ವಿಡಿಯೋ ಗೇಮ್ ಗೀಳು: ಸಾಲ ತೀರಿಸಲು ಹತ್ಯೆ, ಜೈಲು ಪಾಲಾದ ಯುವಕ

ವಿಡಿಯೋ ಗೇಮ್ ಗೀಳಿನಿಂದಾಗಿ ಮಾಡಿದ್ದ ಸಾಲವನ್ನು ತೀರಿಸಲು ಹತ್ಯೆ ಮಾಡಿದ್ದ ಯುವಕನೊಬ್ಬ ಇದೀಗ ಜೈಲು ಪಾಲಾಗಿದ್ದಾನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಡಿಯೋ ಗೇಮ್ ಗೀಳಿನಿಂದಾಗಿ ಮಾಡಿದ್ದ ಸಾಲವನ್ನು ತೀರಿಸಲು ಹತ್ಯೆ ಮಾಡಿದ್ದ ಯುವಕನೊಬ್ಬ ಇದೀಗ ಜೈಲು ಪಾಲಾಗಿದ್ದಾನೆ. 
31 ವರ್ಷದ ಮಹೇಶ್.ಎಸ್ ಜೈಲು ಪಾಲಾದ ಯುವಕನಾಗಿದ್ದಾನೆ. ಈತ ಬನಶಂಕರಿ 2ನೇ ಹಂತದ ನಿವಾಸಿಯಾಗಿದ್ದಾನೆ. ವಿಡಿಯೋ ಗೇಮ್ ಪಾರ್ಲರ್ ಮಾಲೀಕರಿಗೆ ರೂ.30 ಸಾವಿರ ಹಣ ನೀಡುವ ಸಲುವಾಗಿ ಮಹೇಶ್ 6 ವರ್ಷಗಳ ಹಿಂದಷ್ಟೇ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ್ದ. ಇದೀಗ ಪ್ರಕರಣ ಸಂಬಂಧ ಮಹೇಶ್'ಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ ರೂ.10,000 ದಂಡವನ್ನು ವಿಧಿಸಿದೆ ಎಂದು ತಿಳಿದುಬಂದಿದೆ. 
ಎಸ್ಎಸ್ಎಲ್'ಸಿ ಮಾಡಿದ್ದ ಮಹೇಶ್ ನಂತರ ವಿದ್ಯಾಭ್ಯಾಸ ಮುಂದುವರೆಸಿರಲಿಲ್ಲ. ಕೆಲಸವಿಲ್ಲದೆ ಕುಳಿತಿದ್ದ ಮಹೇಶ್'ಗೆ ಪೋಷಕರು ಟಾಟಾ ಇಂಡಿಕಾ ಕಾರನ್ನು ನೀಡಿದ್ದಾರೆ. ಬಳಿಕ ಮಹೇಳ್ ಕಾರನ್ನು ಎನ್.ಆರ್.ಕಾಲೋನಿಯಲ್ಲಿದ್ದ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಜೊತೆಗೆ ಸೇರ್ಪಡೆಗೊಳಿಸಿದ್ದಾರೆ. ಬಳಿಕ ಕಾರಿನಿಂದ ಬರುತ್ತಿದ್ದ ಹಣವನ್ನು ಸಿಗರೇಟ್, ಮದ್ಯಪಾನ ಹಾಗೂ ವಿಡಿಯೋ ಗೇಮ್ ಆಡುವುದಕ್ಕೆ ಖರ್ಚು ಮಾಡುತ್ತಿದ್ದ. 
ಬನಶಂಕರಿಯ ಬಿಡಿಎ ಕಾಂಪ್ಲೆಸ್ ಹಾಗೂ ಬಸವೇಶ್ವರ ನಗದಲ್ಲಿರುವ ವಿಡಿಯೋ ಗೇಮ್ ಪಾರ್ಲರ್ ಗಳಿಗೆ ಹೋಗುತ್ತಿದ್ದ ಮಹೇಶ್ ಪ್ರತೀನಿತ್ಯ ಗೇಮ್ ಗಳನ್ನು ಆಡುತ್ತಿದ್ದ. ಹೀಗೆ ಅಂಗಡಿ ಮಾಲೀಕರ ಬಳಿ ಸಾವಿರಗಟ್ಟಲೆ ಸಾಲ ಮಾಡಿಕೊಂಡಿದ್ದ. ಬಳಿಕ ಸಾಲವನ್ನು ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ. 
ಮಹೇಳ್ ನೆರೆಮನೆಯಲ್ಲಿರುವ ವಿಶಾಲಾಕ್ಷಮ್ಮ ಎಂಬುವವರು ತಮ್ಮ ಮಕ್ಕಳಿಗೆ ಫೋನ್ ಮಾಡಲು ಆಗಾಗ ಮಹೇಶ್ ನನ್ನು ಕರೆಯುತ್ತಿದ್ದರು. 2011ರ ಮಾರ್ಚ್ 7 ರಂದು ವಿಶಾಲಾಕ್ಷಮ್ಮ ಅವರು ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಮನೆಗೆ ಬಂದಿರುವ ಮಹೇಶ್ ಟೀ ಬೇಕೆಂದು ಕೇಳಿದ್ದಾನೆ. ಈ ವೇಳೆ ವಿಶಾಲಾಕ್ಷಮ್ಮ ಅವರು ಅಡುಗೆ ಮನೆಗೆ ಹೋದಾಗ ದಾರವನ್ನು ಕುತ್ತಿಗೆಗೆ ಸುತ್ತಿ ಹತ್ಯೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ರೂ.1 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಬಳಿಕ ವಿಡಿಯೋ ಗೇಮ್ ಪಾರ್ಲರ್ ಅವರಿಗೆ ನೀಡಬೇಕಿದ್ದ ಸಾಲದ ಹಣವನ್ನು ನೀಡಿ ಆಡುಗೋಡಿಯಲ್ಲಿರುವ ತನ್ನ ಸ್ನೇಹಿತರ ಮನೆಗೆ ಪರಾರಿಯಾಗಿದ್ದಾನೆ. ಬಳಿಕ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದ ಬನಶಂಕರಿ ಪೊಲೀಸರು ಘಟನೆ ನಡೆದ 7 ದಿನಗಳ ಬಳಿಕ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com