ವಂಚನೆ ಪ್ರಕರಣ: ಫ್ಲಿಪ್'ಕಾರ್ಟ್ ಸ್ಥಾಪಕರ ವಿರುದ್ದ ಪ್ರಕರಣ ದಾಖಲು

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ-ಕಾಮರ್ಸ್'ನ ದಿಗ್ಗಜ ಎಂದೇ ಕರೆಸಿಕೊಳ್ಳುವ ಫ್ಲಿಪ್ ಕಾರ್ಟ್ ಸ್ಥಾಪಕರ ವಿರುದ್ದ ಸೋಮವಾರ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ-ಕಾಮರ್ಸ್'ನ ದಿಗ್ಗಜ ಎಂದೇ ಕರೆಸಿಕೊಳ್ಳುವ ಫ್ಲಿಪ್ ಕಾರ್ಟ್ ಸ್ಥಾಪಕರ ವಿರುದ್ದ ಸೋಮವಾರ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. 
ಫ್ಲಿಪ್ ಕಾರ್ಟ್ ಸ್ಥಾಪಕರು ಹಾಗೂ ನಿರ್ವಹಣಾ ಸಿಬ್ಬಂದಿ ವಿರುದ್ಧ ಇಂದಿರಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಇಂದಿರಾ ನಗರದಲ್ಲಿ ಸಿ ಸ್ಟೋರ್ ನಡೆಸುತ್ತಿರುವ ನವೀನ್ ಕುಮಾರ್ ಎಂಬುವವರು ಫ್ಲಿಪ್ ಕಾರ್ಟ್ ಸ್ಥಾಪಕರಾದ ಸಚಿನ್ ಹಾಗೂ ಬಿನ್ನಿ ಬನ್ಸಾಲ್ ವಿರುದ್ಧ ದೂರು ದಾಖಲಿಸಿದ್ದಾರೆಂದು ವರದಿಗಳು ತಿಳಿಸಿವೆ. 
2015 ಜೂನ್ ಮತ್ತು 2016ರಲ್ಲಿ ಫ್ಲಿಪ್ ಕಾರ್ಟ್ ನಡುವೆ ಒಪ್ಪಂದವಾಗಿದ್ದು, ಕಂಪನಿಯ ಬಳಿ ಫ್ಲಿಪ್ ಕಾರ್ಡ್ 14,000 ಲ್ಯಾಪ್ ಟಾಪ್ ಗಳನ್ನು ಪೂರೈಕೆ ಮಾಡುವಂತೆ ತಿಳಿಸಿದೆ. ಇದರಂತೆ ಲ್ಯಾಪ್ ಟಾಪ್ ಗಳನ್ನು ಫ್ಲಿಪ್ ಕಾರ್ಟ್ ಗೆ ನೀಡಲಾಗಿತ್ತು. ಆದರೆ, ಫ್ಲಿಪ್ ಕಾರ್ಟ್ 1,480 ರಿಟರ್ನ್ಡ್ ವಸ್ತುಗಳಿಗೆ ಮಾತ್ರ ಹಣವನ್ನು ನೀಡಿದೆ. ಇತರೆ ಲ್ಯಾಪ್ ಟಾಪ್ ಗಳು ಹಾಗೂ ಅದರ ಶಿಪ್ಪಿಂಗ್, ಟಿಡಿಎಸ್ ಶುಲ್ಕಗಳನ್ನು ನೀಡಿಲ್ಲ. ಹಣವನ್ನು ನೀಡದೆ ಫ್ಲಿಪ್ ಕಾರ್ಟ್ ವಂಚಿಸಿದೆ ಎಂದು ನವೀನ್ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ದಾಖಲೆಗಳನ್ನು ನೀಡುವಂತೆ ತಿಳಿಸಲಾಗಿದೆ. ದಾಖಲೆಗಳು ನೀಡಿದ ಬಳಿಕ ಫ್ಲಿಪ್ ಕಾರ್ಟ್'ಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com