ಮಾಗಡಿ ಮೂಲದ ಮಧು, ಪ್ರವೀಣ್ ಎಂಬ ಸಹೋದರರು, ಶಿಕಾರಿಪುರದ ರಾಘವೇಂದ್ರ, ಚೋರಡಿ ಮಂಜುನಾಥ್ , ಬೆಂಗಳೂರಿನ ಶ್ರೀಧರ್ ಮತ್ತು ಸೊರಬ ಮೂಲದ ರಾಜಶೇಖರ್ ಮೃತ ದುರ್ದೈವಿಗಳು. ಸಾಗರದಲ್ಲಿ ಸ್ನೇಹಿತನ ಮದುವೆಗಾಗಿ ತೆರಳಿದ್ದರು ಎಂದು ತಿಳಿದು ಬಂದಿದೆ. ಸ್ಥಳದಲ್ಲಿ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದೆ.