ಇತಿಹಾಸದ ಗತವೈಭವ ಸಾರುವ ಹಂಪಿಯಲ್ಲಿ ಕಳೆಕಟ್ಟಿದ ಉತ್ಸವ

ವಿಜಯನಗರ ಗತವೈಭವವನ್ನು ಸಾರುವ ಶಿಲಾಶಿಲ್ಪಗಳಿಗೆ ಕಂಗೊಳಿಸುವ ವಿದ್ಯುದಾಲಂಕಾರ, ಆಗಸದಲ್ಲಿ ಬಾಣ ಬಿರುಸಿನ ಚಿತ್ತಾರ, ಕಲೆ, ಸಂಸ್ಕೃತಿಯ ಪ್ರತಭಾ ಪ್ರದರ್ಶನಗಳ ನಡುವೆ ಶುಕ್ರವಾರ ಸಂಜೆ ಹಂಪಿ ಉತ್ಸವವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು...
ಇತಿಹಾಸದ ಗತವೈಭವ ಸಾರುವ ಹಂಪಿಯಲ್ಲಿ ಕಳೆಕಟ್ಟಿದ ಉತ್ಸವ
ಇತಿಹಾಸದ ಗತವೈಭವ ಸಾರುವ ಹಂಪಿಯಲ್ಲಿ ಕಳೆಕಟ್ಟಿದ ಉತ್ಸವ
Updated on: 

ಹಂಪಿ: ವಿಜಯನಗರ ಗತವೈಭವವನ್ನು ಸಾರುವ ಶಿಲಾಶಿಲ್ಪಗಳಿಗೆ ಕಂಗೊಳಿಸುವ ವಿದ್ಯುದಾಲಂಕಾರ, ಆಗಸದಲ್ಲಿ ಬಾಣ ಬಿರುಸಿನ ಚಿತ್ತಾರ, ಕಲೆ, ಸಂಸ್ಕೃತಿಯ ಪ್ರತಭಾ ಪ್ರದರ್ಶನಗಳ ನಡುವೆ ಶುಕ್ರವಾರ ಸಂಜೆ ಹಂಪಿ ಉತ್ಸವವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. 

ಮೂರು ದಿನಗಳ ಕಾ ವೈಭವದ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. 

ಹಂಪಿ ಉತ್ಸವಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿದ್ದ ಜಿಲ್ಲಾ ಆಡಳಿತ ಮಂಡಳಿಗಳು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ಹಂಪಿ ಉತ್ಸವದ ಕಾರಣೀಕರ್ತರಾಗಿರುವ ಎಂ.ಪ್ರಕಾಶಅ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮುಖ್ಯ ವೇದಿಕೆಯನ್ನು ನಿರ್ಮಿಸಲಾಗಿದೆ. ಹಂಪಿ ಉತ್ಸವದಲ್ಲಿ ವಿದೇಶಿಯರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು. 

ಉತ್ಸವದ ವೇಳೆ ಜಿಲ್ಲಾ ಸಚಿವ ಸಂತೋಷ್ ಲಾಡ್ ಅವರು ಪುಸ್ತಕ ಪ್ರದರ್ಶನ, ತೋಟಗಾರಿಗೆ ಹಾಗೂ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. 

ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಣ್ಣಬಣ್ಣದ ವಿದ್ಯುದಾಲಂಕಾರಗಳು ಹಾಗೂ ಸಾಂಪ್ರದಾಯಿಕ ಅಡುಗೆಗಳು ಉತ್ಸವಕ್ಕೆ ಕಳೆಕಟ್ಟಿತ್ತು. 

ಸ್ಥಳೀಯರು ಹಾಗೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿರುವ ಜಿಲ್ಲಾ ಆಡಳಿತ ಮಂಡಳಿಗಳು ಹಂಪಿ ಉತ್ಸವದ ವೇಳೆ ಅಂಗಡಿಗಳನ್ನು ಸ್ಥಾಪಿಸಿ ವ್ಯಾಪಾರ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಉತ್ಸವದಲ್ಲಿ ಶಿಲ್ಪಕಲಾ ಮೇಳ ನಡೆಯುತ್ತಿದ್ದು, ಈ ಮೇಳವನ್ನು ಉತ್ಸವ ಆರಂಭವಾಗುವುದಕ್ಕೂ 20 ದಿನಗಳ ಹಿಂದೆಯೇ ಆರಂಭಿಸಲಾಗಿದೆ. 

ಮೇಳದಲ್ಲಿ ಬೇಲೂರು-ಹಳೇಬೀಡು, ಬಾದಾಮಿಯ ಶುಕಾಬಾಶಿಣಿ, ಕೃಷ್ಣದೇವರಾಯ ಮತ್ತು ಅವರ ಪತ್ನಿಯ ಪ್ರಾಚೀನದ ಕಲ್ಲಿನ ಕೆತ್ತನೆಗಳನ್ನು ಪ್ರದರ್ಶಿಸಲಾಗಿದ್ದು, ಶಿಲ್ಪಿ ಸುರೇಶ್ ಕಮ್ಮಾರ್ ಮತ್ತು ಅವರ ತಂಡದವರು ಒಂದು ಕಲ್ಲಿನಲ್ಲಿ ಹಂಪಿ ಸ್ಮಾರಕ ಕೆತ್ತಿರುವುದು ಎಲ್ಲರ ಗಮನವನ್ನು ಸೆಳೆಯುತ್ತಿದೆ. 

ಸ್ಮಾರಕದಲ್ಲಿ ಹಜಾರ ವಿಠಲ ದೇವಸ್ಥಾನ, ವಿರೂಪಾಕ್ಷ ದೇಗುಲದ ಗೋಪುರ, ಲೋಟಸ್ ಮಹಲ್ ಮತ್ತು ಸೂರ್ಯಾಸ್ತ ಸೇರಿದಂತೆ ಇನ್ನಿತರೆ ಸ್ಮಾರಕಗಳನ್ನು ಕತ್ತನೆ ಮಾಡಲಾಗಿದೆ ಎಂದು ಕಮ್ಮಾನ್ ಅವರು ಹೇಳಿದ್ದಾರೆ. 

ಕಲ್ಲಿನ ಕತ್ತನೆಯನ್ನು ಉತ್ಸವದ ಅಂತಿಮದ ದಿನದವರೆಗೂ ಪ್ರದರ್ಶನಕ್ಕಿಡಲಾಗುತ್ತದೆ. ಶ್ರೀ ಕೃಷ್ಣ ದೇವರಾಯ ಮತ್ತು ಅವರ ಪತ್ನಿ ತಿರುಮಲಾಂಬ ದೇವಿ, ಚಿನ್ಮಲಾಂಬ ದೇವಿ ಕೆತ್ತನೆಯ ಪ್ರಮುಖ ಆಕರ್ಷಣೆಯಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com