ಮೈಸೂರು: ಶ್ರೀರಂಗಪಟ್ಟಣ ಸಮೀಪ ಶನಿವಾರ ನಡೆದ ಕಾರು ಅಪಘಾತದಲ್ಲಿ ಬೆಂಗಳೂರು ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ.
ತ್ರಿಲೋಕ್ ಜಾಧವ್ ಮತ್ತು ರೂಪೇಶ್ ಮೃತಪಟ್ಟಿದ್ದಾರೆ. ರಘು ಪ್ರಕಾಶ್ ಎಂಬಾತ ಗಾಯಗೊಂಡಿದ್ದಾನೆ. ಮೂವರು ಲಗ್ಗೆರೆ ನಿವಾಸಿಗಳಾಗಿದ್ದಾರೆ.
ಮೈಸೂರಿನಲ್ಲಿ ತನ್ನ ಸ್ನೇಹಿತರ ವಿವಾಹಕ್ಕಾಗಿ ತೆರಳುತ್ತಿದ್ದರು. ಜಾಧವ್ ಎಂಬಾತ ಕಾರು ಡ್ರೈವಿಂಗ್ ಮಾಡುತ್ತಿದ್ದ. ಈ ವೇಳೆ ತಿರುವಿನಲ್ಲಿ ಕ್ರಾಸ್ ಮಾಡುವಾಗ ನಿಯಂತ್ರಣ ಕಳೆದುಕೊಂಡು ಎದುರು ಬರುತ್ತಿದ್ದ ಲಾರಿಗೆ ಅಪ್ಪಳಿಸಿದೆ.
ಈ ವೇಳೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ರಘು ಪ್ರಕಾಶ್ ನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀರಂಗ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.