ಬಿಜೆಪಿ ತಮಿಳುನಾಡಿನಲ್ಲಿ ಹವಾ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಎಐಎಡಿಎಂಕೆ ಪಕ್ಷ ವಿಭಜನೆಯಲ್ಲಿ ಬಿಜೆಪಿ ಪಾತ್ರದ ಬಗ್ಗೆ ಭಾರಿ ಚರ್ಚೆ ನಡೆದು ತಣ್ಣಗಾಗಿತ್ತು. ಈ ನಡುವೆ ಪಕ್ಷದ ಒಂದು ಬಣದ ನಾಯಕ, ಮಾಜಿ ಸಿಎಂ ಪನ್ನೀರ್ ಸೆಲ್ವಂ ಅವರು ನರೇಂದ್ರ ಮೋದಿ, ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜತೆ ಮಾತನಾಡಿದ್ದು ಕುತೂಹಲ ಕೆರಳಿಸಿದೆ.