ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಬಸ್ ಡಿಪೋ ಸಂಖ್ಯೆ 13ರಲ್ಲಿ ಈ ಘಟನೆ ನಡೆದಿದ್ದು, ಡಿಪೋದಲ್ಲಿರುವ ಡೀಸೆಲ್ ಟ್ಯಾಂಕ್ ಗೆ ಮಳೆ ನೀರು ಮಿಶ್ರಣವಾಗಿದೆ. ಇದೇ ಡೀಸೆಲ್ ಅನ್ನು ಬಸ್ ಗಳಿಗೆ ಹಾಕಿದ್ದರಿಂದ ಬಸ್ ಗಳು ಕೆಟ್ಟು ನಿಂತಿದ್ದು, ಡಿಪೋದಿಂದ ಹೊರಡ ಬೇಕಿದ್ದ ಸುಮಾರು 20ಕ್ಕೂ ಅಧಿಕ ಬಸ್ ಗಳು ಅಲ್ಲಿಯೇ ಉಳಿಯುವಂತಾಗಿದೆ. ಪ್ರಮುಖವಾಗಿ ಡಿಪೋದಲ್ಲಿದ್ದ ಸುಮಾರು 20 ವೋಲ್ವೋ ಬಸ್ ಗಳು ಕೆಟ್ಟು ನಿಂತಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.