ಮೃತರನ್ನು ಐಟಿಪಿಎಲ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ನರೇಂದ್ರ ಶರ್ಮಾ (31), ಹರೇಂದ್ರ ಎಂದು ಗುರ್ತಿಸಲಾಗಿದೆ.
ವೀರಸ್ವಾಮಿ ಲೇ ಐಟ್ ನಲ್ಲಿರುವ ಮನೆಯೊಂದರಲ್ಲಿ ಭಾನುವಾರ ಎಲ್'ಪಿಜಿ ಸಿಲಿಂಡರ್ ಸ್ಫೋಟಗೊಂಡು 5 ತಿಂಗಳ ಮಗು ಸೇರಿದಂತೆ ಒಟ್ಟು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಸ್ಫೋಟದಲ್ಲಿ ನರೇಂದ್ರ ಶರ್ಮಾ ಅವರ ಪತ್ನಿ ಶಿಲ್ಪ ಹಾಗೂ 5 ತಿಂಗಳ ಮಗು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಮೃತರ ಕುಟುಂಬಸ್ಥರು ಉತ್ತರಪ್ರದೇಶದ ಆಗ್ರಾದಲ್ಲಿದ್ದು, ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಶಿಲ್ಪಾ ಹಾಗೂ ಮಗುವನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ.
ಪೊಲೀಸರಿಗೆ ಹೇಳಿಕೆ ನೀಡಿರುವ ಶಿಲ್ಪಾ ಅವರು, ಹರೇಂದ್ರ ಅವರು ಎಂಸಿಎ ಪದವೀಧರನಾಗಿದ್ದು, ಉದ್ಯೋಗ ಹರಸಿ ನಗರಕ್ಕೆ ಬಂದಿದ್ದ. ಭಾನುವಾರ ಬೆಳಿಗ್ಗೆ 6.30ರ ಸುಮಾರಿಗೆ ಟೀ ಮಾಡುವ ಸಲುವಾಗಿ ಅಡುಗೆ ಮನೆಗೆ ಹೋಗಿದ್ದ. ಈ ವೇಳೆ ಗ್ಯಾಸ್ ಲೀಕ್ ಆಗುತ್ತಿರುವ ವಾಸನೆ ಬಂದಿದೆ. ಬಳಿಕ ರೆಗ್ಯುಲೇಟರ್ ನ್ನು ಸರಿಪಡಿಸಲು ಮುಂದಾಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟಗೊಂಡ ಸಂದರ್ಭದಲ್ಲಿ ನಾನು ನನ್ನ ಪತಿಯನ್ನು ಎದ್ದೇಳಿಸಲು ರೂಮಿಗೆ ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ಸಿಲಿಂಡರ್ ಸ್ಫೋಟಗೊಳ್ಳುತ್ತಿದ್ದಂತೆಯೇ ಸ್ಥಳೀಯರು ಗಾಯಾಳುಗಳನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸಿಲಿಂಡರ್ ಸ್ಫೋಟಗೊಂಡಿರುವ ತೀವ್ರತೆಗೆ ನೆರೆಮನೆಗಳು ಕೂಡ ನಾಶವಾಗಿದೆ ಎಂದು ತಿಳಿದುಬಂದಿದೆ.