ಆ್ಯಪ್, ವೆಬ್ ಸೈಟ್ ನಲ್ಲಿ ಶೀಘ್ರವೇ ಸಿಗಲಿದೆ 36 ಸಾವಿರ ದೇವಾಲಯಗಳ ಮಾಹಿತಿ!

ರಾಜ್ಯದ 36,000 ದೇವಾಲಯಗಳಲ್ಲಿನ ದರ್ಶನ ಸಮಯ ಸೇರಿದಂತೆ ದೇವಾಲಯಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಆ್ಯಪ್, ವೆಬ್ ಸೈಟ್ ಗಳಲ್ಲಿ ಒದಗಿಸಲು ಮುಜರಾಯಿ ಇಲಾಖೆ ಕ್ರಮ ಕೈಗೊಂಡಿದೆ.
ದೇವಾಲಯ (ಸಂಗ್ರಹ ಚಿತ್ರ)
ದೇವಾಲಯ (ಸಂಗ್ರಹ ಚಿತ್ರ)
ಬೆಂಗಳೂರು: ರಾಜ್ಯದ 36,000 ದೇವಾಲಯಗಳಲ್ಲಿನ ದರ್ಶನ ಸಮಯ ಸೇರಿದಂತೆ ದೇವಾಲಯಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಆ್ಯಪ್, ವೆಬ್ ಸೈಟ್ ಗಳಲ್ಲಿ ಒದಗಿಸಲು ಮುಜರಾಯಿ ಇಲಾಖೆ ಕ್ರಮ ಕೈಗೊಂಡಿದೆ. 
ಸ್ಪಿರಿಚುಯಲ್ ಪ್ರಾಡಕ್ಟ್ಸ್ ಪ್ರೈ.ಲಿ, ಮೈಸೂರು ಹಾಗೂ ಹೈದರಾಬಾದ್ ನ ಶ್ರೀರಾಮಾನುಜನ್ ಇನ್ಫೋ ಸೊಲ್ಯೂಷನ್ಸ್ ಆಂಡ್ ಸರ್ವೀಸಸ್ ಸಂಸ್ಥೆಗಳು ರಾಜ್ಯದ ದೇವಾಲಯಗಳಿಗೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ವೆಬ್ ಸೈಟ್ ಹಾಗೂ ಆ್ಯಪ್ ನ್ನು ತಯಾರಿಸಲಿವೆ. 
ದೇವಾಲಯಗಳ ಮಾಹಿತಿಯನ್ನು ಜಾಹೀರಾತು ಅಥವಾ ಇನ್ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು ಎಂಬ ಷರತ್ತು ವಿಧಿಸಿ ಯೋಜನೆಯನ್ನು ಎರಡೂ ಖಾಸಗಿ ಸಂಸ್ಥೆಗಳಿಗೆ ವಹಿಸಲಾಗಿದ್ದು, ಉಚಿತ ದರದಲ್ಲಿ ಆ್ಯಪ್ ಹಾಗೂ ವೆಬ್ ಸೈಟ್ ಗಳನ್ನು ತಯಾರಿಸಲಾಗುತ್ತಿದೆ. 
ಪ್ರಮುಖ ದೇವಾಲಯಗಳ ಕುರಿತ ಮಾಹಿತಿ ವೆಬ್ ಸೈಟ್ ಅಥವಾ ಆ್ಯಪ್ ಗಳಲ್ಲಿ ಇಲ್ಲವಾದ ಕಾರಣದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಗ್ರೂಪ್-ಎ, ಗ್ರೂಪ್-ಬಿ ವಿಭಾಗಗಳಲ್ಲಿ 800-1000 ದೇವಾಲಯಗಳ ಮಾಹಿತಿ ಲಭ್ಯವಿರಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com