ಚೆನ್ನೈ ಮಂಗಳೂರು ಎಕ್ಸ್ ಪ್ರೆಸ್ ರೈಲು
ರಾಜ್ಯ
ಮಂಗಳೂರಿನಲ್ಲಿ ಹಳಿ ತಪ್ಪಿದ ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್
ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ ರೈಲು ಮಾರ್ನಮಿಕಟ್ಟೆ ಬಳಿ ಹಳಿ ತಪ್ಪಿದೆ...
ಮಂಗಳೂರು: ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ ರೈಲು ಮಾರ್ನಮಿಕಟ್ಟೆ ಬಳಿ ಹಳಿ ತಪ್ಪಿದೆ.
ಚೆನ್ನೈ ಸೆಂಟ್ರಲ್-ಮಂಗಳೂರು ನಡುವಿನ 12685 ರೈಲು ಹಳಿ ತಪ್ಪಿದ್ದು, ರೈಲಿನಿಂದ ಪ್ರಯಾಣಿಕರು ಕೆಳಗೆ ಇಳಿದ್ದಿದ್ದರಿಂದ ಯಾವೊಬ್ಬ ಪ್ರಯಾಣಿಕನಿಗೂ ತೊಂದರೆಯಾಗಿಲ್ಲ.
ಮಾರ್ನಮಿಕಟ್ಟೆ ಬಳಿ ರೈಲು ಪ್ರತ್ಯೇಕ ಹಳಿಯಲ್ಲಿ ತಪ್ಪಿ ಹೋಗಿದ್ದು ಇತರ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ರೈಲು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಚೆನ್ನೈಗೆ ಪ್ರಯಾಣ ಬೆಳೆಸಬೇಕಿತ್ತು.

