ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದ ಗ್ಯಾಸ್ ಟ್ಯಾಂಕರ್: ಸಂಚಾರ ಅಸ್ತವ್ಯಸ್ತ

ಹೊಳೆನರಸೀಪುರ ತಾಲೂಕಿನ ಮೈಸೂರು ರಸ್ತೆಯ ಎಡೆಗೋಡನಹಳ್ಳಿ ಗ್ರಾಮ ಸಮೀಪ ತಿರುವಿನಲ್ಲಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ವೊಂದು ನಿಯಂತ್ರಣ ತಪ್ಪು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲ ಗಂಟೆಗಳ ಹಾಸನ ಮತ್ತು ಮೈಸೂರು ನಡುವಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹಾಸನ: ಹೊಳೆನರಸೀಪುರ ತಾಲೂಕಿನ ಮೈಸೂರು ರಸ್ತೆಯ ಎಡೆಗೋಡನಹಳ್ಳಿ ಗ್ರಾಮ ಸಮೀಪ ತಿರುವಿನಲ್ಲಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ವೊಂದು ನಿಯಂತ್ರಣ ತಪ್ಪು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲ ಗಂಟೆಗಳ ಹಾಸನ ಮತ್ತು ಮೈಸೂರು ನಡುವಿನ ಸಂಚಾರ ಅಸ್ತವ್ಯಸ್ತಗೊಂಡಿತ್ತು. 
ನಿನ್ನೆ ಸಂಜೆ 4.45ರ ಸುಮಾರಿಗೆ ಗ್ಯಾಸ್ ತುಂಬಿ ಮೈಸೂರು ಕಡೆಗೆ ಸಂಚರಿಸುತ್ತಿದ್ದ ಇಂಡಿಯನ್ ಕಂಪನಿಯ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. 
ಯೂ-ಟರ್ನ್ ತೆಗೆದುಕೊಳ್ಳುವ ವೇಳೆ ವಾಹನದ ಮೇಲಿದ್ದ ನಿಯಂತ್ರಣವನ್ನು ಚಾಲಕ ಕಳೆದುಕೊಂಡಿದ್ದಾನೆ. ಈ ವೇಳೆ ವಾಹನ ಉರುಳಿಬಿದ್ದಿದೆ. ಕೂಡಲೇ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯನ್ನು ಆರಂಭಿಸಿದರು. ಬಳಿಕ ಸ್ಥಳಕ್ಕೆ ತಜ್ಞರ ತಂಡವೂ ಆಗಮಿಸಿ, ಟ್ಯಾಂಕರ್ ಉರುಳಿ ಬೋಲ್ಡ್ ಸಡಿಲಗೊಂಡಿದ್ದನ್ನೂ ಕೂಡಲೇ ದುರಸ್ತಿ ಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com