ಎನ್ಆರ್ ಐ ಸೋಗಿನಲ್ಲಿ ಮಹಿಳೆಗೆ 2.9 ಲಕ್ಷ ರೂಪಾಯಿ ವಂಚನೆ

ವ್ಯಕ್ತಿಯೊಬ್ಬ ಎನ್ಆರ್ ಐ ಸೋಗಿನಲ್ಲಿ ಮಹಿಳೆಯೊಬ್ಬರಿಗೆ 2.9 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎನ್ಆರ್ ಐ ಸೋಗಿನಲ್ಲಿ ಮಹಿಳೆಗೆ 2.9 ಲಕ್ಷ ರೂಪಾಯಿ ವಂಚನೆ
ಎನ್ಆರ್ ಐ ಸೋಗಿನಲ್ಲಿ ಮಹಿಳೆಗೆ 2.9 ಲಕ್ಷ ರೂಪಾಯಿ ವಂಚನೆ
ಬೆಂಗಳೂರು: ವ್ಯಕ್ತಿಯೊಬ್ಬ ಎನ್ಆರ್ ಐ ಸೋಗಿನಲ್ಲಿ ಮಹಿಳೆಯೊಬ್ಬರಿಗೆ 2.9 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಕೋರಮಂಗಲದಲ್ಲಿರುವ 29 ವರ್ಷದ ಮಹಿಳೆ 2.9 ಲಕ್ಷವನ್ನು ಕಳೆದುಕೊಂಡಿದ್ದಾರೆ. ಜೀವನ್ ಸಾಥಿ ವೆಬ್ ಸೈಟ್ ನಲ್ಲಿ ಮೊಹಮ್ಮದ್ ಅಬ್ದುಲ್ ನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆಗೆ ಮೊಹಮ್ಮದ್ ಅಬ್ದುಲ್ ತಾನು ಅಮೆರಿಕದ ನ್ಯೂ ಜೆರ್ಸಿಯ ನಿವಾಸಿ ಎಂದು ಹೇಳಿ ನಂಬಿಸಿದ್ದಾನೆ.
ಆಗಸ್ಟ್ 13 ರಂದು ಮಹಿಳೆಗೆ ಅಚ್ಚರಿಯ ಉಡುಗೊರೆಯೊಂದನ್ನು ಕಳಿಸಿರುವುದಾಗಿ ಹೇಳಿದ್ದ, ಇದಾದ ಒಂದು ವಾರದ ಬಳಿಕ ಮಹಿಳೆಗೆ ಕರೆ ಮಾಡಿದ್ದ ಕೊರಿಯರ್ ಏಜೆನ್ಸಿ "ನಿಮಗೆ ಓರ್ವ ವ್ಯಕ್ತಿ  $18,000 ಹಣವನ್ನು ಕಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ ಈ ಹಣವನ್ನು ಸ್ವೀಕರಿಸಲು ಶೇ.18 ರಷ್ಟು ಜಿಎಸ್ ಟಿಯನ್ನು ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ ಎಂಬ ಷರತ್ತು ವಿಧಿಸಿದ್ದರು. ಸೂಚನೆಯಂತೆಯೇ 2.9 ಲಕ್ಷ ರೂಪಾಯಿಯನ್ನು ಮಹಿಳೆ ನಿರ್ದಿಷ್ಟ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು.  ಇದಾದ ಕೆಲವೇ ದಿನಗಳಲ್ಲಿ ಮತ್ತೆ 2.11 ಲಕ್ಷ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಈ ಬಾರಿ ಮಹಿಳೆಗೆ ಅನುಮಾನ ಬಂದು ಕರೆ ಬಂದಿದ್ದ ಕೊರಿಯರ್ ಸಂಸ್ಥೆಗೆ ಪುನಃ ಕರೆ ಮಾಡಿದ್ದರು. ಆದರೆ ಸ್ವಿಚ್ಡ್ ಆಫ್ ಎಂಬ ಪ್ರತಿಕ್ರಿಯೆ ಬಂದಿತ್ತು. ಇತ್ತ ತನಗೆ ಪರಿಚಯವಾಗಿದ್ದ ಮೊಹಮ್ಮದ್ ಅಬ್ದುಲ್ ನನ್ನೂ ಸಹ ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ವಂಚನೆಗೊಳಗಾಗಿದ್ದ ಮಹಿಳೆ ಪೊಲೀಸ್ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com