ನಂದಿನಿ ಹಾಲು, ಮೊಸರು ಬೆಲೆ ಪ್ರತಿ ಲೀಟರ್‍‍ಗೆ 2 ರುಪಾಯಿ ಹೆಚ್ಚಳ

ನಂದಿನಿ ಹಾಲು, ಮೊಸರಿನ ಬೆಲೆಯನ್ನು ಪ್ರತಿ ಲೀಟರ್‍‍ಗೆ 2 ರುಪಾಯಿ ಹೆಚ್ಚಳ ಮಾಡಲಾಗಿದ್ದು ನೂತನ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ...
ನಂದಿನಿ
ನಂದಿನಿ
ಬೆಂಗಳೂರು: ನಂದಿನಿ ಹಾಲು, ಮೊಸರಿನ ಬೆಲೆಯನ್ನು ಪ್ರತಿ ಲೀಟರ್‍‍ಗೆ 2 ರುಪಾಯಿ ಹೆಚ್ಚಳ ಮಾಡಲಾಗಿದ್ದು ನೂತನ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. 
ಹಾಲು ಮತ್ತು ಮೊಸರಿನ ದರ ಹೆಚ್ಚಳದ ಕುರಿತು ಇಂದು ಕೆಎಂಎಫ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಇನ್ನು ವಿವಿಧ ದರ್ಜೆಯ ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ ಪ್ರತಿ ಲೀಟರ್ ಗೆ ಎರಡು ರೂಪಾಯಿಯಷ್ಟು ಹೆಚ್ಚಿಸಲು ಕರ್ನಾಟಕ ಹಾಲು ಮಹಾಮಂಡಳಿ ನಿರ್ಧರಿಸಿದೆ. 
ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಹಾಲಿನ ದರ 33 ರುಪಾಯಿ ಇದೆ. ಇನ್ನು ಉತ್ತರ ಕರ್ನಾಟಕದಲ್ಲಿ ಹಾಲಿನ ದರ 34 ರುಪಾಯಿ ಇದ್ದು ಇದರಲ್ಲಿ ಎರಡು ರುಪಾಯಿ ಹೆಚ್ಚಳ ಮಾಡಲಾಗಿದೆ. 
2016ರ ಜನವರಿಯಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 4 ರುಪಾಯಿ ಮತ್ತು ಮೊಸರಿನ ದರವನ್ನು 2 ರುಪಾಯಿ ಹೆಚ್ಚಳ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com