ಯೂ-ಟರ್ನ್ ಹೊಡೆದ ಸರ್ಕಾರ: 18 ಸರ್ಕಾರಿ ಶಾಲೆಗಳಿಗೆ ಬೀಗ, 10 ಶಾಲೆಗಳಿಗೆ ನೋಟಿಸ್!

ಒಂದು ಮಗುವಿದ್ದರೂ ರಾಜ್ಯದಲ್ಲಿರುವ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ ಇದೀಗ ಯೂ-ಟರ್ನ್ ಹೊಡೆದಿದ್ದು, ಕಡಿಮೆ ಮಕ್ಕಳಿರುವ ಅನುದಾನಿಕ ಕನ್ನಡ ಶಾಲೆಗಳನ್ನು ಬಂದ್ ಮಾಡಿಸುವ ಪ್ರಕ್ರಿಯೆಗಳನ್ನು ಆರಂಭಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಒಂದು ಮಗುವಿದ್ದರೂ ರಾಜ್ಯದಲ್ಲಿರುವ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ ಇದೀಗ ಯೂ-ಟರ್ನ್ ಹೊಡೆದಿದ್ದು, ಕಡಿಮೆ ಮಕ್ಕಳಿರುವ ಅನುದಾನಿಕ ಕನ್ನಡ ಶಾಲೆಗಳನ್ನು ಬಂದ್ ಮಾಡಿಸುವ ಪ್ರಕ್ರಿಯೆಗಳನ್ನು ಆರಂಭಿಸಿದೆ. 

ರಾಜ್ಯದಲ್ಲಿ ಈಗಾಗಲೇ 18 ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಬೀಗ ಜಡಿಯಲಾಗಿದ್ದು, ಬಂದ್ ಮಾಡುವಂತೆ 10 ಶಾಲೆಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ. 

ಸಾರ್ವಜನಿಕ ಸೂಚನೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ಕಡಿಮೆ ಮಕ್ಕಳಿರುವ ಅನುದಾನಿಕ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ತಿಳಿಸಿದೆ. 

ಸಾರ್ವಜನಿಕ ಸೂಚನೆ ಇಲಾಖೆಯ ನಿಯಮದ ಪ್ರಕಾರ ಅನುದಾನಿತ ಶಾಲೆಗಳಲ್ಲಿ ಕನಿಷ್ಟವೆಂದರೂ 25 ವಿದ್ಯಾರ್ಥಿಗಳಿರಬೇಕು. 

ಪ್ರಸಕ್ತ ವರ್ಷದಲ್ಲಿ ನಾವು ಹೊಸ ನಿಯಮಗಳೇನನ್ನೂ ಮಾಡಿಲ್ಲ. ಪ್ರತೀ ವರ್ಷದಂತೆ ಈ ವರ್ಷ ಕೂಡ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ. 

ಸಾರ್ವಜನಿಕ ಸೂಚನಾ ಇಲಾಖೆ ಪ್ರತೀವರ್ಷ ಜಿಲ್ಲಾಧಿಕಾರಿಗಳ ಬಳಿ ಅನುದಾನಿಕ ಹಾಗೂ ಸರ್ಕಾರಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಕುರಿತಂತೆ ಮಾಹಿತಿ ಪಡೆಯುತ್ತಿರುತ್ತದೆ ಎಂದು ತಿಳಿಸಿದ್ದಾರೆ. 

ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಅಧಿಕಾರಿಗಳು ವಿಫಲಾರದೆ ಶಾಲೆಗಳಿಗೆ ನೀಡಲಾಗುತ್ತಿರುವ ಅನುದಾನಗಳು ಹಿಂಪಡೆಯುವ ಹಾಗೂ ಶಾಲೆಗೆ ನೋಟಿಸ್ ಜಾರಿ ಮಾಡುವ ಶಕ್ತಿಯನ್ನು ಸರ್ಕಾರ ಹೊಂದಿರುತ್ತದೆ. ನಿಯಮಗಳಂತೆಯೇ ಇಲಾಖೆ ನಡೆಯುತ್ತಿದೆ ಎಂದಿದ್ದಾರೆ. 

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಶಾಲೆಗಳ ಕುರಿತಂತೆ ನೀಡಿದ್ದ ಹೇಳಿಕೆಯು ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯವಾಗುತ್ತದೆ. ವಿದ್ಯಾರ್ಥಿಗಳೇ ಇಲ್ಲ ಎಂದಾದ ಮೇಲೆ ಅನುದಾನಿತ ಶಾಲೆಗಳ ಶಿಕ್ಷಕರಿಗೇಕೆ ಸರ್ಕಾರ ವೇತನವನ್ನು ನೀಡಬೇಕು?...ಈಗಾಗಲೇ ಮುಚ್ಚಲಾಗಿರುವ 18 ಅನುದಾನಿತ ಶಾಲೆಗಳ ಶಿಕ್ಷಕರನ್ನು ಇತರೆ ಶಾಲೆಗಳಿಗೆ ನೇಮಿಸುವ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. 

ಮುಚ್ಚಲಾಗಿರುವ ಶಾಲೆಯೊಂದರ ವಿದ್ಯಾರ್ಥಿ ಮಾತನಾಡಿ, ಹಲವು ವರ್ಷಗಳಿಂದಲೂ ಶಾಲೆಯಲ್ಲಿ ಓದುತ್ತಿದ್ದೆವು. ಇದೇ ಶಾಲೆಯಲ್ಲಿಯೇ 10 ತರಗತಿಯ ಪರೀಕ್ಷೆ ಬರೆಯಬೇಕೆಂದುಕೊಂಡಿದ್ದೆ. ನಮ್ಮ ಭಾವನೆಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತೇವೆಂದು ಹೇಳಿದ್ದಾರೆ. 

ಸಾರ್ವಜನಿಕ ಸೂಚನಾ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರವನ್ನು ಶಾಲೆ ಸಂಘಗಳು ಸ್ವಾಗತಿಸಿವೆ. 

ಕರ್ನಾಟಕತ ಶಾಸಗಿ ಶಾಲೆಗಳ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳನ್ನು ಮುಚ್ಚುವುದು ಸಾಮಾನ್ಯ. ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲದಿದ್ದರೆ, ಆ ಶಾಲೆಗಳಲ್ಲಿರುವ ಶಿಕ್ಷಕರಿಗೆ ಸರ್ಕಾರ ವೇತನವನ್ನು ಹೇಗೆ ನೀಡುತ್ತದೆ. ಶಾಲೆ ಕಾರ್ಯನಿರ್ವಹಿಸಬೇಕೆಂದರೆ, ಆ ಶಾಲೆಯನ್ನು ಖಾಸಗಿ ಶಾಲೆ ಮಾಡಲಿ. ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಸರ್ಕಾರದ ಅನುದಾನವನ್ನು ಹಿಂತಿರುಗಿಸಲಿ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com