ಉದ್ಯೋಗ ಮೇಳ: ಯುವಕರಂತೆ ಕೆಲಸ ಗಿಟ್ಟಿಸಿಕೊಂಡ 3,726 ಹಿರಿಯ ನಾಗರೀಕರು
ಉದ್ಯೋಗ ಮೇಳ: ಯುವಕರಂತೆ ಕೆಲಸ ಗಿಟ್ಟಿಸಿಕೊಂಡ 3,726 ಹಿರಿಯ ನಾಗರೀಕರು

ಉದ್ಯೋಗ ಮೇಳ: ಯುವಕರಂತೆ ಕೆಲಸ ಗಿಟ್ಟಿಸಿಕೊಂಡ 3,726 ಹಿರಿಯ ನಾಗರೀಕರು

ಜೀವನದಲ್ಲಿ ಅಂತಿಮ ಘಟ್ಟದತ್ತ ಹೆಜ್ಜೆ ಹಾಕುತ್ತಿದ್ದರೂ, ವೃದ್ದಾಪ್ಯದಲ್ಲೂ ಹುಮ್ಮಸ್ಸನ್ನು ಕುಂದಿಸಿಕೊಳ್ಳದೆ ಬದುಕಿನಲ್ಲಿ ಏನಾದರೂ ಕೆಲಸ ಮಾಡಬೇಕೆಂಬ ತುಡಿತ ಹೊಂದಿದ್ದ ಸಾವಿರಾರು ಹಿರಿಯ ನಾಗರೀಕರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ...
Published on
ಬೆಂಗಳೂರು: ಜೀವನದಲ್ಲಿ ಅಂತಿಮ ಘಟ್ಟದತ್ತ ಹೆಜ್ಜೆ ಹಾಕುತ್ತಿದ್ದರೂ, ವೃದ್ದಾಪ್ಯದಲ್ಲೂ ಹುಮ್ಮಸ್ಸನ್ನು ಕುಂದಿಸಿಕೊಳ್ಳದೆ ಬದುಕಿನಲ್ಲಿ ಏನಾದರೂ ಕೆಲಸ ಮಾಡಬೇಕೆಂಬ ತುಡಿತ ಹೊಂದಿದ್ದ ಸಾವಿರಾರು ಹಿರಿಯ ನಾಗರೀಕರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಿಸಿದ್ದರು. 
ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವು ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಹಿರಿಯ ನಾಗರೀಕರ ಉದ್ಯೋಗ ಮೇಳವನ್ನು ಆಯೋಜಿಸಿತ್ತು. ಬೆಳಿಗ್ಗೆ 10 ಗಂಟೆಗೆ ಆರಂಭವಾದ ಈ ಮೇಳದಲ್ಲಿ ಸಾವಿರಾರು ವೃದ್ಧರು ಭಾಗವಿಸಿದ್ದರು. 
ನಿವೃತ್ತಿ ಹೊಂದಿದ್ದ ಸಾವಿರಾರು ಹಿರಿಯರು ವೃತ್ತಿ ಬದುಕಿನ 2ನೇ ಆವೃತ್ತಿ ಆರಂಭಿಸುವ ಆಶಯದಿಂದ ಉದ್ಯೋಗ ಮೇಳದಲ್ಲಿ ಭಾಗವಿಸಿದ್ದರು. ಮೇಳದಲ್ಲಿ ವಿಮಾ ಕಂಪನಿ, ಕರ್ನಾಟಕ ಸಣ್ಣ ಕೈಗಾರಿಕಾ ಸಂಘ, ಲೆಕ್ಕ ಪರಿಶೋಧನೆ, ಭದ್ರತಾ ಸೇವಾ ಸಂಸ್ಥೆಗಳಲ್ಲಿ ಪರಿಚಯ ಪತ್ರ ನೀಡಿ ಹೆಸರು ನೋಂದೋಯಿಸಿಕೊಂಡರು. ಬಹುತೇಕ ಉದ್ಯೋ ಆಕಾಂಕ್ಷಿಗಳಿಗೆ ಕಂಪನಿಯ ಕಚೇರಿಗೆ ಬಂದು ಮತ್ತೊಮ್ಮೆ ಸಂದರ್ಶನ ಎದುರಿಸುವಂತೆ ಕಂಪನಿಯ ಪ್ರತಿನಿಧಿಗಳು ತಿಳಿಸಿದರು. 
ಭದ್ರತಾ ವ್ಯವಸ್ಥಾಪಕರು, ಮಾನವ ಸಂಪನ್ಮೂಲ ಅಧಿಕಾರಿ, ಅಕೌಂಟ್ಸ್, ಫೈನಾನ್ಸ್, ಮಾರಾಟ ಸಹವರ್ತಿ, ವ್ಯಾಪಾರ ಅಭಿವೃದ್ಧಿ ಸಹವರ್ತಿ, ಡೇಟಾ ಕಲೆಕ್ಷನ್ ಎಕ್ಸಿಕ್ಯೂಟಿವ್ಸ್ ಸ್ಥಾನಗಳಿಗೆ ಸಂದರ್ಶನಗಳು ನಡೆದವು. ಅರ್ಹರೆಂದು ಕಂಡುಬಂದವರಿಗೆ ಕಚೇರಿಗೆ ಬಂದು ನೇಮಕಾತಿ ಪತ್ರ ಪಡೆಯುವಂತೆ ಕಂಪನಿಗಳ ಅಧಿಕಾರಿಗಳು ತಿಳಿಸಿದರು. 
ಉದ್ಯೋಗ ಮೇಳದಲ್ಲಿ 7,500 ಹಿರಿಯ ನಾಯಕರು ಭಾಗವಿಸಿದ್ದರು. ಅಂತಿಮವಾಗಿ 3,726 ಹಿರಿಯ ನಾಗರೀಕರಿಗೆ ಉದ್ಯೋಗಗಳು ದೊರಕಿದೆ. 
ಉದ್ಯೋಗ ಮೇಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಚಂದ್ರಾ ಲೇಔಟ್ ನಿವಾಸಿ ಎಂ. ಶಿವಕುಮಾರ್ (68) ಅವರು, ಹಲವು ವರ್ಷಗಳ ಕಾಲ ನಾನು ಟೈಪಿಸ್ಟ್ ಆಗಿ ಕೆಲಸ ಮಾಡಿದ್ದೇನೆ. ಕಂಪ್ಯೂಟರೀಕರಣದ ಬಳಿಕ ನಮಗೆ ಬೆಲೆದಂತಾಗಿದೆ. ಕೆಲ ವರ್ಷಗಳ ಹಿಂದೆ ನನ್ನ ಮಗಳಿಗೆ ವಿವಾಹವಾಯಿತು. ನನಗೆ ಇದೀಗ ಯಾವುದೇ ಆದಾಯಗಳು ಬರುತ್ತಿಲ್ಲ. ಹೀಗಾಗಿ ನನ್ನ ಪತ್ನಿಯನ್ನು ನೋಡಿಕೊಳ್ಳಲು ನನಗೆ ಉದ್ಯೋಗದ ಅಗತ್ಯವಿದೆ ಎಂದು ಹೇಳಿದ್ದಾರೆ. 
ನನ್ನ ವಯಸ್ಸಿಗೆ ಉದ್ಯೋಗವನ್ನು ಪಡೆದುಕೊಳ್ಳುವುದು ಬಹಳ ಕಷ್ಟ ಎಂದು ಈ ಹಿಂದೆ ನಾನು ತಿಳಿದಿದ್ದೆ. ಇಲ್ಲಿ ಸಾಕಷ್ಟು ಹಿರಿಯರನ್ನು ನೋಡಿದೆ. ಇದೀಗ ನನಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಕೆಲಸ ಮಾಡುವ ಮನಸ್ಸಿದ್ದರೆ, ಅದಕ್ಕೆ ವಯಸ್ಸು ಎದುರಾಗುವುದಿಲ್ಲ. ನಾವು ಆರೋಗ್ಯವಾಗಿರುವವರೆಗೂ ನಾವು ಕೆಲಸವನ್ನು ಮಾಡಬಹುದು ಎಂದು ತಿಳಿಸಿದ್ದಾರೆ. 
ಅಲಸೂರು ನಿವಾಸಿ ಕೆ. ಶರವಣನ್ (60) ಮಾತನಾಡಿ, ಆಡಳಿತಾತ್ಮಕ ಹುದ್ದೆಗೆ ಸಂಬಂಧಿಸಿದ ಹುದ್ದೆಯನ್ನು ನೋಡುತ್ತಿದ್ದೇನೆ. ಅಪಘಾತದ ಬಳಿಕ ನನಗೆ ಹೆಚ್ಚು ಪ್ರಯಾಣ ಮಾಡಲು ಸಾಧ್ಯವಿಲ್ಲ. ನನಗೆ ಒಪ್ಪುವ ಕೆಲಸವನ್ನು ನಾನು ಹುಡುಕುತ್ತಿದ್ದೇನೆ. ಕುಟುಂಬ ಸದಸ್ಯರ ಮೇಲೆ ಅವಲಂಬಿತವಾಗುವುದು ನನಗೆ ಇಷ್ಟವಿಲ್ಲ. ಹಿರಿಯ ನಾಗರೀಕರಿಗೆ ಉದ್ಯೋಗಾವಕಾಶಗಳು ಸಿಗುವುದು ಅತ್ಯಂತ ಕಡಿಮೆ. ಪ್ರಸ್ತುತ ಪ್ರತೀಯೊಂದು ಕಂಪನಿಗಳು ಯುವಕರನ್ನೇ ಬಯಸುತ್ತವೆ ಎಂದು ಹೇಳಿದ್ದಾರೆ. 
ನನ್ನ ಮಗನಿಗೆ ಅವನ ಸಂಸಾರದ ಹೊಣೆಗಾರಿಕೆಯೇ ಹೆಚ್ಚಾಗಿದ್ದು, ನನ್ನ ಖರ್ಚನ್ನೂ ಆತನಿಗೆ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೀವನ ಉಳಿದ ಭಾಗವನ್ನು ವೃದ್ಧಾಶ್ರಮದಲ್ಲಿ ಕಳೆಯುವುದು ನನಗೆ ಇಷ್ಟವಿಲ್ಲ. ಹೀಗಾಗಿ ಬದುಕಿರುವವರೆಗೂ ನನ್ನಿಂದ ಸಾಧ್ಯವಾದಷ್ಟು ಕೆಲಸ ಮಾಡಿ ಬದುಕುತ್ತೇನೆ ಎಂದು 63 ವರ್ಷದ ವೃದ್ಧೆ ಹೇಳಿದ್ದಾರೆ. 
ಮನೆಯ ಮೇಲೆ ನಾನು ಸಾಲ ಪಡೆದುಕೊಂಡಿದ್ದೇನೆ. ಪ್ರತೀ ತಿಂಗಳು ನಾನು ರೂ.25 ಸಾವಿರ ಇಎಂಐ ಕಟ್ಟಬೇಕು. ಬರುತ್ತಿರುವ ಪಿಂಚಣಿ ದುಡ್ಡು ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ನನಗೆ ಉದ್ಯೋಗದ ಅಗತ್ಯವಿತ್ತು ಎಂದು ಯಶವಂತಪುರ ನಿವಾಸಿ ನಿವೃತ್ತ ಶಾಲಾ ಶಿಕ್ಷಕ ಗೋಪಾಲನ್ ರಾಜ್ (70) ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com