3 ಮೂರು ದಿನಗಳ ಹಂಪಿ ಉತ್ಸವ ಇಂದಿನಿಂದ ಆರಂಭ

ವಿಶ್ವ ಪಾರಂಪರಿಕೆ ಹಾಗೂ ಸಾಂಸ್ಕೃತಿಕ ತಾಣವಾಗಿರುವ ಹಂಪಿಯಲ್ಲಿ ಮೂರು ದಿನಗಳ ನಡೆಯುವ ಹಂಪಿ ಉತ್ಸವ-2017 ಇಂದಿನಿಂದ ಆರಂಭಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ...
ಹಂಪಿ ಉತ್ಸವಕ್ಕೆ ತೆರಳುತ್ತಿರುವ ರೈತರು
ಹಂಪಿ ಉತ್ಸವಕ್ಕೆ ತೆರಳುತ್ತಿರುವ ರೈತರು
Updated on: 

ಬಳ್ಳಾರಿ: ವಿಶ್ವ ಪಾರಂಪರಿಕೆ ಹಾಗೂ ಸಾಂಸ್ಕೃತಿಕ ತಾಣವಾಗಿರುವ ಹಂಪಿಯಲ್ಲಿ ಮೂರು ದಿನಗಳ ನಡೆಯುವ ಹಂಪಿ ಉತ್ಸವ-2017 ಇಂದಿನಿಂದ ಆರಂಭಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. 

ಐತಿಹಾಸಿಕ ಉತ್ಸವವನ್ನು ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಉತ್ಸವ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲಾ ಆಡಳಿತ ಮಂಡಳಿ ಭಾರೀ ಸಿದ್ಧತೆಗಳನ್ನು ನಡೆಸಿದೆ. ಈಗಾಗಲೇ ರೂ.1.2 ಕೋಟಿ ವೆಚ್ಚದಲ್ಲಿ 11 ವೇದಿಕೆಗಳನ್ನು ವಿಭಿನ್ನ, ವಿಶಿಷ್ಟವಾಗಿ ನಿರ್ಮಿಸಿದ್ದು, 11 ವೇದಿಕೆಗಳಲ್ಲಿ ಒಟ್ಟು 405 ಕಾರ್ಯಕ್ರಮಗಳು ನಡೆಯಲಿವೆ. 

ಕರ್ನಾಟಕ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಧ್ವನಿ ಮತ್ತು ಬೆಳಕ ಕಾರ್ಯಕ್ರಮ ಆರಂಭವಾಗಿದ್ದು, ನ.9 ವರೆಗೆ ಜರುಗಲಿದೆ. 

ಉತ್ಸವ ಹಿನ್ನಲೆಯಲ್ಲಿ ಈಗಾಗಲೇ ಎತ್ತಿನಬಂಡಿ ಉತ್ಸವ, ಬೈಕ್ ಜಾಥಾ, ಪಾರಂಪರಿಕ ನಡಿಗೆ, ಬೈಕ್ ಸ್ಟಂಟ್ ಶೋ, ಗಾಳಿಪಟ ಉತ್ಸವ, ಚಿತ್ರ ಕಲಾ ಶಿಬಿರ, ಶಿಲ್ಪಕಲಾ ಶಿಬಿರ, ತುಂಗಭದ್ರಾ ಆರತಿ ಮಹೋತ್ವಸ, ಸೈಕಲ್ ಜಾಥಾ, ವಿಜಯನಗರ ವೈಭ ನೆನಪಿಸುವ ವಸಂತ ವೈಭವ, ಲೇಸರ್ ಶೋ, ಪ್ಯಾರಾಪ್ಲೇನ್, ಆಗಸದಲ್ಲಿ ಹಂಪಿ ಆರಂಭವಾಗಿದೆ. 

ಉತ್ಸವ ಕುರಿತಂತೆ ಮಾತನಾಡಿರುವ ಜಿಲ್ಲಾ ಸಚಿವ ಸಂತೋಷ್ ಲಾಡ್ ಅವರು, ಕಳೆದ ವರ್ಷ ಒಟ್ಟು 365 ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಈ ಬಾರಿ ಕಾರ್ಯಕ್ರಮಗಳ ಸಂಖ್ಯೆಯನ್ನು 405ಕ್ಕೆ ಏರಿಕೆ ಮಾಡಲಾಗಿದೆ. ಎಲ್ಲಾ ಕಾರ್ಯಕ್ರಮಗಳು 9 ವೇದಿಕೆಗಳಲ್ಲಿ ನಡೆಯಲಿದೆ. 3 ದಿನಗಳ ಉತ್ಸವದಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತರು ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ. ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಕೆ ರೂ.8 ಕೋಟಿ ನೀಡಿದೆ ಎಂದು ಹೇಳಿದ್ದಾರೆ. 

ಉತ್ಸವ ಹಿನ್ನಲೆಯಲ್ಲಿ ಭದ್ರತೆಗೆ ಯಾವುದೇ ಸಮಸ್ಯೆಗಳು ಎದುರಾಗಬಾರದೆಂಬ ಕಾರಣಕ್ಕೆ ವಿವಿಐಪಿ ವಾಹನಗಳಿಗೆ ವಿಶೇಷ ಪಾಸ್ ಗಳನ್ನು ನೀಡಲಾಗಿದ್ದು, ಉತ್ಸವ ನಡೆಯುವ ಸುತ್ತಮುತ್ತಲೂ 60ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಉತ್ಸವದ ಭದ್ರತೆಯನ್ನು ಬಳ್ಳಾರಿ ಎಸ್'ಪಿ ನೋಡಿಕೊಳ್ಳುತ್ತಿದ್ದು, ಈಗಾಗಲೇ 2 ಹೆಚ್ಚುವರಿ ಎಸ್'ಪಿ, 10 ಡಿವೈಎಸ್ಪಿ, 20 ಇನ್ಸ್ ಪೆಕ್ಟರ್ ಗಳು, 80 ಸಬ್ ಇನ್ಸ್ ಪೆಕ್ಟರ್ ಗಳು, 160 ಸಹಾಯಕ ಸಬ್ ಇನ್ಸ್ ಪೆಕ್ಟರ್ ಗಳು, 300 ಮುಖ್ಯ ಪೇದೆಗಳು, 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು, 600 ಗೃಹ ರಕ್ಷದ ಸಿಬ್ಬಂದಿಗಳು ಈಗಾಗಲೇ ಬಳ್ಳಾರಿಗೆ ತೆರಳಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com