲಿ ನೀರಿನಲ್ಲಿರುವ ಕಲ್ಮಶಗಳನ್ನು ತೆಗೆಯುವ ಗಿಡಗಳನ್ನು ನೆಡುವ ಮೂಲಕ ಕೆರೆಯಲ್ಲಿದ್ದ ವಿಷಕಾರಿ  ಅಂಶಗಳನ್ನು ಹಿಮಾಂಶು ಸ್ವಚ್ಥಗೊಳಿಸಿದರು. ಇಂತಹ ಹತ್ತಾರು ಕೃತಕ ತೇಲುವ ದ್ವೀಪಗಳನ್ನು ಕೆರೆಯಲ್ಲಿ ನಿರ್ಮಿಸಿದ ಪರಿಣಾಮ ಕೆಲವೇ ದಿನಗಳಲ್ಲಿ ಇಡೀ ಕೆರೆ ಸ್ವಚ್ಛಗೊಂಡಿದೆ.

ಪುಟ್ಟೇನಹಳ್ಳಿ ಕೆರೆ ಸ್ವಚ್ಛತಾ ಕಾರ್ಯದಿಂದ ಉತ್ತೇಜಿತರಾದ ಹಿಮಾಂಶು ಇದೇ ಮಾದರಿಯನ್ನು ಜಕ್ಕೂರು ಮತ್ತು ಕೈಕೊಂಡ್ರಳ್ಳಿ ಕೆರೆಯಲ್ಲೂ ಅಳವಡಿಸಿದರು. ಅಚ್ಚರಿ ಎಂದರೆ ಹೀಗೆ ಕೃತಕ ತೇಲುವ ದ್ವೀಪ ಅಳವಡಿಸಿದ ಕೆಲವೇ  ದಿನಗಳಲ್ಲಿ ಈ ಕೆರೆಗಳಲ್ಲೂ ಕೂಡ ಸ್ವಚ್ಛತೆ ಕಂಡುಬಂದಿತು.

ಏನಿದು ಕೆರೆ ಸ್ವಚ್ಛತೆಯ ವಿಶೇಷ ಮಾದರಿ?
ನೈಸರ್ಗಿಕವಾಗಿ ಕೆರೆಗಳಲ್ಲಿನ ವಿಷಕಾರಿ ಅಂಶಗಳನ್ನು ಕೆಲ ಪ್ರಭೇದದ ಸಸ್ಯಗಳು ತೆಗೆದುಹಾಕುತ್ತವೆ. ಈ ಬಗ್ಗೆ ಈ ಹಿಂದೆ ಕೆನಡಾದಲ್ಲಿ ಒಂದು ಪ್ರಯೋಗವಾಗಿ ಅದು ಯಶಸ್ವಿ ಕೂಡ ಆಗಿತ್ತು. ಈ ಬಗ್ಗೆ ಓದಿಕೊಂಡಿದ್ದ ಹಿಮಾಂಶು ಅದೇ  ಮಾದರಿಯ ಅತ್ಯಾಧುನಿಕ ಸ್ವಚ್ಛತಾ ತಂತ್ರಜ್ಞಾನ ಪ್ರಯೋಗವನ್ನು ಪುಟ್ಟೇನ ಹಳ್ಳಿ ಕೆರೆ ಮೇಲೆ ಮಾಡಿದ್ದರು. ನಿಸರ್ಗ ದತ್ತವಾದ ಕೆಲ ಗಿಡಗಳು ನೀರಿನಲ್ಲಿರುವ ವಿಷಕಾರಿ ಅಂಶಗಳನ್ನು ಸೆಳೆದುಕೊಂಡು ಬೆಳೆಯುತ್ತವೆ. ಅದರಂತೆ  ನಿಸರ್ಗದತ್ತವಾಗಿ ನೀರಿನ ಕಲ್ಮಶಗಳನ್ನು ಹೀರುವ ಮತ್ತು ನೀರನ್ನು ಸ್ವಚ್ಛಗೊಳಿಸುವ ಕೆಲ ಸಸ್ಯ ಪ್ರಬೇಧಗಳ ಕುರಿತು ಮಾಹಿತಿ ಕಲೆಹಾಕಿದ ಹಿಮಾಂಶು ಅವುಗಳನ್ನು ತಂದು ಒಂದು ಕೃತಕ ಕಾಂಪೌಂಡ್ ನಲ್ಲಿ ನೆಟ್ಟರು. ಪಿವಿಸಿ ಪೈಪ್  ಗಳಿಂದ ಕಾಪೌಂಡ್ ನಿರ್ಮಿಸಲಾಗಿತ್ತು. ಈ ಕಾಪೌಂಡ್ ನ ವಿಶೇಷವೆಂದರೆ ಇದು ನೈಟ್ರೇಟ್, ಫಾಸ್ಫೇಟ್ಗಳು ಮತ್ತು ಸಲ್ಫೇಟ್ ಎಂಬ ರಾಸಾಯನಿಕಗಳಿಂದ ಕೂಡಿದೆ.

ಸಾಮಾನ್ಯವಾಗಿ ಈ ರಾಸಾಯನಿಕಗಳನ್ನು ಒಳಚರಂಡಿಯಲ್ಲಿ  ಬಳಸಲಾಗುತ್ತದೆ. ಈ ರಾಸಾಯನಿಕಗಳು ನೀರಿನ ಗುಣಮಟ್ಟ ಸುಧಾರಿಸಲು ನೆರವಾಗುವ ಮೂಲಕ ನೀರು ಸಸ್ಯ ಪ್ರಬೇಧ ಮತ್ತು ಪ್ರಾಣಿ ಪ್ರಬೇಧಗಳು ಬಳಕೆ ಮಾಡಲು ಯೋಗ್ಯವಾಗುವ ರೀತಿಯಲ್ಲಿ ನೀರನ್ನು ಸ್ವಚ್ಛಗೊಳಿಸುತ್ತವೆ.  ಅಂತೆಯೇ ಈ ತೇಲುವ ಕಾಪೌಂಡ್ ನಲ್ಲಿನ ವಿಶಿಷ್ಟ ಗಿಡಗಳು ನೀರನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತವೆ. ಆದರೆ ಈ ಗಿಡಗಳನ್ನು ಕೆಲ ತಿಂಗಳ ಬಳಿಕ ಆಗ್ಗಿಂದಾಗ್ಗೆ ಬದಲಿಸುತ್ತಿರಬೇಕಾಗುತ್ತದೆ. ಇದಕ್ಕೆ ಸುಮಾರು 3 ಸಾವಿರ  ರು,ವೆಚ್ಚವಾಗುತ್ತದೆ ಎಂದು ಹಿಮಾಂಶು ಆರ್ತೀವ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com