ಚಾಲಕನಿಲ್ಲದೆಯೇ 6 ಕಿ.ಮೀ ಚಲಿಸಿದ ರೈಲು ಇಂಜಿನ್ ಪ್ರಕರಣ: ತನಿಖೆ ಆರಂಭಿಸಿದ ರೈಲ್ವೇ ಅಧಿಕಾರಿಗಳು

ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲು ಇಂಜಿನ್ ಚಾಲಕನಿಲ್ಲದೆ ಇದ್ದಕ್ಕಿದ್ದಂತೆ ಚಲಿಸಿ 6 ಕಿ.ಮೀ ಚಲಿಸಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ನಿಲ್ದಾಣದ 3 ಸ್ಟೇಷನ್ ಮಾಸ್ಟರ್ ಮತ್ತು ರೈಲ್ವೇ ಚಾಲಕನನ್ನು ಸೇವೆಯಿಂದ ಅಮಾನತು...
ಚಾಲಕನಿಲ್ಲದೆಯೇ 6 ಕಿ.ಮೀ ಚಲಿಸಿದ ರೈಲು ಇಂಜಿನ್
ಚಾಲಕನಿಲ್ಲದೆಯೇ 6 ಕಿ.ಮೀ ಚಲಿಸಿದ ರೈಲು ಇಂಜಿನ್
ಕಲಬುರಗಿ: ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲು ಇಂಜಿನ್ ಚಾಲಕನಿಲ್ಲದೆ ಇದ್ದಕ್ಕಿದ್ದಂತೆ ಚಲಿಸಿ 6 ಕಿ.ಮೀ ಚಲಿಸಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ನಿಲ್ದಾಣದ 3 ಸ್ಟೇಷನ್ ಮಾಸ್ಟರ್ ಮತ್ತು ರೈಲ್ವೇ ಚಾಲಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಶನಿವಾರ ತಿಳಿದುಬಂದಿದೆ. 
ಸೊಲ್ಲಾಪುರ ರೈಲ್ವೆ ವಲಯದ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿದ್ದು, ವಾಡಿ ರೈಲು ನಿಲ್ದಾಣದ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿ ತನಿಖೆ ಮುಂದುವರೆಸಿದ್ದಾರೆಂದು ವರದಿಗಳು ತಿಳಿಸಿವೆ. 
ಪ್ರಕರಣ ಸಂಬಂಧ ಪ್ರಸ್ತುತ ರೈಲ್ವೆ ನಿಲ್ದಾಣದ ಮೂವರು ಸ್ಚೇಷನ್ ಮಾಸ್ಟರ್ ಗಳನ್ನು ಮತ್ತು ಪೈಲೆಟ್ ನನ್ನು ಅಧಿಕಾರಿಗಳು ಸೇವೆಯಿಂದ ಅಮಾನತು ಮಾಡಿದ್ದು, ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ. 
ನ.8 ರಂದು ಎಂದಿನಂತೆ ಚೆನ್ನೈ-ಮುಂಬೈ ರೈಲು ಸಂಜೆ 3.30ಕ್ಕೆ ಬಂದು ಪ್ಲಾಟ್'ಫಾರಂ-4ರಲ್ಲಿ ನಿಂತಿತ್ತು. ಚೆನ್ನೈನಿಂದ ವಾಡಿವರೆಗೆ ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಆಗಮಿಸುವ ಈ ರೈಲು, ನಂತರ ಡೀಸೆಲ್ ಎಂಜಿನ್ ನೊಂದಿಗೆ ಮುಂಬೈಗೆ ಸಾಗುತ್ತದೆ. ಅದರಂತೆ ಬುಧವಾರ ಸಂಜೆಯೂ ಚಾಲಕ ರೈಲಿನ ವಿದ್ಯುತ್ ಎಂಜಿನ್ ಅನ್ನು ಪ್ರತ್ಯೇಕಿಸಿ ಅದನ್ನು ಬೇರೆ ಹಳಿಯ ಮೂಲಕ ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ಪ್ರತ್ಯೇಕವಾಗಿ ನಿಲ್ಲಿಸಿದ್ದ. 
ನಂತರ ಡೀಸೆಲ್ ಎಂಜಿನ್ ನೊಂದಿಗೆ ರೈಲು ಮುಂಬೈನತ್ತ ಮುಂದೆ ಸಾಗಿತ್ತು. ಆದರೆ, ಚಾಲಕ ಎಲೆಕ್ಟ್ರಿಕಲ್ ಎಂಜಿನ್ ನ ಚಕ್ರಕ್ಕೆ ವೇಗ ನಿಯಂತ್ರಕವನ್ನು ಅಳವಡಿಸುವಲ್ಲಿ ನಿರ್ಲಕ್ಷ್ಯ ತೋರಿದ್ದ ಹಿನ್ನಲೆಯಲ್ಲಿ ರೈಲು ಯಾರ ಅರಿವಿಗೂ ಬಾರದಂತೆ ಹಳಿಯಲ್ಲಿ ಮುಂದೆ ಸಾಗಿತ್ತು. ಇದು ಅರಿವಿಗೆ ಬರುತ್ತಿದ್ದಂತೆಯೇ ಸಿಬ್ಬಂದಿ ತಕ್ಷಣ ಎಲೆಕ್ಟ್ರಿಕ್ ಎಂಜಿನ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. 
ನಂತರ ಬೈಕ್ ಹತ್ತಿ ರೈಲ್ವೆ ಹಳಿಗೆ ಸಮಾನಾಂತರವಾಗಿ ನಿರ್ಮಿಸಿದ್ದ ರಸ್ತೆಯಲ್ಲಿ ಎಂಜಿನ್'ನ್ನು ಹಿಂಬಾಲಿಸಿ ಗಂಟೆಗೆ 10 ರಿಂದ 15 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದ ಈ ರೈಲು ನಾಲವಾರ ರೈಲು ನಿಲ್ದಾಣ ತಲುಪಿದಾಗ ಬೈಕ್ ನಲ್ಲಿದ್ದ ಸಿಬ್ಬಂದಿ ಎಂಜಿನ್ ಹತ್ತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಎದುರಿನಿಂದ ಬರುವ ಎಲ್ಲಾ ರೈಲುಗಳನ್ನು ತಡೆದು ನಿಲ್ಲಿಸಿದ್ದ ಅಧಿಕಾರಿಗಳು ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com