ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ನಡುವೆಯೇ ಇಂದು ಬಾಗಲಕೋಟೆಯಲ್ಲಿ ಗರ್ಭಿಣಿ ಮಹಿಳೆ ಚೈತ್ರಪವಾರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮುಷ್ಕರದ ಹಿನ್ನಲೆಯಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆ ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನ ಗುಂದ ತಾಲ್ಲೂಕಿನ ಚಿಕ್ಕಕೊಡಗಲಿ ತಾಂಡಾ ನಿವಾಸಿ ಚೈತ್ರಾ ಪವಾರ 10.30ಕ್ಕೆ ಆಸ್ಪತ್ರೆಗೆ ಬಂದಿದ್ದರು. ಮಹಿಳೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯವುಳ್ಳ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿ ಕಳುಹಿಸಿದ್ದಾರೆ. ಏತನ್ಮಧ್ಯೆ ಮಹಿಳೆ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ, ಗರ್ಭದಲ್ಲಿದ್ದ ಮಗುವಿನ ಕಾಲು ಮುಂದೆ ಬಂದ ಸ್ಥಿತಿ ಕಂಡುಬಂದಿದ್ದು, ಆಕೆಯ ಪೋಷಕರು ದಾರಿಕಾಣದೇ ಅತಂತ್ರಸ್ಥಿತಿಯಲ್ಲಿದ್ದ ವೇಳೆ ಆಸ್ಪತ್ರೆಯ ಸಂಶೋಧನಾ ವಿದ್ಯಾರ್ಥಿಗಳು, ದಾದಿಯರು ಆಕೆಯ ನೆರವಿಗೆ ಮುಂದಾಗಿದ್ದಾರೆ.